Ecuador Earthquake : 6.8 ತೀವ್ರತೆಯ ಭೂಕಂಪ, 13 ಕ್ಕೂ ಹೆಚ್ಚು ಜನ ಮೃತ

Ecuador Earthquake Updates: ದಕ್ಷಿಣ ಅಮೆರಿಕದ ಈಕ್ವೆಡಾರ್‌ನಲ್ಲಿ ಭಾರಿ ಭೂಕಂಪ ಸಂಭವಿಸಿದೆ. ಭೂಕಂಪದಿಂದಾಗಿ ನಗರದಾದ್ಯಂತ ಅಪಾರ ಹಾನಿಯಾಗಿದೆ. ಭೂಕಂಪದಿಂದಾಗಿ 13 ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಹಲವಾರು ಮಂದಿ ಗಾಯಗೊಂಡಿದ್ದಾರೆ.   

Written by - Chetana Devarmani | Last Updated : Mar 19, 2023, 09:57 AM IST
  • 6.8 ತೀವ್ರತೆಯ ಭೂಕಂಪ
  • ದಕ್ಷಿಣ ಅಮೆರಿಕದ ಈಕ್ವೆಡಾರ್‌ ನಗರ
  • 13 ಕ್ಕೂ ಹೆಚ್ಚು ಜನ ಮೃತ
Ecuador Earthquake : 6.8 ತೀವ್ರತೆಯ ಭೂಕಂಪ, 13 ಕ್ಕೂ ಹೆಚ್ಚು ಜನ ಮೃತ  title=
Earthquake

Ecuador Earthquake News Updates: ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೂಕಂಪದಿಂದ ಉಂಟಾದ ವಿನಾಶವನ್ನು ಮರೆಯುವ ಮುನ್ನವೇ, ವಿಶ್ವದಾದ್ಯಂತ ಅನೇಕ ದೇಶಗಳಲ್ಲಿ ಸರಣಿ ಭೂಕಂಪಗಳು ಸಂಭವಿಸುತ್ತಿವೆ. ಇದರಿಂದ ಜನರು ಭಯಭೀತರಾಗಿದ್ದಾರೆ. ಇದೀಗ ದಕ್ಷಿಣ ಅಮೆರಿಕದ ಈಕ್ವೆಡಾರ್‌ನಲ್ಲಿ ಭಾರಿ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 6.7ರಷ್ಟು ತೀವ್ರತೆ ದಾಖಲಾಗಿದೆ. ಭೂಕಂಪದಿಂದಾಗಿ ನಗರದಾದ್ಯಂತ ಅಪಾರ ಹಾನಿಯಾಗಿದೆ. ಮನೆಗಳ ಜತೆಗೆ ಹಲವು ಕಟ್ಟಡಗಳು ಸಂಪೂರ್ಣ ಹಾನಿಗೀಡಾಗಿವೆ. ಇದುವರೆಗೆ 13 ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಅಮೆರಿಕದ ಈಕ್ವೆಡಾರ್ ನಲ್ಲಿ ಭೂಕಂಪ ಸಂಭವಿಸಿದ ತಕ್ಷಣ ಇಡೀ ನಗರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಜನರು ಮನೆಯಿಂದ ಹೊರಗೆ ಓಡಿಬಂದರು. ಭೂಕಂಪದ ಕೇಂದ್ರವು ಗುಯಾಸ್‌ನಿಂದ ದಕ್ಷಿಣಕ್ಕೆ 80 ಕಿಮೀ ದೂರದಲ್ಲಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಶಾಂತಿ ಕಾಪಾಡುವಂತೆ ಈಕ್ವೆಡಾರ್ ಅಧ್ಯಕ್ಷ ಗಿಲ್ಲೆರ್ಮೊ ಲಾಸ್ಸೊ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಎಲ್ಲ ಇಲಾಖೆಗಳ ಅಧಿಕಾರಿಗಳು ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ. ಭೂಕಂಪದ ಹಾನಿಯನ್ನು ತಕ್ಷಣ ಸರಿಪಡಿಸಲು ಸಾಕಷ್ಟು ಆರ್ಥಿಕ ಸಂಪನ್ಮೂಲವಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : Serpens Catus : ನಿಗೂಢ ಅಮೆಜಾನ್‌ ಕಾಡಿನಲ್ಲಿ ವಿಸ್ಮಯಕಾರಿ ʼಸ್ನೇಕ್‌ ಕ್ಯಾಟ್‌ʼ ಪತ್ತೆ..!

ಭೂಕಂಪದಿಂದಾಗಿ ಎಲ್ ಒರೊ ಪ್ರಾಂತ್ಯದಲ್ಲಿ 12 ಜನರು ಸಾವನ್ನಪ್ಪಿದ್ದಾರೆ ಎಂದು ಪ್ರೆಸಿಡೆನ್ಸಿ ಕಮ್ಯುನಿಕೇಷನ್ ಏಜೆನ್ಸಿ ಹೇಳಿದೆ. ಅಜುವೆ ಪ್ರಾಂತ್ಯದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. 120ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಹಲವೆಡೆ ವಿದ್ಯುತ್‌ ಪೂರೈಕೆ ಸ್ಥಗಿತಗೊಂಡಿದೆ. ಹಲವು ಕಟ್ಟಡಗಳಿಗೂ ಹಾನಿಯಾಗಿದೆ. ಭೂಕಂಪದಿಂದಾಗಿ ಸುನಾಮಿ ಬರುವ ಸಾಧ್ಯತೆ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭೂಕಂಪದಿಂದಾಗಿ ಭೂಕುಸಿತ ಉಂಟಾಗಿ ರಾಷ್ಟ್ರೀಯ ಹೆದ್ದಾರಿಗಳನ್ನು ಮುಚ್ಚಲಾಗಿದೆ. ಸಾಂಟಾ ರೋಸಾ ವಿಮಾನ ನಿಲ್ದಾಣಕ್ಕೆ ಸ್ವಲ್ಪ ಹಾನಿಯಾಗಿದೆ. ರಾಜ್ಯ ತೈಲ ಕಂಪನಿ ಪೆಟ್ರೋ ಈಕ್ವೆಡಾರ್ ಎಚ್ಚರಿಕೆಯಿಂದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ. ಕಟ್ಟಡಗಳನ್ನು ತೆರವು ಮಾಡಲಾಯಿತು.

"ಇದ್ದಕ್ಕಿದ್ದಂತೆ ನಮಗೆ ನೆಲ ಅಲುಗಾಡಲು ಆರಂಭಿಸಿತು. ನಾವೆಲ್ಲರೂ ಬೀದಿಗೆ ಓಡಿ ಬಂದೆವು. ನಮಗೆ ತುಂಬಾ ಭಯವಾಯಿತು" ಎಂದು ಭೂಕಂಪದ ಕೇಂದ್ರದ ಬಳಿ ಇರುವ ಇಸ್ಲಾ ಪುನಾ ನಿವಾಸಿ ಅರ್ನೆಸ್ಟೊ ಅಲ್ವಾರಾಡೊ ಹೇಳಿದರು. 

ಇದನ್ನೂ ಓದಿ : ಯುದ್ಧಾಪರಾಧ ಆರೋಪದಡಿ ರಷ್ಯಾ ಅಧ್ಯಕ್ಷ ಪುಟಿನ್ ವಿರುದ್ಧ ಬಂಧನ ವಾರೆಂಟ್ ಜಾರಿಗೊಳಿಸಿದ ಅಂತರರಾಷ್ಟ್ರೀಯ ನ್ಯಾಯಾಲಯ!

ಟರ್ಕಿಯಲ್ಲಿ ಭೂಕಂಪದಿಂದ 50 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದಿದೆ. ಫೆಬ್ರವರಿ 6 ರಂದು ಟರ್ಕಿಯಲ್ಲಿ ಭೂಕಂಪ ಸಂಭವಿಸಿತ್ತು. ರಿಕ್ಟರ್ ಮಾಪಕದಲ್ಲಿ 7.8ರಷ್ಟು ತೀವ್ರತೆ ದಾಖಲಾಗಿದೆ. ಭೂಕಂಪದ ಕೇಂದ್ರಬಿಂದು ದಕ್ಷಿಣ ಟರ್ಕಿಯ ಗಾಜಿಯಾಂಟೆಪ್‌ನಲ್ಲಿತ್ತು. ಈ ಭಾರಿ ಭೂಕಂಪದಿಂದ ಟರ್ಕಿ ಮತ್ತು ಸಿರಿಯಾದ ಜನರು ಚೇತರಿಸಿಕೊಳ್ಳುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News