ನವದೆಹಲಿ: ನೇಪಾಳ ಪ್ರಧಾನಿ ಶೇರ್ ಬಹದ್ದೂರ್ ಡಿಯುಬಾ ಅವರು ಭಾನುವಾರ (ಜುಲೈ 18) 275 ಸದಸ್ಯರ ಸದನದಲ್ಲಿ 165 ಮತಗಳೊಂದಿಗೆ ವಿಶ್ವಾಸ ಮತವನ್ನು ಗೆದ್ದಿದ್ದಾರೆ.ಸಂಸತ್ತಿನ ವಿಶ್ವಾಸ ಮತವನ್ನು ಗೆಲ್ಲಲು ಅವರಿಗೆ ಕನಿಷ್ಠ 136 ಮತಗಳ ಅಗತ್ಯವಿತ್ತು.


COMMERCIAL BREAK
SCROLL TO CONTINUE READING

75 ವರ್ಷದ ನೇಪಾಳಿ ಕಾಂಗ್ರೆಸ್ ಅಧ್ಯಕ್ಷರು ಜುಲೈ 13 ರಂದು ಪ್ರಮಾಣವಚನವನ್ನು ಸ್ವೀಕರಿಸಿದ್ದರು.ನೇಪಾಳ (Nepal)ದ ಕಮ್ಯುನಿಸ್ಟ್ ಪಕ್ಷ (ಮಾವೋವಾದಿ ಕೇಂದ್ರ) ಮತ್ತು ಜನತಾ ಸಮಾಜವಾದಿ ಪಕ್ಷ (ಜೆಎಸ್‌ಪಿಯ) ಉಪೇಂದ್ರ ಯಾದವ್ ಬಣ ವಿಶ್ವಾಸಮತದ ಸಮಯದಲ್ಲಿ ಡಿಯುಬಾ ಪರವಾಗಿ ಮತ ಚಲಾಯಿಸಿದವು.ಇದಕ್ಕೂ ಮೊದಲು ದೇಶದ ಸುಪ್ರೀಂ ಕೋರ್ಟ್ ವಿಸರ್ಜಿಸಿದ ಪ್ರತಿನಿಧಿ ಸಭೆಯನ್ನು ಐದು ತಿಂಗಳಲ್ಲಿ ಎರಡನೇ ಬಾರಿಗೆ ಪುನಃ ಸ್ಥಾಪಿಸಿತ್ತು.


ಇದನ್ನೂ ಓದಿ- US Blacklists Chinese Companies: ಚೀನೀ ಕಂಪನಿಗಳ ಬ್ಲಾಕ್ ಲಿಸ್ಟ್, ಸಿಡಿಮಿಡಿಗೊಂಡ ಚೀನಾದಿಂದ USಗೆ ಧಮ್ಕಿ


ಸಂಸತ್ತಿನ ಕೆಳಮನೆಯಲ್ಲಿ, ಆಡಳಿತಾರೂಢ ನೇಪಾಳಿ ಕಾಂಗ್ರೆಸ್ (ಎನ್‌ಸಿ) 61 ಸದಸ್ಯರನ್ನು ಹೊಂದಿದ್ದರೆ, ಅದರ ಸಮ್ಮಿಶ್ರ ಪಾಲುದಾರ ಸ್ಪೀಕರ್ ಸಪ್ಕೋಟಾ ಅವರನ್ನು ಹೊರತುಪಡಿಸಿ ಸಿಪಿಎನ್ (ಮಾವೋವಾದಿ ಕೇಂದ್ರ) 48 ಸದಸ್ಯರನ್ನು ಹೊಂದಿದೆ.


ಇದನ್ನೂ ಓದಿ-Coronavirus Latest News: ಕೊರೊನಾಗೆ ಸಂಬಂಧಿಸದಂತೆ ಬೆಚ್ಚಿಬೀಳಿಸುವ ಮಾಹಿತಿ ಪ್ರಕಟ, ವೈರಸ್ ವಿರುದ್ಧದ ಹೋರಾಟ ಇನ್ನಷ್ಟು ಕಠಿಣ


ಮಾಜಿ ಪಿಎಂ ಕೆಪಿ ಶರ್ಮಾ ಒಲಿ ಅವರ ಪಕ್ಷವಾಗಿರುವ ಮುಖ್ಯ ವಿರೋಧ ಪಕ್ಷದ ಸಿಪಿಎನ್-ಯುಎಂಎಲ್ ಕೆಳಮನೆಯಲ್ಲಿ 121 ಸದಸ್ಯರನ್ನು ಹೊಂದಿದೆ, ಜೆಎಸ್ಪಿ 32 ಸದಸ್ಯರನ್ನು ಹೊಂದಿದೆ ಮತ್ತು ಇತರ ಮೂರು ಫ್ರಿಂಜ್ ಪಕ್ಷಗಳು ತಲಾ ಸದಸ್ಯರನ್ನು ಹೊಂದಿವೆ. ಸ್ವತಂತ್ರ ಶಾಸಕರೂ ಇದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.