Nepal Political Crisis: ನೇಪಾಳ ಪ್ರಧಾನಿ ಕೆ.ಪಿ ಶರ್ಮಾ ಓಲಿಗೆ ಭಾರಿ ಮುಖಭಂಗ, ಶೇರ ಬಹದ್ದೂರ್ ದೇವುಬಾ ಅವರನ್ನು ಪುನಃ ಪ್ರಧಾನಿಯನ್ನಾಗಿ ನೇಮಿಸಲು ಸುಪ್ರೀಂ ಆದೇಶ

Nepal Political Crisis - ನೇಪಾಳದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟಿನ ನಡುವೆಯೇ ಇಂದು ನೇಪಾಳ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಎರಡು ದಿನಗಳಲ್ಲಿ ಶೇರ್ ಬಹದ್ದೂರ್  ದೆವುಬಾ ಅವರನ್ನು ಪ್ರಧಾನಿಯಾಗಿ ನೇಮಕ ಮಾಡುವಂತೆ ನೇಪಾಳ ಸುಪ್ರೀಂ ಕೋರ್ಟ್ ಆದೇಶಿಸಿದೆ.

Written by - Nitin Tabib | Last Updated : Jul 12, 2021, 04:58 PM IST
  • ನೇಪಾಳ ರಾಜಕೀಯ ಬಿಕ್ಕಟ್ಟಿನಲ್ಲಿ ಮಹತ್ವದ ತಿರುವು.
  • ಶೇರ್ ಬಹದ್ದೂರ್ ದೇವುಬಾ ಅವರನ್ನು ಪುನಃ ಪ್ರಧಾನಿಯನ್ನಾಗಿಸಲು ಸುಪ್ರೀಂ ಆದೇಶ.
  • ಮುಂದಿನ ಎರಡು ದಿನಗಳಲ್ಲಿ ಆದೇಶದ ಪಾಲನೆಯಾಗಬೇಕು ಎಂದ ಸರ್ವೋಚ್ಛ ನ್ಯಾಯಾಲಯ.
Nepal Political Crisis: ನೇಪಾಳ ಪ್ರಧಾನಿ ಕೆ.ಪಿ ಶರ್ಮಾ ಓಲಿಗೆ ಭಾರಿ ಮುಖಭಂಗ, ಶೇರ ಬಹದ್ದೂರ್ ದೇವುಬಾ ಅವರನ್ನು ಪುನಃ ಪ್ರಧಾನಿಯನ್ನಾಗಿ ನೇಮಿಸಲು ಸುಪ್ರೀಂ ಆದೇಶ title=
Nepal Political Crisis (File Photo-Sher Bahadur Deuba)

ಕಠ್ಮಂಡು: Nepal Political Crisis - ನೇಪಾಳದಲ್ಲಿ (Nepal) ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟಿನ ನಡುವೆಯೇ ಇಂದು ನೇಪಾಳ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಎರಡು ದಿನಗಳಲ್ಲಿ ಶೇರ್ ಬಹದ್ದೂರ್  ದೆವುಬಾ (Sher Bahadur Deuba) ಅವರನ್ನು ಪ್ರಧಾನಿಯಾಗಿ ನೇಮಕ ಮಾಡುವಂತೆ ನೇಪಾಳ ಸುಪ್ರೀಂ ಕೋರ್ಟ್ (Nepal Supreme Court) ಆದೇಶಿಸಿದೆ. ನೇಪಾಳದ ರಾಷ್ಟ್ರಪತಿ ವಿದ್ಯಾ ಭಂಡಾರಿ (President Vidya Bhandari) ಕೆಲ ದಿನಗಳ ಹಿಂದೆಯಷ್ಟೇ ಸಂಸತ್ತನ್ನು ವಿಸರ್ಜಿಸಿದ್ದರು. ರಾಷ್ಟ್ರಪತಿಗಳ ನಿರ್ಧಾರದ ವಿರುದ್ಧ ಸಲ್ಲಿಸಲಾದ ಅರ್ಜಿಯ ವಿಚಾರಣೆಯ ವೇಳೆ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ. ಸುಪ್ರೀಂ ಕೋರ್ಟ್‌ನ ಈ ಆದೇಶದ ನಂತರ ನೇಪಾಳದಲ್ಲಿ ಹಲವು ತಿಂಗಳುಗಳಿಂದ ನಡೆಯುತ್ತಿರುವ ರಾಜಕೀಯ ನಾಟಕಕ್ಕೆ ತೆರೆಬೀಳಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.

ನೇಪಾಳದ ಹಾಲಿ ಪ್ರಧಾನಿ ಕೆ.ಪಿ.ಶರ್ಮಾ ಓಲಿ (K.P.Sharma Oli) ಅವರ ಶಿಫಾರಸ್ಸಿನ ಮೇರೆಗೆ ಅಲ್ಲಿನ ರಾಷ್ಟ್ರಪತಿ  ವಿದ್ಯಾ ಭಂಡಾರಿ ಅವರು ಐದು ತಿಂಗಳಲ್ಲಿ ಎರಡು ಬಾರಿ ಸಂಸತ್ತಿನ ಕೆಳಮನೆ ವಿಸರ್ಜಿಸಿದ್ದರು. ಸಂಸತ್ತಿನ ವಿಸರ್ಜನೆಯ ನಂತರ, ನವೆಂಬರ್ 12 ಮತ್ತು 19 ರಂದು ಮಧ್ಯಂತರ ಚುನಾವಣೆಗಳನ್ನು ನಡೆಸುವುದಾಗಿ ಘೋಷಿಸಲಾಗಿತ್ತು.

ಇದನ್ನೂ ಓದಿ- US Blacklists Chinese Companies: ಚೀನೀ ಕಂಪನಿಗಳ ಬ್ಲಾಕ್ ಲಿಸ್ಟ್, ಸಿಡಿಮಿಡಿಗೊಂಡ ಚೀನಾದಿಂದ USಗೆ ಧಮ್ಕಿ

ಚುನಾವಣೆಗೆ ಸಂಬಂಧಿಸಿದನೆ ಹಾಗೂ ರಾಷ್ಟ್ರಪತಿಗಳ ನಿರ್ಧಾರದ ವಿರುದ್ಧ ನೇಪಾಲದ ಸರ್ವೋಚ್ಛ ನ್ಯಾಯಾಲಯದಲ್ಲಿ ಸುಮಾರು 30 ಅರ್ಜಿಗಳನ್ನು ದಾಖಲಿಸಲಾಗಿತ್ತು.  275 ಸದಸ್ಯ ಬಲ ಹೊಂದಿರುವ ಸದನದಲ್ಲಿ ನಡೆದ ವಿಶ್ವಾಸ ಮತಯಾಚನೆಯ ಸಂದರ್ಭದಲ್ಲಿ  ಓಲಿ ಸೋಲನ್ನನುಭವಿಸಿದ ನಂತರವೂ ಕೂಡ  ಅಲ್ಪಸಂಖ್ಯಾತ ಸರ್ಕಾರವನ್ನು ಮುನ್ನಡೆಸುತ್ತಿದ್ದಾರೆ. ಸುಪ್ರೀಂ ಕೋರ್ಟ್‌ನ ಈ ಆದೇಶದ ನಂತರ, ಅಧಿಕಾರ ಮತ್ತೆ ಅವರ ಕೈಜಾರಲಿದೆ.

ಇದನ್ನೂ ಓದಿ-Coronavirus Latest News: ಕೊರೊನಾಗೆ ಸಂಬಂಧಿಸದಂತೆ ಬೆಚ್ಚಿಬೀಳಿಸುವ ಮಾಹಿತಿ ಪ್ರಕಟ, ವೈರಸ್ ವಿರುದ್ಧದ ಹೋರಾಟ ಇನ್ನಷ್ಟು ಕಠಿಣ

ರಾಷ್ಟ್ರಪತಿಗಳ ನಿರ್ಧಾರವನ್ನು ವಿರೋಧಿಸಿ ಅಲ್ಲಿನ ವಿರೋಧ ಪಕ್ಷಗಳ ಒಕ್ಕೂಟದ ಪರವಾಗಿ ಮನವಿ ಸಲ್ಲಿಸಲಾಗಿತ್ತು. ಈ ಅರ್ಜಿಯಲ್ಲಿ, ಸಂಸತ್ತಿನ ಕೆಳಮನೆ ವಿಸರ್ಜಿಸಲು ರಾಷ್ಟ್ರಪತಿಗಳ ಆದೇಶವನ್ನು ರದ್ದುಪಡಿಸಬೇಕು ಮತ್ತು ನೇಪಾಳಿ ಕಾಂಗ್ರೆಸ್ ಅಧ್ಯಕ್ಷ ಶೇರ್ ಬಹದ್ದೂರ್ ದೇವುಬಾ  ಅವರನ್ನು ಪುನಃ ಪ್ರಧಾನ ಮಂತ್ರಿಯಾಗಿ ನೇಮಿಸಬೇಕು ಎಂದುಕೋರಲಾಗಿತ್ತು. ಪ್ರತಿಪಕ್ಷಗಳು ಸಲ್ಲಿಸಿದ್ದ ಈ ಅರ್ಜಿಗೆ 146 ಸಂಸದರು ಸಹಿ ಹಾಕಿದ್ದರು.

ಇದನ್ನೂ ಓದಿ-Study: ಈ ಜನರು Coronavirus ಸೋಂಕಿಗೆ ಗುರಿಯಾಗುವ ಸಾಧ್ಯತೆ ಹೆಚ್ಚು ಎನ್ನುತ್ತೆ ಸಂಶೋಧನೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News