ನವದೆಹಲಿ: ನೆಟ್ಫ್ಲಿಕ್ಸ್ ನಿಮ್ಮ ಇಂಟರ್ನೆಟ್ ಬಿಲ್ಗಳನ್ನು ಮಾತ್ರ ಹೆಚ್ಚಿಸುತ್ತದೆ ಎಂದು ನೀವು ಭಾವಿಸಿದರೆ, ಇತ್ತೀಚಿನ ವರದಿಗಳು ಹೇಳುವಂತೆ ವೀಡಿಯೊ ಸ್ಟ್ರೀಮಿಂಗ್ ಸೇವೆ ಜಾಗತಿಕವಾಗಿ ಇಡೀ ಇಂಟರ್ನೆಟ್ ಬ್ಯಾಂಡ್ವಿಡ್ತ್ನಲ್ಲಿ ಗಮನಾರ್ಹ ಪ್ರಮಾಣವನ್ನು ಬಳಕೆಯನ್ನು ಹೊಂದಿದೆ ಎಂದು ಹೇಳಲಾಗಿದೆ.


COMMERCIAL BREAK
SCROLL TO CONTINUE READING

ಸ್ಯಾಂಡ್ವೀನ್ನ ಗ್ಲೋಬಲ್ ಇಂಟರ್ನೆಟ್ ಫಿನೊಮಿನ ವರದಿ ಪ್ರಕಾರ, ವಿಶ್ವಾದ್ಯಂತ ಇಂಟರ್ನೆಟ್ ಟ್ರಾಫಿಕ್ನಲ್ಲಿ ಸುಮಾರು 15 ಪ್ರತಿಶತದಷ್ಟು ನೆಟ್ಫ್ಲಿಕ್ಸ್ ನದ್ದೇ ಇದೆ. ಅಮೆರಿಕಾ ಒಟ್ಟು ಟ್ರಾಫಿಕ್ ನಲ್ಲಿ  ಶೇ 19.1 ರಷ್ಟು ಪಾಲನ್ನು ಹೊಂದಿದೆ, ನಂತರ ಪ್ರೈಮ್ ವೀಡಿಯೊವು 7.7  ಮತ್ತು ಯೂಟ್ಯೂಬ್  ನಲ್ಲಿ 7.5 ರಷ್ಟಿದೆ.


ಬ್ಯಾಂಡ್ವಿಡ್ತ್ ಬಳಕೆಗೆ ಸಂಬಂಧಿಸಿದಂತೆ ನೆಟ್ಫ್ಲಿಕ್ಸ್ ಅತ್ಯಂತ ಸಮರ್ಥ ವಿಡಿಯೋ ಸ್ಟ್ರೀಮಿಂಗ್ ಸೇವೆಯಾಗಿದೆ ಎಂದು ವರದಿ ಹೇಳಿದೆ.


ನೆಟ್ಫ್ಲಿಕ್ಸ್  ನಂತರ HTTP ಮೀಡಿಯಾ ಸ್ಟ್ರೀಮ್ಗಳು,13.1 ರಷ್ಟುಷ್ಟು ಟ್ರಾಫಿಕ್, ಯೂಟ್ಯೂಬ್ 11.4, ವೆಬ್-ಬ್ರೌಸಿಂಗ್ 7.8, ಮತ್ತು MPEG ಟ್ರಾನ್ಸ್ಪೋರ್ಟ್ ಸ್ಟ್ರೀಮ್ಗಳು 4.4 ಪ್ರತಿಶತರಷ್ಟು ಇಂಟರ್ನೆಟ್ ಟ್ರಾಫಿಕ್ ನ್ನು ಹೊಂದಿದೆ.