Mask: ಅಮೇರಿಕನ್ನರಿಗೆ ಬಿಗ್ ರಿಲೀಫ್, Corona vaccine ಪಡೆದವರು ಈ ನಿಯಮ ಪಾಲಿಸುವ ಅಗತ್ಯವಿಲ್ಲ
ಕರೋನಾ ಲಸಿಕೆಯ ಎರಡೂ ಡೋಸ್ ಪಡೆದಿರುವ ಜನರು ಸಂಪೂರ್ಣವಾಗಿ ಸುರಕ್ಷಿತರು ಎಂದು ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಆಫ್ ಯುಎಸ್ ಹೇಳಿದೆ.
ವಾಷಿಂಗ್ಟನ್: ವಿಶ್ವಾದ್ಯಂತ ಕರೋನಾ ಸೋಂಕಿನ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ವಿಶ್ವದ ಕರೋನಾ ಸೋಂಕಿತ ರೋಗಿಗಳ ಸಂಖ್ಯೆ 16 ಕೋಟಿ 17 ಲಕ್ಷ 23 ಸಾವಿರ ದಾಟಿದೆ. ಈ ಮಧ್ಯೆ ಇಡೀ ವಿಶ್ವದಲ್ಲೇ ಕರೋನಾವೈರಸ್ ಮಹಾಮಾರಿಯಿಂದಾಗಿ ಅತಿ ಹೆಚ್ಚು ಪರಿಣಾಮ ಬೀರಿರುವ ಅಮೆರಿಕಕ್ಕೆ ಈಗ ಪರಿಹಾರದ ಸುದ್ದಿ ಬಂದಿದೆ. ಕರೋನಾ ಲಸಿಕೆಯ ಎರಡೂ ಪ್ರಮಾಣವನ್ನು ತೆಗೆದುಕೊಂಡ ಜನರು ಸಂಪೂರ್ಣವಾಗಿ ಸುರಕ್ಷಿತರು ಎಂದು ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಆಫ್ ಯುಎಸ್ (ಕರೋನಾ) ಹೇಳಿದೆ.
ಕರೋನಾ ಸೋಂಕನ್ನು ತಡೆಗಟ್ಟಲು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಗಳನ್ನು ಧರಿಸುವುದರ ಜೊತೆಗೆ 6 ಅಡಿ ಸಾಮಾಜಿಕ ಅಂತರವನ್ನು ಅನುಸರಿಸುವ ನಿಯಮ ಇದುವರೆಗೆ ಕಡ್ಡಾಯವಾಗಿತ್ತು. ಆದರೆ ಇದೀಗ ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಪ್ರಕಾರ, ಕರೋನಾ ಲಸಿಕೆಯ (Corona vaccine)ಯ ಎರಡೂ ಡೋಸ್ ಪಡೆದಿರುವವರು ಮಾಸ್ಕ್ ಮತ್ತು ಸಾಮಾಜಿಕ ಅಂತರವನ್ನು ಅನುಸರಿಸದೆ ಚಟುವಟಿಕೆಗಳನ್ನು ಪುನರಾರಂಭಿಸಬಹುದು ಎಂದು ತಿಳಿದುಬಂದಿದೆ.
ಇದನ್ನೂ ಓದಿ - Coronavirus: ಭಾರತದಲ್ಲಿ ಕರೋನಾ ಅನಿಯಂತ್ರಿತವಾಗಲು ಕಾರಣ ಬಿಚ್ಚಿಟ್ಟ WHO
ಕರೋನಾವೈರಸ್ (Coronavirus) ಸೋಂಕಿತ ರೋಗಿಗಳ ಸಂಖ್ಯೆಯಲ್ಲಿ ಅಮೆರಿಕ ವಿಶ್ವದಲ್ಲೇ ಅಗ್ರಸ್ಥಾನದಲ್ಲಿದೆ. ಅಮೇರಿಕಾದಲ್ಲಿ ಇಲ್ಲಿಯವರೆಗೆ 3,36,15,000 ಕರೋನಾ ಪ್ರಕರಣಗಳು ವರದಿಯಾಗಿವೆ. ಇಲ್ಲಿಯವರೆಗೆ 5 ಲಕ್ಷ 98 ಸಾವಿರ ಜನರು ಸಾವನ್ನಪ್ಪಿದ್ದಾರೆ. ಪ್ರಸ್ತುತ ಯುಎಸ್ನಲ್ಲಿ 63 ಲಕ್ಷ 58 ಸಾವಿರಕ್ಕಿಂತ ಹೆಚ್ಚು ಕರೋನಾ ಸಕ್ರಿಯ ಪ್ರಕರಣಗಳಿವೆ. ಯುಎಸ್ನಲ್ಲಿ ಇದುವರೆಗೆ 26.6 ಮಿಲಿಯನ್ ಕರೋನಾ ಸೊಂಕಿತರನ್ನು ಚಿಕಿತ್ಸೆಯಿಂದ ಗುಣಪಡಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಇದನ್ನೂ ಓದಿ - "ಕರೋನವೈರಸ್ ಮತ್ತೊಮ್ಮೆ ಹೊರಹೊಮ್ಮಬಹುದು, ಅದು ಗರಿಷ್ಟ ಮಟ್ಟಕ್ಕೆ ತಲುಪಬಹುದು"
ನಿಯಮ ಸರಳವಾಗಿದೆ ಲಸಿಕೆ ಪಡೆಯಿರಿ ಅಥವಾ ಮಾಸ್ಕ್ ಧರಿಸಿ: ಜೋ ಬಿಡೆನ್
ಯುಎಸ್ ಅಧ್ಯಕ್ಷ ಜೋ ಬಿಡನ್ (Joe Biden) ಅವರು ಯುನೈಟೆಡ್ ಸ್ಟೇಟ್ಸ್ನ ನಾಗರಿಕರು ಕರೋನಾ ಲಸಿಕೆಯ ಎರಡೂ ಪ್ರಮಾಣವನ್ನು ತೆಗೆದುಕೊಂಡಿದ್ದರೆ, ಅವರು ಇನ್ನು ಮುಂದೆ ಮಾಸ್ಕ್ ಧರಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಇಂದು ಉತ್ತಮ ದಿನವಾಗಿದೆ. ಒಂದು ವರ್ಷದ ಕಠಿಣ ಪರಿಶ್ರಮ ಮತ್ತು ತ್ಯಾಗದ ನಂತರ, ಈಗ ನಾವು ಮಾಸ್ಕ್ ಮುಕ್ತರಾಗುವತ್ತ ಸಾಗುತ್ತಿದ್ದೇವೆ. ನಮ್ಮ ನಿಯಮವು ತುಂಬಾ ಸರಳವಾಗಿದೆ ಎಂದು ನಾನು ಹೇಳುತ್ತೇನೆ, ನೀವು ಲಸಿಕೆ ಪಡೆಯಿರಿ ಅಥವಾ ಸದಾ ಮಾಸ್ಕ್ ಧರಿಸಿ ಎಂದು ಜೋ ಬಿಡೆನ್ ಹೇಳಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.