Covid-19 Vaccine:ವ್ಯಾಕ್ಸಿನ್ ಹಾಕಿಸಿಕೊಂಡ ಬಳಿಕ ಮದ್ಯ ಸೇವನೆ ಮಾಡಬಹುದೇ? ಇಲ್ಲಿದೆ ಉತ್ತರ

Covid-19 Vaccine: ಕೊವಿಡ್-19 ಲಸಿಕೆ ಹಾಕಿಸಿಕೊಂಡ ಬಳಿಕ ಅಲ್ಕೋಹಾಲ್ ನಿಂದ ದೂರ ಉಳಿಯಬೇಕೆ? ನಿಯಂತ್ರಕ ಸಂಸ್ಥೆಗಳು ಅಲ್ಕೋಹಾಲ್ ಸೇವನೆ ಹಾಗೂ ಲಸಿಕಾಕರಣದ ಕುರಿತು ಏನು ಹೇಳುತ್ತವೆ? ಪ್ರಸ್ತುತ ಭಾರತದಲ್ಲಿ ನಿಯಮಗಳಲ್ಲಿ ಸಡಿಲಿಕೆ ತಂದು ಮೇ 1 ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಲಸಿಕಾಕರಣ ಅಭಿಯಾನ ಆರಂಭಿಸಿದೆ ಹಾಗೂ ಇಂದಿಗೂ ಕೂಡ ಜನರ ಮನಸ್ಸಿನಲ್ಲಿ ಲಸಿಕೆಯ ಕುರಿತು ಹಲವು ರೀತಿಯ ಶಂಕೆಗಳಿವೆ 

Written by - Nitin Tabib | Last Updated : May 12, 2021, 10:01 PM IST
  • ಲಸಿಕೆ ಹಾಕಿಸಿಕೊಂಡವರು ಅಲ್ಕೋಹಾಲ್ ನಿಂದ ದೂರ ಉಳಿಯಬೇಕೆ?
  • ಈ ಕುರಿತು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದ್ದೇನು?
  • ನಿಯಂತ್ರಕ ಸಂಸ್ಥೆಗಳು ಲಸಿಕಾಕರಣ ಹಾಗೂ ಅಲ್ಕೋಹಾಲ್ ಕುರಿತು ಏನು ಹೇಳುತ್ತವೆ?
Covid-19 Vaccine:ವ್ಯಾಕ್ಸಿನ್ ಹಾಕಿಸಿಕೊಂಡ ಬಳಿಕ ಮದ್ಯ ಸೇವನೆ ಮಾಡಬಹುದೇ? ಇಲ್ಲಿದೆ ಉತ್ತರ title=
Covid-19 Vaccine And Alcohol (File Photo)

ನವದೆಹಲಿ: Covid-19 Vaccine - ದೇಶಾದ್ಯಂತ ಮೇ 1 ರಿಂದ 18 ವಯಸ್ಸಿಗಿಂತ ಮೇಲ್ಪಟ್ಟ ಜನರಿಗೆ ಲಸಿಕಾಕರಣ ಅಭಿಯಾನ ಆರಂಭಗೊಂಡಿದೆ. ಕೊರೊನಾ ವೈರಸ್ ನಿಂದ ರಕ್ಷಣೆ ಪಡೆಯಲು ಅಪಾರ ಸಂಖ್ಯೆಯಲ್ಲಿ ಜನರು ಲಸಿಕಾಕರಣ ಕೇಂದ್ರಕ್ಕೆ ಧಾವಿಸುತ್ತಿದ್ದಾರೆ. ಏತನ್ಮಧ್ಯೆ ಲಸಿಕಾಕರಣ ಹಾಗೂ ಮದ್ಯ ವಿಷಯ ಅತಿ ಹೆಚ್ಚು ಪ್ರಶ್ನೆಗೆ ಒಳಗಾದ ವಿಷಯವಾಗಿ ಹೊರಹೊಮ್ಮುತ್ತಿದೆ. ಕೊವಿಡ್-19 (Covid-19) ಲಸಿಕೆ ಹಾಕಿಸಿಕೊಳ್ಳುವುದರ ಅರ್ಥ No Alcohol? ಕೊವಿಡ್ -19 ಲಸಿಕೆ ಹಾಕಿಸಿಕೊಂಡ ಬಳಿಕ ಅಲ್ಕೋಹಾಲ್ ಸೇವನೆಯಿಂದ ದೂರ ಉಳಿಯಬೇಕೆ?

ಈ ಕುರಿತು ಸ್ಪಷ್ಟನೆ ನೀಡಿರುವ ಆರೋಗ್ಯ ಸಚಿವಾಲಯ, "ವ್ಯಾಕ್ಸಿನ್ ನ ಮೊದಲ ಪ್ರಮಾಣ ಹಾಕಿಸಿಕೊಂಡಿರುವಿರಿ ಎಂಬ ಒಂದೇ ಕಾರಣಕ್ಕೆ ಅಲ್ಕೋಹಾಲ್ (Alcohol) ನಿಂದ ದೂರ ಉಳಿಯುವ ಅವಶ್ಯಕತೆ ಇಲ್ಲ. ಏಕೆಂದರೆ ಅಲ್ಕೋಹಾಲ್ ಸ್ವತಃ ತಾನೇ ಕೊರೊನಾ ವೈರಸ್ (Coronavaccine) ಸೋಂಕಿನ ವಿರುದ್ಧ ವ್ಯಾಕ್ಸಿನ್ ಪ್ರಭಾವವನ್ನು ಕಡಿಮೆ ಮಾಡುವುದಿಲ್ಲ" ಎಂದಿದೆ

ಅಲ್ಕೋಹಾಲ್ ಹಾಗೂ ವ್ಯಾಕ್ಸಿನ್ ಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿರುವ ಸರ್ಕಾರ, "ತಜ್ಞರು ಹೇಳುವ ಪ್ರಕಾರ ಅಲ್ಕೋಹಾಲ್, ವ್ಯಾಕ್ಸಿನ್ ಪ್ರಭಾವವನ್ನು ಕಡಿಮೆಗೊಳಿಸುತ್ತದೆ ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ" ಎಂದು ಹೇಳಿದೆ.

ಇದನ್ನೂ ಓದಿ- Alcohol ಸೇವನೆಯ ಬಳಿಕ ಜನ English ಯಾಕೆ ಮಾತನಾಡುತ್ತಾರೆ? ಬಹಿರಂಗಗೊಂಡ ಸತ್ಯ ಇದು

ನಿಯಂತ್ರಕ ಸಂಸ್ಥೆಗಳು ಲಸಿಕಾಕರಣ ಹಾಗೂ ಅಲ್ಕೋಹಾಲ್ ಕುರಿತು ಏನು ಹೇಳುತ್ತವೆ?
ಅಮೆರಿಕಾದ ಆರೋಗ್ಯ ಸಂಸ್ಥೆ CDC ಆಗಲಿ ಅಥವಾ ಸರ್ಕಾರ ಆಗಲಿ ಅಥವಾ ಬ್ರಿಟನ್ ನ ಹೆಲ್ತ್ ಇಂಗ್ಲೈಂಗ್ ಈ ರೀತಿಯ ಯಾವುದೇ ಸಾಧ್ಯತೆಗಳನ್ನು ವರ್ತಿಸಿಲ್ಲ. ವ್ಯಾಕ್ಸಿನ್ ಡೋಸ್ ಹಾಕಿಸಿಕೊಂಡ ಬಳಿಕ, ನಡುವೆ ಅಥವಾ ಮೊದಲು ಅಲ್ಕೋಹಾಲ್ ಸೇವಿಸಬಹುದೇ? ಎಂಬ ಪ್ರಶ್ನೆ ಕೇಳಲಾಗಿ, ಬ್ರಿಟನ್ ನ ಆರೋಗ್ಯ ನಿಯಂತ್ರಕ ಸಂಸ್ಥೆ ಮೆಡಿಸಿನ್ಸ್ ಅಂಡ್ ಹೆಲ್ತ್ ಕೆಯರ್ ಪ್ರಾಡಕ್ಟ್ಸ್ ರೆಗ್ಯುಲೆಟರಿ ಏಜೆನ್ಸಿ, "ಅಲ್ಕೋಹಾಲ್ (Alcohol), ಕೊವಿಡ್ ವ್ಯಾಕ್ಸಿನ್ ನ ಪ್ರಭಾವ ಪ್ರಭಾವಿತಗೊಳ್ಳುತ್ತದೆ ಅಥವಾ ಹಸ್ತಕ್ಷೇಪ ಮಾಡುತ್ತದೆ ಎಂಬುದಕ್ಕೆ ವರ್ತಮಾನದಲ್ಲಿ ಯಾವುದೇ ಸಾಕ್ಷಾಧಾರಗಳಿಲ್ಲ. ಈ ಕುರಿತು ನೀವು ನಿಮ್ಮ ಆರೋಗ್ಯ ಚಿಕಿತ್ಸಕರ ಜೊತೆಗೆ ಮಾತುಕತೆ ನಡೆಸಬೇಕು ಎಂಬುದನ್ನು ನಾವು ಸಲಹೆ ನೀಡುತ್ತೇವೆ" ಎಂದಿದೆ.

ಇದನ್ನೂ ಓದಿ- Covid Vaccine ಪಡೆಯುವವರು ಎಷ್ಟು ದಿನ ಆಲ್ಕೋಹಾಲ್ ಕುಡಿಯಬಾರದು? ತಜ್ಞರು ಏನ್ ಹೇಳ್ತಾರೆ

ಲಸಿಕಾಕರಣದ (Covid-19 Vaccination) ಅನುಭವದಿಂದ ಉತ್ಪನ್ನಗೊಂಡ ಸಾಕ್ಷ್ಯಗಳು ಏನನ್ನು ಹೇಳುತ್ತವೆ?
ಈ ಕುರಿತು ಬ್ಲೂಮ್ ಬರ್ಗ್ ಸಂಗ್ರಹಿಸಿರುವ ದತ್ತಾಂಶಗಳ ಪ್ರಕಾರ, ಮಾರ್ಚ್ 31ರವರೆಗೆ ಒಟ್ಟು 141 ದೇಶಗಳಲ್ಲಿ ಹಲವು ಕೊವಿಡ್ 19 ವ್ಯಾಕ್ಸಿನ್ ಗಳ 574 ಮಿಲಿಯ ಗೂ ಅಧಿಕ ಡೋಸ್ ಗಳನ್ನು ಜನರಿಗೆ ನೀಡಲಾಗಿದೆ. ಅಮೇರಿಕಾದಲ್ಲಿ ಕೊವಿಡ್-19 ವ್ಯಾಕ್ಸಿನ್ ನ 148 ಮಿಲಿಯನ್ ಡೋಸ್ ಗಳನ್ನು ನೀಡಲಾಗಿದೆ ಹಾಗೂ ಒಟ್ಟು ಜನಸಂಖ್ಯೆಯ ಶೇ. 23 ರಷ್ಟು ಜನರನ್ನು ಕವರ್ ಮಾಡಲಾಗಿದೆ. ಬ್ರಿಟನ್ ನಲ್ಲಿ 35 ಮಿಲಿಯನ್ ಪ್ರಮಾಣಗಳನ್ನೂ ಜನರು ಬಳಸಿದ್ದಾರೆ. ಅಂದರೆ, ಸುಮಾರು ಶೇ.26 ರಷ್ಟು ಜನಸಂಖ್ಯೆಯನ್ನು ಕವರ್ ಮಾಡಲಾಗಿದೆ. ಭಾರತದ ಕುರಿತು ಹೇಳುವುದಾದರಇದುವರೆಗೆ ಸುಮಾರು 62 ಮಿಲಿಯನ್ ಕೊವಿಡ್-19 ಲಸಿಕಯ ಡೋಸ್ ಬಳಕೆಯಾಗಿವೆ. ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಇದುವರೆಗೆ ಅಲ್ಕೋಹಾಲ್ ಸೇವನೆಯ ಫಲಿತಾಂಶಗಳಲ್ಲಿ ವ್ಯಾಕ್ಸಿನ್ ನ ಪ್ರಭಾವದಲ್ಲಿ ಇಳಿಕೆಯಾದ ಯಾವುದೇ ವರದಿ ಇಲ್ಲ. ವಿಶ್ವಾದ್ಯಂತ ದೊಡ್ಡ ಸಂಖ್ಯೆಯಲ್ಲಿ ವೈದ್ಯರು, ಅಲ್ಕೋಹಾಲ್ ಆಂಟಿಬಾಡಿಗಳ ನಿರ್ಮಾಣದಲ್ಲಿ ಅಡೆತಡೆ ಉಂಟುಮಾಡುವುದಿಲ್ಲ ಎಂದು ಹೇಳುತ್ತಾರೆ. 

ಇದನ್ನೂ ಓದಿ-OMG: 10 ಬಾಟಲ್ Beer ಕುಡಿದು ಮತ್ತಿನಲ್ಲಿ 18 ಗಂಟೆ ಮಲಗಿದವನ ಗತಿ ಏನಾಗಿದೆ ಗೊತ್ತಾ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News