ನವದೆಹಲಿ:  Omicron In India - ಕೊರೊನಾ ವೈರಸ್ (Coronavirus) ನ ಹೊಸ ರೂಪಾಂತರಿ ಓಮಿಕ್ರಾನ್  ಬಗ್ಗೆ ಇಡೀ ವಿಶ್ವದಲ್ಲಿಯೇ ಭೀತಿಯ ವಾತಾವರಣ ಸೃಷ್ಟಿಯಾಗಿದೆ.  Omicron ಇದುವರೆಗೆ 38 ದೇಶಗಳಿಗೆ ಹರಡಿದೆ. ಪ್ರತಿದಿನ ಒಮಿಕ್ರಾನ್‌ನ ಹೊಸ ಪ್ರಕರಣಗಳು ಮುಂಚೂಣಿಗೆ ಬರುತ್ತಿವೆ. ಈ ರೂಪಾಂತರವು ಡೆಲ್ಟಾಕ್ಕಿಂತ ಹೆಚ್ಚು ಅಪಾಯಕಾರಿ ಎಂದು ಹೇಳಲಾಗುತ್ತದೆ. ಆದರೂ ಕೂಡ ವಿಜ್ಞಾನಿಗಳಿಗೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಲು ಸಾಧ್ಯವಾಗಿಲ್ಲ. ಏತನ್ಮಧ್ಯೆ, ಒಮಿಕ್ರಾನ್ ಬಗ್ಗೆ ಸಿಂಗಾಪುರದ ಆರೋಗ್ಯ ಸಚಿವಾಲಯವು ಹೇಳಿರುವ ವಿಷಯಗಳು ತುಂಬಾ ಆತಂಕ ಹುಟ್ಟಿಸುವಂತಿವೆ.


COMMERCIAL BREAK
SCROLL TO CONTINUE READING

ಮರು ಸೋಂಕಿನ ಅಪಾಯ (Omicron Symptoms)
ಡೆಲ್ಟಾ ಮತ್ತು ಬೀಟಾಕ್ಕಿಂತ ಓಮಿಕ್ರಾನ್ ಹೆಚ್ಚು ಸಾಂಕ್ರಾಮಿಕವಾಗಿದೆ ಎಂದು ಪ್ರಾಥಮಿಕ ಅಧ್ಯಯನಗಳು ತೋರಿಸುತ್ತವೆ ಎಂದು ಸಿಂಗಾಪುರದ ಆರೋಗ್ಯ ಸಚಿವಾಲಯ ಹೇಳಿದೆ. COVID-19 ನಿಂದ ಚೇತರಿಸಿಕೊಂಡ ಜನರು ಓಮಿಕ್ರಾನ್ ರೂಪಾಂತರದಿಂದ ಮತ್ತೆ ಸೋಂಕಿಗೆ ಒಳಗಾಗುವ ಸಾಧ್ಯತೆಯಿದೆ ಎಂದು ಅದು ಹೇಳಿದೆ. ಲಸಿಕೆಯ ಎರಡೂ ಡೋಸ್‌ಗಳನ್ನು ತೆಗೆದುಕೊಂಡ 37 ವರ್ಷದ ವ್ಯಕ್ತಿಗೂ ಓಮಿಕ್ರಾನ್ ಸೋಂಕಿಗೆ ಒಳಗಾಗಿದ್ದರಿಂದ ಲಸಿಕೆ ಪರಿಣಾಮಕಾರಿತ್ವದ ಬಗ್ಗೆ ಅನುಮಾನಗಳು ಹುಟ್ಟಿಕೊಂಡಿವೆ.


ಇದನ್ನೂ ಓದಿ-COVID-19 ಪ್ರಕರಣಗಳ ಹೆಚ್ಚಳದಿಂದಾಗಿ ರಾಜ್ಯದಲ್ಲಿ ಶಾಲೆಗಳು ಬಂದ್ ಆಗಲಿವೆಯೇ?


ಸಿಂಗಾಪುರದಲ್ಲಿ ಕರೋನಾ ಪರಿಸ್ಥಿತಿ ಹೇಗಿದೆ?
ಸಿಂಗಾಪುರದಲ್ಲಿ ಕಳೆದ 24 ಗಂಟೆಗಳಲ್ಲಿ 552 ಹೊಸ ಕರೋನವೈರಸ್ ಪ್ರಕರಣಗಳು ವರದಿಯಾಗಿವೆ. ಕ್ಸಿನ್ಹುವಾ ನ್ಯೂಸ್ ಏಜೆನ್ಸಿ ಪ್ರಕಾರ, ಹೊಸ ಪ್ರಕರಣಗಳಲ್ಲಿ 523 ಸಮುದಾಯ, 14 ವಲಸೆ ಕಾರ್ಮಿಕರು ಮತ್ತು 15 ಬಾಹ್ಯ  ಪ್ರಕರಣಗಳು ಶಾಮೀಲಾಗಿವೆ. ಭಾನುವಾರದ ವೇಳೆಗೆ ದೇಶದಲ್ಲಿ ಒಟ್ಟು ಕರೋನಾ ಸೋಂಕಿತರ ಸಂಖ್ಯೆಯನ್ನು 269,211 ಕ್ಕೆ ಏರಿಕೆಯಾಗಿದೆ. ಪ್ರಸ್ತುತ, ಆಸ್ಪತ್ರೆಗಳಲ್ಲಿ ಒಟ್ಟು 863 ಕರೋನಾ ಪ್ರಕರಣಗಳಿವೆ, ಅದರಲ್ಲಿ 155 ಸೋಂಕಿತರಿಗೆ ಸಾಮಾನ್ಯ ವಾರ್ಡ್‌ನಲ್ಲಿ ಆಮ್ಲಜನಕದ ಅವಶ್ಯಕತೆ ಇದೆ ಮತ್ತು 6 ಪ್ರಕರಣಗಳು ಅಸ್ಥಿರವಾಗಿದ್ದು, ಐಸಿಯುನಲ್ಲಿ ಅವುಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಅಲ್ಲದೆ 52 ರೋಗಿಗಳು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


ಇದನ್ನೂ ಓದಿ-Omicron ಭೀತಿ ಮಧ್ಯೆಯೇ ತೆಲಂಗಾಣದ 43 ವೈದ್ಯಕೀಯ ವಿದ್ಯಾರ್ಥಿಗಳಿಗೆ ಕೊರೊನಾ ಧೃಢ..!


13 ಜನರು ಸಾವನ್ನಪ್ಪಿದ್ದಾರೆ
ಕಳೆದ 24 ಗಂಟೆಗಳಲ್ಲಿ ಮತ್ತೆ 13 ಜನರು ಕರೋನಾದಿಂದ ಸಾವನ್ನಪ್ಪಿದ್ದಾರೆ ಎಂದು ಸಿಂಗಾಪುರದ ಆರೋಗ್ಯ ಸಚಿವಾಲಯ ತಿಳಿಸಿದೆ,  ಇದರಿಂದ ಸಾವಿನ ಸಂಖ್ಯೆ 759 ಕ್ಕೆ ತಲುಪಿದೆ. ಇದರ ಹೊರತಾಗಿ, ಆರೋಗ್ಯ ಸಚಿವಾಲಯವು ಮತ್ತೊಂದು ಬಾಹ್ಯ ಕರೋನಾ ಪ್ರಕರಣವನ್ನು ಪತ್ತೆಹಚ್ಚಿದೆ, ಅವರು ಒಮಿಕ್ರಾನ್ ರೂಪಾಂತರಿಗೆ ಧನಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ. ಸೋಂಕಿತ ವ್ಯಕ್ತಿಗೆ ಸಂಪೂರ್ಣವಾಗಿ ಲಸಿಕೆ ನೀಡಲಾಗಿದೆ ಮತ್ತು ಸೌಮ್ಯ ರೋಗಲಕ್ಷಣಗಳನ್ನು ಅವರು ಹೊಂದಿದ್ದಾರೆ. 


ಇದನ್ನೂ ಓದಿ-ಡೆಲ್ಟಾವನ್ನೇ ಎದುರಿಸಿದ್ದೇವೆ ‘ಒಮಿಕ್ರಾನ್’ ಬಗ್ಗೆ ಹೆದರಿಕೆ ಬೇಡ: ಸಚಿವ ಸುಧಾಕರ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.