ಡೆಲ್ಟಾವನ್ನೇ ಎದುರಿಸಿದ್ದೇವೆ ‘ಒಮಿಕ್ರಾನ್’ ಬಗ್ಗೆ ಹೆದರಿಕೆ ಬೇಡ: ಸಚಿವ ಸುಧಾಕರ್

ಡಿಸೆಂಬರ್ ಅಂತ್ಯದ ವೇಳೆಗೆ ಸಂಪೂರ್ಣ ಲಸಿಕೆ ನೀಡುವ ಗುರಿ ಹೊಂದಿದ್ದೇವೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

Written by - Zee Kannada News Desk | Last Updated : Dec 6, 2021, 12:34 PM IST
  • ಕರ್ನಾಟಕದ ಜನರಿಗೆ ಶುರುವಾಗಿದೆ ‘ಒಮಿಕ್ರಾನ್’ ರೂಪಾಂತರಿ ವೈರಸ್ ಭೀತಿ!
  • ಡೆಲ್ಟಾವನ್ನೇ ಎದುರಿಸದ್ದೇವೆ ‘ಒಮಿಕ್ರಾನ್’ ಭಯ ಬೇಡವೆಂದ ಆರೋಗ್ಯ ಸಚಿವ
  • ಪ್ರತಿಯೊಬ್ಬರೂ 2 ಡೋಸ್ ಲಸಿಕೆ ಪಡೆಯುವಂತೆ ಸಚಿವ ಡಾ.ಕೆ.ಸುಧಾಕರ್ ಮನವಿ
ಡೆಲ್ಟಾವನ್ನೇ ಎದುರಿಸಿದ್ದೇವೆ ‘ಒಮಿಕ್ರಾನ್’ ಬಗ್ಗೆ ಹೆದರಿಕೆ ಬೇಡ: ಸಚಿವ ಸುಧಾಕರ್ title=
ವಿದೇಶಿ ಪ್ರವಾಸಿಗರ ಮೇಲೆ ಕಣ್ಣು

ನವದೆಹಲಿ: ಕರ್ನಾಟಕಕ್ಕೆ ಈಗ ಹೊಸ ರೂಪಾಂತರಿ ವೈರಸ್ ‘ಒಮಿಕ್ರಾನ್’(Omicron Variant) ಭೀತಿ ಶುರುವಾಗಿದೆ. ದೇಶಾದ್ಯಂತ ‘ಒಮಿಕ್ರಾನ್’ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು ಆರೋಗ್ಯ ಇಲಾಖೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಬೆಂಗಳೂರಿನ ದೇವನಹಳ್ಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿದೇಶದಿಂದ ಆಗಮಿಸುವ ಪ್ರಯಾಣಿಕರ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ಅದರಲ್ಲೂ ವಿದೇಶಿ ಪ್ರಯಾಣಿಕರನ್ನು ಈಗ ಅನುಮಾನದ ಕಣ್ಣಿನಲ್ಲೇ ನೋಡುವಂತಾಗಿದೆ.

ಡೆಲ್ಟಾ ಮಾದರಿಯ ವೈರಸ್ ಅನ್ನೇ ನಾವು ಎದುರಿಸಿದ್ದೇವೆ. ಹೊಸ ರೂಪಾಂತರಿ ವೈರಸ್ ‘ಒಮಿಕ್ರಾನ್’ ಬಗ್ಗೆ ಯಾವುದೇ ಹೆದರಿಕೆ ಬೇಡವೆಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್(K Sudhakar) ಹೇಳಿದ್ದಾರೆ. ರಾಜ್ಯದಲ್ಲಿ ಕೊರೊನಾ ಕೇಸ್(CoronaVirus)​ಗಳ ಸಂಖ್ಯೆ ನಿಧಾನವಾಗಿ ಹೆಚ್ಚಾಗುತ್ತಿರುವ ಬಗ್ಗೆ ಹಾಗೂ ಮುಂದಿನ ದಿನಗಳಲ್ಲಿ ವಹಿಸಬೇಕಾದ ಎಚ್ಚರಿಕೆ ಬಗ್ಗೆ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.

ಇದನ್ನೂ ಓದಿ: ಮೂರು ಅಥವಾ ಹೆಚ್ಚು Covid-19 ಪ್ರಕರಣಗಳಿರುವ ಪ್ರದೇಶಗಳನ್ನು ಕ್ಲಸ್ಟರ್‌ಗಳಾಗಿ ವರ್ಗೀಕರಿಸಲಾಗುವುದು: ಸಿಎಂ ಬೊಮ್ಮಾಯಿ

ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಬಂದಿರುವ ಇಬ್ಬರಿಗೆ ‘ಒಮಿಕ್ರಾನ್’ ಸೋಂಕು ಇರುವುದು ಪತ್ತೆಯಾಗಿತ್ತು. ಬೋರಿಂಗ್ ಆಸ್ಪತ್ರೆಯಲ್ಲಿ ಅವರಿಗೆ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಸಂಪರ್ಕದಲ್ಲಿದ್ದ ಯಾರಿಗೂ ಯಾವುದೇ ಸಮಸ್ಯೆಯುಂಟಾಗಿಲ್ಲ. ಸಂಪರ್ಕಿತರೆಲ್ಲರೂ 2 ಡೋಸ್ ಕೊರೊನಾ ಲಸಿಕೆ ತೆಗೆಕೊಂಡಿದ್ದಾರೆ. ಸಂಪೂರ್ಣ ರೋಗ ನಿರೋಧಕ ಶಕ್ತಿ ಬರಬೇಕೆಂದರೆ ಪ್ರತಿಯೊಬ್ಬರೂ 2 ಡೋಸ್ ಲಸಿಕೆ(COVID-19 vaccine)ಯನ್ನು ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕೆಂದು ಮನವಿ ಮಾಡುತ್ತೇನೆ. ‘ಒಮಿಕ್ರಾನ್’ ವೈರಸ್ ಬಗ್ಗೆ ತುಂಬಾ ಆತಂಕಪಡುವ ಅಗತ್ಯವಿಲ್ಲ. ಇದಕ್ಕಿಂತ ಅಪಾಯಕಾರಿಯಾಗಿದ್ದ ಡೆಲ್ಟಾ ರೂಪಾಂತರಿ ವೈರಸ್ ಅನ್ನೇ ನಾವು ಎದುರಿಸಿದ್ದೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗದಲ್ಲಿ ಕೊರೊನಾ ಸ್ಫೋಟ: ಖಾಸಗಿ ನರ್ಸಿಂಗ್ ಕಾಲೇಜಿನ 29 ವಿದ್ಯಾರ್ಥಿಗಳಿಗೆ COVID-19 ಪಾಸಿಟಿವ್

ಡೆಲ್ಟಾಗೆ ಹೋಲಿಕೆ ಮಾಡಿದರೆ ‘ಒಮಿಕ್ರಾನ್’ ಬಹುಬೇಗ ಹರಡುತ್ತದೆ. ಆದರೆ ಅದರ ತೀವ್ರತೆ ಮಟ್ಟ ಯಾರಲ್ಲಿಯೂ ಹೆಚ್ಚಾಗಿ ಕಂಡುಬಂದಿಲ್ಲ. ದಕ್ಷಿಣ ಆಫ್ರಿಕಾ(South Africa) ಸೇರಿದಂತೆ ಹಲವು ದೇಶಗಳಲ್ಲಿ ಪತ್ತೆಯಾಗಿರುವ ಈ ವೈರಸ್(COVID-19) ಅಷ್ಟೇನೂ ಅಪಾಯಕಾರಿಯಲ್ಲ ಎಂದು ತಿಳಿದುಬಂದಿದೆ. ಆದರೆ ಬೇಗ ಹರಡುವ ಕಾರಣ ಪ್ರತಿಯೊಬ್ಬರೂ ಎಚ್ಚರಿಕೆ ವಹಿಸಬೇಕು. ಪ್ರತಿಯೊಬ್ಬರೂ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ರಾಜ್ಯದಲ್ಲಿ ಮೊದಲ ಡೋಸ್ ಅನ್ನು ಶೇ.93ರಷ್ಟು ಜನರು ತೆಗೆದುಕೊಂಡಿದ್ದಾರೆ. 2ನೇ ಡೋಸ್ ಅನ್ನು ಶೇ.64ರಷ್ಟು ಜನರು ಹಾಕಿಸಿಕೊಂಡಿದ್ದಾರೆ. ಡಿಸೆಂಬರ್ ಅಂತ್ಯದ ವೇಳೆಗೆ ಸಂಪೂರ್ಣ ಲಸಿಕೆ ನೀಡುವ ಗುರಿ ಹೊಂದಿದ್ದೇವೆ. ರಾಜ್ಯದಲ್ಲಿ 70 ಲಕ್ಷ ಲಸಿಕೆ ದಾಸ್ತಾನು ಇದೆ. ಆದಷ್ಟು ಬೇಗ ಉಳಿದ ಜನರು ಕೂಡ ಲಸಿಕೆ ಪಡೆದುಕೊಳ್ಳಬೇಕು ಎಂದು ಸಚಿವ ಸುಧಾಕರ್ ಮನವಿ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News