ಸಿಯೋಲ್: New Technology To Detect Omicron - ಕೊರಿಯಾದ ಸಂಶೋಧಕರು ಓಮಿಕ್ರಾನ್ ರೂಪಾಂತರಗಳನ್ನು ಗುರುತಿಸಲು ಮಾಲಿಕ್ಯುಲರ್ ಡಯಾಗ್ನೋಸ್ಟಿಕ್ ತಂತ್ರಜ್ಞಾನವನ್ನು (Molecular Dignostic Technology) ಅಭಿವೃದ್ಧಿಪಡಿಸಿದ್ದಾರೆ. 20 ನಿಮಿಷಗಳಲ್ಲಿ ಓರ್ವ ವ್ಯಕ್ತಿಗೆ ಒಮಿಕ್ರಾನ್ ವೈರಸ್ ಸೋಂಕು ತಗುಲಿದೆಯೇ ಅಥವಾ ಇಲ್ಲವೇ ಎಂಬುದು ಇದರಿಂದ ಗೊತ್ತಾಗಲಿದೆ ಎಂದು ಹೇಳಲಾಗುತ್ತಿದೆ. ಈ ಸಂಶೋಧನೆಯು ಇತ್ತೀಚಿಗೆ ಪೂರ್ಣಗೊಂಡಿದೆ. ಆದರೂ ಇದು ವಿಶ್ವಾದ್ಯಂತ ತಲುಪಲು ತುಂಬಾ ಸಮಯ ಬೇಕಾಗಲಿದೆ. ಕೆಮಿಕಲ್ ಎಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಲೀ ಜಂಗ್-ವೂಕ್ ನೇತೃತ್ವದ ಸಂಶೋಧನಾ ತಂಡವು ಕೇವಲ 20-30 ನಿಮಿಷಗಳಲ್ಲಿ ಓಮಿಕ್ರಾನ್ ರೂಪಾಂತರಗಳನ್ನು ಪತ್ತೆಹಚ್ಚುವ ಆಣ್ವಿಕ ರೋಗನಿರ್ಣಯ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ ಮತ್ತು ಫಲಿತಾಂಶಗಳನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗುವುದು ಎಂದು POSTECH  ಇದೆ ತಿಂಗಳ 10ನೇ ತಾರೀಖಿನಂದು ಘೋಷಿಸಿದೆ.


COMMERCIAL BREAK
SCROLL TO CONTINUE READING

ಸಂಶೋಧನಾ ತಂಡದ ಪ್ರಕಾರ, ಆಣ್ವಿಕ ರೋಗನಿರ್ಣಯ ತಂತ್ರಜ್ಞಾನವು ಸಿಂಗಲ್ -ನ್ಯೂಕ್ಲಿಯೊಟೈಡ್ ಆಧಾರದ ಮೇಲೆ ಮ್ಯೂಟೆಶನ್ ಗಳನ್ನು  ಪ್ರತ್ಯೇಕಿಸುತ್ತದೆ. ಆದ್ದರಿಂದ ಇದು RT-PCR ಮೂಲಕ ಪತ್ತೆಹಚ್ಚಲು ಕಷ್ಟಕರವಾದ 'ಸ್ಟೆಲ್ತ್ ಓಮಿಕ್ರಾನ್'ಗಳನ್ನು ಇದು ಪತ್ತೆ ಮಾಡುತ್ತದೆ. ಕೊರಿಯಾದಲ್ಲಿನ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು ಪ್ರಸ್ತುತ COVID-19 ರೂಪಾಂತರಗಳನ್ನು ಪತ್ತೆಹಚ್ಚಲು ಪೂರ್ಣ ಜೀನೋಮ್ ಅನುಕ್ರಮ,  ಟಾರ್ಗೆಟ್ DNA (ಸ್ಪೈಕ್ ಪ್ರೋಟೀನ್ ತರಹದ ರೂಪಾಂತರಗಳು) ವಿಶ್ಲೇಷಣೆ ಮತ್ತು RT-PCR ಪರೀಕ್ಷೆ ಎಂಬ ಮೂರು ವಿಧಾನಗಳನ್ನು ಬಳಸುತ್ತಿವೆ.


ಇದನ್ನೂ ಓದಿ-Good News: Omicron ಆತಂಕದ ನಡುವೆ ಇಲ್ಲಿದೆ ಒಂದು ಭಾರಿ ನೆಮ್ಮದಿಯ ಸುದ್ದಿ


ಈ ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತದೆ?
ಡೆಲ್ಟಾ ರೂಪಾಂತರದ ಸಂದರ್ಭದಲ್ಲಿ, ಇದನ್ನು RT-PCR ಪರೀಕ್ಷೆಯಿಂದ ಕಂಡುಹಿಡಿಯಬಹುದು, ಆದರೆ ಇದು Omicron ನಲ್ಲಿ ಪರಿಣಾಮಕಾರಿಯಾಗಿರುವುದಿಲ್ಲ. ಈ ಬಾರಿ ಹೊಸದಾಗಿ ಅಭಿವೃದ್ಧಿಪಡಿಸಲಾದ ತಂತ್ರಜ್ಞಾನವು ಡಿಎನ್‌ಎ ಅಥವಾ ಆರ್‌ಎನ್‌ಎ ಅನುಕ್ರಮ ಪ್ರಕ್ರಿಯೇಯಾಗಿಲ್ಲ. ಆದರೆ ಆಣ್ವಿಕ ರೋಗನಿರ್ಣಯ ತಂತ್ರಜ್ಞಾನವಾಗಿದೆ. ಪ್ರಸ್ತುತ ತಂತ್ರಜ್ಞಾನವು ಕಡಿಮೆ ಸಂಖ್ಯೆಯ ವೈರಸ್‌ಗಳನ್ನು ಮಾತ್ರ ಪತ್ತೆ ಮಾಡುತ್ತದೆ, ಆದರೆ ನ್ಯೂಕ್ಲಿಯಿಕ್ ಆಸಿಡ್-ಬೈಂಡಿಂಗ್ ಪ್ರತಿಕ್ರಿಯೆಯ ಕಾರಣವನ್ನು ನಿರ್ಧರಿಸಲು ಆಣ್ವಿಕ ರೋಗನಿರ್ಣಯ ತಂತ್ರಜ್ಞಾನವನ್ನು ವಿನ್ಯಾಸಗೊಳಿಸಲಾಗಿದೆ ಇದರಿಂದ COVID-19 RNA ಇರುವಾಗ ಅದನ್ನು ತ್ವರಿತವಾಗಿ ಕಂಡುಹಿಡಿಯಬಹುದು.


ಇದನ್ನೂ ಓದಿ-Omicron Updates: ಭಾರತದ ಈ ರಾಜ್ಯದಲ್ಲಿ ಓಮಿಕ್ರಾನ್ ನ 7 ಹೊಸ ಪ್ರಕರಣಗಳು ಪತ್ತೆ, ಒಟ್ಟು ಪ್ರಕರಣಗಳ ಸಂಖ್ಯೆ 12ಕ್ಕೆ ಏರಿಕೆ


ಪ್ರೊಫೆಸರ್ ಲೀ ಪ್ರಕಾರ, RT-PCR ಪರೀಕ್ಷೆಯು ಓಮಿಕ್ರಾನ್ ಬಳಿ N ವಂಶವಾಹಿಯನ್ನು ಪತ್ತೆ ಮಾಡುತ್ತದೆ, ಆದರೆ ಇದು N ಜೀನ್ ಪ್ರದೇಶದಲ್ಲಿ ದುರ್ಬಲವಾಗಿರುತ್ತದೆ. 'ಸ್ಟೆಲ್ತ್ ಓಮಿಕ್ರಾನ್' ಪ್ರಕರಣದಲ್ಲಿ, N ಮತ್ತು S ವಂಶವಾಹಿಗಳೆರಡೂ ಧನಾತ್ಮಕವಾಗಿ ಕಂಡುಬಂದಿದ್ದು, ಇದು ಇತರ ಪ್ರಕಾರಗಳಿಂದ ಪ್ರತ್ಯೇಕಿಸಲು ಕಷ್ಟವಾಗುತ್ತದೆ. RT-PCRನಿಂದ ಪ್ರತ್ಯೇಕವಾಗಿ ಕೆಲಸ ಮಾಡುವಾಗ ಆಣ್ವಿಕ ರೋಗನಿರ್ಣಯ ತಂತ್ರಜ್ಞಾನವು ಓಮಿಕ್ರಾನ್ ಅನ್ನು ಯಶಸ್ವಿಯಾಗಿ ಪತ್ತೆ ಮಾಡುತ್ತದೆ.


ಇದನ್ನೂ ಓದಿ-Omicron Updates: ಭಾರತದ ಪಾಲಿಗೆ Omicron ಎಷ್ಟೊಂದು ಅಪಾಯಕಾರಿ, Vaccine ಎಷ್ಟು ಪರಿಣಾಮಕಾರಿ? AIIMS ವೈದ್ಯರು ಹೇಳಿದ್ದೇನು?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.