Omicron Updates: ಭಾರತದ ಈ ರಾಜ್ಯದಲ್ಲಿ ಓಮಿಕ್ರಾನ್ ನ 7 ಹೊಸ ಪ್ರಕರಣಗಳು ಪತ್ತೆ, ಒಟ್ಟು ಪ್ರಕರಣಗಳ ಸಂಖ್ಯೆ 12ಕ್ಕೆ ಏರಿಕೆ

Omicron Updates In India - ಭಾನುವಾರ, ಮಹಾರಾಷ್ಟ್ರದಿಂದ 7 ಓಮಿಕ್ರಾನ್ ಪ್ರಕರಣಗಳು ವರದಿಯಾಗಿವೆ. ಇದರ ನಂತರ, ದೇಶದಲ್ಲಿ ಒಮಿಕ್ರಾನ್‌ನ ಒಟ್ಟು  ಪ್ರಕರಣಗಳ ಸಂಖ್ಯೆ 12ಕ್ಕೆ ಏರಿಕೆಯಾಗಿದೆ.

Written by - Nitin Tabib | Last Updated : Dec 5, 2021, 07:52 PM IST
  • ಮಹಾರಾಷ್ಟ್ರದಲ್ಲಿ ಮತ್ತೆ 7 ಕೊರೊನಾ ಪ್ರಕರಣಗಳು ವರದಿಯಾಗಿವೆ.
  • ದೇಶದಲ್ಲಿ ಇಲ್ಲಿಯವರೆಗೆ 12 ಒಮಿಕ್ರಾನ್ ಸೊಂಕಿತರು ಪತ್ತೆ.
  • ಒಂದೇ ಕುಟುಂಬದಲ್ಲಿ ಒಟ್ಟು 6 ಹಾಗೂ ಪುಣೆಯಿಂದ 1 ಪ್ರಕರಣ ಪತ್ತೆಯಿಂದ ಭಾರಿ ಸಂಚಲನ
Omicron Updates: ಭಾರತದ ಈ ರಾಜ್ಯದಲ್ಲಿ ಓಮಿಕ್ರಾನ್ ನ 7 ಹೊಸ ಪ್ರಕರಣಗಳು ಪತ್ತೆ, ಒಟ್ಟು ಪ್ರಕರಣಗಳ ಸಂಖ್ಯೆ 12ಕ್ಕೆ ಏರಿಕೆ title=
Omicron Updates In India (Representational Image)

ಮುಂಬೈ: Omicron Cases In India - ದೇಶದಲ್ಲಿ ಕೊರೊನಾ ಹೊಸ ರೂಪಾಂತರಿ ಗಳ ಸಂಖ್ಯೆ ಇದೀಗ ಏಕಾಏಕಿ ಹೆಚ್ಚಾಗುತ್ತಿದೆ. ಭಾನುವಾರ ಬೆಳಗ್ಗೆಯವರೆಗೆ, ದೇಶದಲ್ಲಿ 5 ಒಮಿಕ್ರಾನ್ ಪ್ರಕರಣಗಳು ವರದಿಯಾಗಿದ್ದವು. ಆದರೆ ಸಂಜೆಯ ಹೊತ್ತಿಗೆ ಮಹಾರಾಷ್ಟ್ರದಿಂದ ಮತ್ತೆ 7 ಓಮಿಕ್ರಾನ್ ಪ್ರಕರಣಗಳು ವರದಿಯಾಗಿವೆ. ಪಿಂಪ್ರಿಯಲ್ಲಿ 6 ಮತ್ತು ಪುಣೆಯಲ್ಲಿ 1 ಪ್ರಕರಣಗಳು ವರದಿಯಾಗಿದೆ. ಇದರೊಂದಿಗೆ ಮಹಾರಾಷ್ಟ್ರದಲ್ಲಿ ಇದುವರೆಗೆ ಒಟ್ಟು 8 ಪ್ರಕರಣಗಳು ದಾಖಲಾಗಿವೆ. ಇಡೀ ದೇಶದಲ್ಲಿ 12 ಪ್ರಕರಣಗಳು ದಾಖಲಾಗಿವೆ. ಗಮನಾರ್ಹವಾಗಿ, ಕರೋನಾದ ಎರಡನೇ ಅಲೆಯ ದೊಡ್ಡ ಪರಿಣಾಮವು ಮಹಾರಾಷ್ಟ್ರದಲ್ಲಿಯೇ ಕಂಡುಬಂದಿದೆ. ಏಕಕಾಲಕ್ಕೆ 7 ಪ್ರಕರಣಗಳು ಬಂದಿದ್ದರಿಂದ ಇಡೀ ದೇಶದಲ್ಲಿ ಸಂಚಲನ ಸೃಷ್ಟಿಯಾಗಿದೆ.

ಐದನೇ ಪ್ರಕರಣವು ಭಾನುವಾರ ರಾಜಧಾನಿಯಿಂದ ವರದಿಯಾಗಿತ್ತು
ಮೊನ್ನೆ ಶನಿವಾರದಂದು, ಮಹಾರಾಷ್ಟ್ರದಿಂದ ಒಮಿಕ್ರಾನ್ (Omicron Variant) ರೂಪಾಂತರದ ಮೊದಲ ಪ್ರಕರಣ ವರದಿಯಾಗಿದೆ. ಇದರ ನಂತರ ದೇಶದಲ್ಲಿ 4 ಓಮಿಕ್ರಾನ್ ರೂಪಾಂತರಿ  ಪ್ರಕರಣಗಳು ಕಂಡುಬಂದವು. ಭಾನುವಾರ ಬೆಳಗ್ಗೆ ದೆಹಲಿಯಲ್ಲಿ ಮತ್ತೊಂದು ಪ್ರಕರಣ ವರದಿಯಾಗಿದೆ.

ಈ ಜನರಿಂದ ಮಹಾರಾಷ್ಟ್ರದಲ್ಲಿ ಆತಂಕ ಸೃಷ್ಟಿಯಾಗಿದೆ
ಭಾರತೀಯ ಮೂಲದ ನೈಜೀರಿಯಾ ಪ್ರಜೆಯಾಗಿರುವ 44 ವರ್ಷದ ಮಹಿಳೆ, 12 ಮತ್ತು 18 ವರ್ಷ ವಯಸ್ಸಿನ ತನ್ನ ಇಬ್ಬರು ಹೆಣ್ಣುಮಕ್ಕಳೊಂದಿಗೆ ನವೆಂಬರ್ 24 ರಂದು ಪುಣೆಗೆ ಹೊಂದಿಕೊಂಡಿರುವ ಪಿಂಪ್ರಿ ಚಿಂಚ್‌ವಾಡ್‌ನಲ್ಲಿರುವ ತನ್ನ ಸಹೋದರನನ್ನು ಭೇಟಿ ಮಾಡಲು ನೈಜೀರಿಯಾದ ಲೆಗಾಸ್ ದೇಶದಿಂದ ಬಂದಿದ್ದರು. ಈ ಮೂವರ ಜೀನೋಮ್ ಸೀಕ್ವೆನ್ಸಿಂಗ್ ವರದಿಯಲ್ಲಿ ಈ ಓಮಿಕ್ರಾನ್ ರೂಪಾಂತರಗಳು ಧನಾತ್ಮಕವಾಗಿ ಕಂಡುಬಂದಿವೆ. ಇದರೊಂದಿಗೆ, ಅವರ 45 ವರ್ಷದ ಸಹೋದರ ಮತ್ತು 1.5 ಮತ್ತು 7 ವರ್ಷದ ಅವರ ಇಬ್ಬರು ಹೆಣ್ಣುಮಕ್ಕಳು ಸಹ ಒಮಿಕ್ರಾನ್ ರೂಪಾಂತರ ಪರೀಕ್ಷೆಗೆ ಧನಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ. ಈ 6 ಜನರಲ್ಲಿ 3 ಜನರು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ ಮತ್ತು ಅವರು ಯಾವುದೇ ಕರೋನಾ ಲಸಿಕೆ ಪಡೆದಿಲ್ಲ ಎಂಬುದು ಸ್ಪಷ್ಟವಾಗಿದೆ.

ಒಮಿಕ್ರಾನ್ ಪ್ರಕರಣಗಳು ರೋಗಲಕ್ಷಣಗಳಿಲ್ಲದೆ ಪತ್ತೆಯಾಗುತ್ತಿವೆ
ಇವರಲ್ಲಿ ನೈಜೀರಿಯಾದಿಂದ ವಾಪಸಾದ ಮಹಿಳೆಗೆ ಮಾತ್ರ ಸಣ್ಣಪುಟ್ಟ ಲಕ್ಷಣಗಳು ಕಂಡುಬಂದಿದ್ದು, ಉಳಿದ 5 ಜನರಲ್ಲಿ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ಈ ಎಲ್ಲ ಜನರು ಪಿಂಪ್ರಿಯ ಜಿಜಾಮಾತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಅಲ್ಲಿ ಅವರ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ. 

ಇದನ್ನೂ ಓದಿ-ಮೂರು ಅಥವಾ ಹೆಚ್ಚು Covid-19 ಪ್ರಕರಣಗಳಿರುವ ಪ್ರದೇಶಗಳನ್ನು ಕ್ಲಸ್ಟರ್‌ಗಳಾಗಿ ವರ್ಗೀಕರಿಸಲಾಗುವುದು: ಸಿಎಂ ಬೊಮ್ಮಾಯಿ

ಲಸಿಕೆ ಪಡೆದ ನಂತರವೂ ಒಮಿಕ್ರಾನ್ ಪಾಸಿಟಿವ್?
ಅದೇ ಸಮಯದಲ್ಲಿ, 7ನೇ ಪ್ರಕರಣವು ಪುಣೆಯಿಂದ ವರದಿಯಾಗಿದೆ. 47 ವರ್ಷದ ಅವರು ನವೆಂಬರ್ 18 ರಿಂದ ನವೆಂಬರ್ 25 ರವರೆಗೆ ಫಿನ್‌ಲ್ಯಾಂಡ್‌ನಲ್ಲಿದ್ದರು. 29 ರಂದು ಸೌಮ್ಯ ಜ್ವರ ಕಾಣಿಸಿಕೊಂಡ ನಂತರ, ಅವರು ತಮ್ಮದೇ ಆದ ಆರ್‌ಟಿಸಿಪಿಆರ್ ಪರೀಕ್ಷೆಯನ್ನು ಮಾಡಿದಾಗ, ಅವರ ಕೋವಿಡ್ ವರದಿ ಪಾಸಿಟಿವ್ ಬಂದಿದೆ, ಈ ವ್ಯಕ್ತಿಯು ಕೋವಿಶೀಲ್ಡ್‌ನ ಎರಡೂ ಡೋಸ್‌ಗಳನ್ನು ತೆಗೆದುಕೊಂಡಿದ್ದಾರೆ. ಪ್ರಸ್ತುತ, ಈ ವ್ಯಕ್ತಿಯು ಯಾವುದೇ ರೋಗಲಕ್ಷಣಗಳನ್ನು ಹೊಂದಿಲ್ಲ ಮತ್ತು ಅವರ ಸ್ಥಿತಿಯು ಸ್ಥಿರವಾಗಿದೆ ಎಂದು ಹೇಳಲಾಗುತ್ತಿದೆ. 

ಇದನ್ನೂ ಓದಿ-Omicron variant: ಹೊಸ ರೂಪಾಂತರದ ರೋಗಲಕ್ಷಣಗಳ ಬಗ್ಗೆ ತಜ್ಞರು ಹೇಳುವುದೇನು?

ಜೀನೋಮ್ ಸೀಕ್ವೆನ್ಸಿಂಗ್ ಮೂಲಕ ದೃಢೀಕರಿಸಲಾಗಿದೆ
ಭಾನುವಾರ ಬೆಳಗಿನ ಜಾವದವರೆಗೆ, ಅಪಾಯದ ದೇಶಗಳಿಂದ ಒಟ್ಟು 4901 ಪ್ರಯಾಣಿಕರು ಮುಂಬೈಗೆ ಮರಳಿದ್ದಾರೆ ಮತ್ತು 23320 ಪ್ರಯಾಣಿಕರು ಇತರ ದೇಶಗಳಿಂದ ಬಂದಿದ್ದಾರೆ. ಈ ಪೈಕಿ, ಎಲ್ಲಾ ಹೆಚ್ಚಿನ ಅಪಾಯದ ಪ್ರಯಾಣಿಕರು ಸೇರಿದಂತೆ ಒಟ್ಟು 5444 ಜನರನ್ನು ಆರ್‌ಟಿಪಿಸಿಆರ್‌ಗಾಗಿ ಪರೀಕ್ಷಿಸಲಾಗಿದ್ದು, ಈ ಪೈಕಿ 9 ಜನರು ಇಲ್ಲಿಯವರೆಗೆ ಕೋವಿಡ್ ಪಾಸಿಟಿವ್ ಎಂದು ಕಂಡುಬಂದಿದ್ದಾರೆ. ಇವೆಲ್ಲವುಗಳ ಜೀನೋಮ್ ಸೀಕ್ವೆನ್ಸಿಂಗ್ ವರದಿ ಇನ್ನಷ್ಟೇ ಬರಬೇಕಿದೆ.

ಇದನ್ನೂ ಓದಿ-'ಭಾರತವು COVID-19 ನ ಮೊದಲ ಮತ್ತು ಎರಡನೇ ಅಲೆಗಿಂತ ಉತ್ತಮ ಸ್ಥಿತಿಯಲ್ಲಿದೆ'

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ. 

Trending News