ನವದೆಹಲಿ: ಅವೆನ್ಫೀಲ್ಡ್ ಭ್ರಷ್ಟಾಚಾರ ಪ್ರಕರಣದಲ್ಲಿ ಆರೋಪಿಯಾಗಿದ್ದ ಪಾಕಿಸ್ತಾನದ ಮಾಜಿ ಪ್ರಧಾನ ಮಂತ್ರಿ ನವಾಜ್ ಶರೀಫ್ ಅವರು ಈಗ ರಾವಲ್ಪಿಂಡಿಯ ಆದಿಯಾಲಾ ಜೈಲಿನಲ್ಲಿದ್ದಾರೆ. ಆದರೆ ಇಲ್ಲಿ ಅವರಿಗೆ ಕಳಪೆ ಗುಣಮಟ್ಟದ ಸೌಲಭ್ಯವನ್ನು ನೀಡಲಾಗುತ್ತಿದೆ ಎಂದು ಷರೀಫ್ ಪುತ್ರ ಆರೋಪಿಸಿದ್ದಾರೆ.



COMMERCIAL BREAK
SCROLL TO CONTINUE READING

ಈ ಕುರಿತಾಗಿ ಟ್ವಿಟ್ಟರ್ ನಲ್ಲಿ ಆರೋಪ ಮಾಡಿರುವ ಹುಸೇನ್ ನವಾಜ್ ಶರೀಫ್ ಅವರ ತಂದೆ ಜೈಲಿನಲ್ಲಿ ಹಾಸಿಗೆನ್ನು  ನೀಡಿಲ್ಲ ಇನ್ನು ಬಾತ್ರೂಮ್ ಅಂತು ಕೊಳಕಾಗಿದೆ "ಪ್ರಾಯಶಃ ಹಲವಾರು ದಿನಗಳಿಂದ ಸ್ವಚ್ಛ ಮಾಡಿಲ್ಲ ಎಂದು ಅವರು ಆರೋಪಿಸಿದ್ದಾರೆ.


"ನನ್ನ ತಂದೆ ನಿದ್ರೆ ಮಾಡಲು ಹಾಸಿಗೆಯನ್ನು ನೀಡಿಲ್ಲ ಮತ್ತು ಬಾತ್ರೂಮ್ ನ್ನು ಹಲವು ದಿನಗಳಿಂದ ಸ್ವಚ್ಛ ಮಾಡಿಲ್ಲ ಎಂದು ಕೇಳ್ಪಟ್ಟಿದ್ದೇನೆ" ಎಂದು ಹುಸೇನ್ ಟ್ವೀಟ್ ಮಾಡಿದ್ದಾರೆ.


"ಈ ದೇಶದಲ್ಲಿ ಜನಪ್ರತಿನಿಧಿಗಳನ್ನು ಗೌರವಯುತವಾಗಿ ನೋಡಿಕೊಳ್ಳುವ ಯಾವುದೇ ವಿಧಾನವಿಲ್ಲ ಆದ್ಯತೆ ಇಲ್ಲವೆಂದು ತೋರುತ್ತದೆ, ಆದರೆ ಇದು ಮೂಲಭೂತ ಹಕ್ಕುಗಳ ಉಲ್ಲಂಘನೆಗೆ ಒಳಪಟ್ಟು ಮಾನಸಿಕ ಹಿಂಸೆಗೆ ಕಾರಣವಾಗುತ್ತದೆ "ಎಂದು" ಅವರು ಹೇಳಿದರು.



ಇನ್ನೊಂದೆಡೆ ಜೈಲ್ ನಲ್ಲಿ ಉತ್ತಮ ಸೌಲಭ್ಯ ನೀಡಬೇಕೆಂದು ನವಾಜ್ ಶರೀಫ್ ಪುತ್ರಿ  ಮರ್ಯಾಮ್ ನವಾಜ್ ಷರೀಫ್ ಜೈಲ್ ನ ಮುಖ್ಯಸ್ಥರಲ್ಲಿ ಪತ್ರ ಬರೆದಿದ್ದಾರೆ.