ವಿಶ್ವದ ಅತ್ಯಂತ ಶಕ್ತಿಶಾಲಿ Missile ಅನಾವರಣಗೊಳಿಸಿದ ಉತ್ತರ ಕೊರಿಯಾ
ತನ್ನ ಮಿಲಿಟರಿ ಸಾಮರ್ಥ್ಯವನ್ನು ಹೆಚ್ಚಿಸುವ ತವಕದಲ್ಲಿರುವ, ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜೊಂಗ್ ಉನ್ ಈ ಹಿಂದೆ ಅಂತಹ ಶಕ್ತಿಯನ್ನು ಪ್ರದರ್ಶಿಸಿದ್ದಾರೆ. ಇದು ವಿಶ್ವದ ಅತಿದೊಡ್ಡ ಖಂಡಾಂತರ ಖಂಡಾಂತರ ಕ್ಷಿಪಣಿ ಎಂದೇ ಪರಿಗಣಿಸಲಾಗುತ್ತಿದೆ.
ಪ್ಯೊಂಗ್ಯಾಂಗ್: ತನ್ನ ಮಿಲಿಟರಿ ಸಾಮರ್ಥ್ಯವನ್ನು ಹೆಚ್ಚಿಸುವ ತವಕದಲ್ಲಿರುವ, ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜೊಂಗ್ ಉನ್ (Kim Jong Un) ಈ ಹಿಂದೆ ಅಂತಹ ಶಕ್ತಿಯನ್ನು ಪ್ರದರ್ಶಿಸಿದ್ದಾರೆ. ಇದು ವಿಶ್ವದ ಅತಿದೊಡ್ಡ ಖಂಡಾಂತರ ಖಂಡಾಂತರ ಕ್ಷಿಪಣಿ ಎಂದೇ ಪರಿಗಣಿಸಲಾಗುತ್ತಿದೆ. ಕ್ಷಿಪಣಿ ಗಾತ್ರದಲ್ಲಿ ಎಷ್ಟು ದೊಡ್ಡದಾಗಿತ್ತೆಂದರೆ ಅದನ್ನು 22 ಗಾಲಿಗಳ ಟ್ರಕ್ ಸಹಾಯದಿಂದ ಮಿಲಿಟರಿ ಪರೇಡ್ ಗೆ ತರಲಾಗಿತ್ತು.
ಇದನ್ನು ಓದಿ- ನಿರಂಕುಶಾಧಿಕಾರಿ Kim Jong ಹೊರಡಿಸಿರುವ ತುಘಲಕ್ ಫರ್ಮಾನ್ ಕೇಳಿ ನೀವು ದಂಗಾಗುವಿರಿ
ವಿಶ್ವದ ಎದುರು ತನ್ನ 'ಛುಪಾ ರುಸ್ತಂ' ಪ್ರದರ್ಶಿಸಿದ ಕಿಮ್ ಜೊಂಗ್
ಜಗತ್ತನ್ನೇ ಬೆಚ್ಚಿಬೀಳಿಸುವುದು ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜೊಂಗ್ ಉನ್ ನ ಹಳೆ ಚಾಳಿಯಾಗಿದೆ. ತಮ್ಮ ಕಾರ್ಮಿಕರ ಪಕ್ಷದ 75 ನೇ ಪ್ರತಿಷ್ಠಾಪನಾ ದಿನದ ಅದ್ಭುತ ಆಚರಣೆಯ ಸಂದರ್ಭದಲ್ಲಿ, ಕಿಮ್ ಜೊಂಗ್ ಉನ್ ಮತ್ತೊಮ್ಮೆ ಇಡೀ ಜಗತ್ತನ್ನು ಬೆಚ್ಚಿಬೀಲಿಸಿದ್ದಾರೆ. ಈ ಸಂದರ್ಭದಲ್ಲಿ ನಡೆದ ಮಿಲಿಟರಿ ಪೆರೇಡ್‌ನಲ್ಲಿ ಹೊಸ ಖಂಡಾಂತರ ಖಂಡಾಂತರ ಕ್ಷಿಪಣಿ (ICBM) ಅನ್ನು ಪ್ರದರ್ಶಿಸಲಾಗಿದೆ. ಇದು ವಿಶ್ವದ ಅತಿದೊಡ್ಡ ಖಂಡಾಂತರ ಕ್ಷಿಪಣಿ ಎಂದೇ ಹೇಳಲಾಗುತ್ತಿದೆ.
ಇದನ್ನು ಓದಿ- ಉತ್ತರ ಕೊರಿಯಾದ ಕಿಮ್ ಜೊಂಗ್-ಯುನ್ ನ ಐಷಾರಾಮಿ ಜೀವನಶೈಲಿಯ 10 ಅಂಶಗಳು
ಪರೇಡ್ ನಲ್ಲಿ 4 ಅಪಾಯಕಾರಿ ಕ್ಷಿಪಣಿಗಳ ಪ್ರದರ್ಶನ
ಪರೇಡ್ ನಲ್ಲಿ ಉತ್ತರ ಕೊರಿಯಾ ಇಂತಹ ಒಂದಲ್ಲ ಒಟ್ಟು 4 ಕ್ಷಿಪಣಿಗಳನ್ನು ಪ್ರದರ್ಶಿಸಿದೆ. ಪಯೋಂಗ್ಯಾಂಗ್‌ಗೆ ಹೋಗುವ ರಸ್ತೆಯಲ್ಲಿ ಖಂಡಾಂತರ ಕ್ಷಿಪಣಿಯ ಬೆಂಗಾವಲುಪಡೆ ಹಾದುಹೋಗುವಾಗ ಆಕಾಶದಲ್ಲಿ ಪಟಾಕಿ ಸಿಡಿಸಲಾಗಿತ್ತು. ವಿಶ್ವದ ಅತ್ಯಂತ ಶಕ್ತಿಶಾಲಿ ಕ್ಷಿಪಣಿಯನ್ನು ಸ್ವಾಗತಿಸಲು ಸರ್ವಾಧಿಕಾರಿ ಕಿಮ್ ಜೊಂಗ್-ಉನ್ ಕೂಡ ಉಪಸ್ಥಿತನಿದ್ದ. ಬಹುಶಃ ಅವನು ತನ್ನ ಶತ್ರು ದೇಶಗಳಿಗೆ ಸಂದೇಶ ನೀಡಲು ಪ್ರಯತ್ನಿಸುತ್ತಿದ್ದ. ಮೆರವಣಿಗೆಯನ್ನು ಉದ್ದೇಶಿಸಿ ಮಾತನಾಡಿದ ಕಿಮ್ ಜೊಂಗ್ ಉನ್, ಆತ್ಮರಕ್ಷಣೆ ಮತ್ತು ದಾಳಿಗೆ ಸ್ಪಂದಿಸಲು ಉತ್ತರ ಕೊರಿಯಾ ತನ್ನ ಮಿಲಿಟರಿಯನ್ನು ಬಲಪಡಿಸುವುದನ್ನು ಮುಂದುವರಿಸಲಿದೆ ಎಂದು ಹೇಳಿದ್ದಾನೆ.