ನವದೆಹಲಿ: 2022ರ ವರ್ಷ ಕೊನೆಗೊಳ್ಳಲು ಕೇವಲ 1 ತಿಂಗಳು ಮಾತ್ರ ಉಳಿದಿದೆ. ಇಂತಹ ಪರಿಸ್ಥಿತಿಯಲ್ಲಿ 2023ರಲ್ಲಿ ಏನೇನು ಆಗಲಿದೆ ಎಂಬುದರ ಭವಿಷ್ಯವಾಣಿಗಳು ಮತ್ತೊಮ್ಮೆ ಚರ್ಚೆಯಲ್ಲಿವೆ. ಫ್ರಾನ್ಸ್‌ನ ಪ್ರವಾದಿ ನಾಸ್ಟ್ರಾಡಾಮಸ್ 2023ರ ವರ್ಷದಲ್ಲಿ ಸಂಭವಿಸಲಿರುವ 6 ಭಯಾನಕ ಭವಿಷ್ಯವಾಣಿಗಳ ಬಗ್ಗೆ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಆಕಾಶದಿಂದ ಬೆಂಕಿ ಮಳೆ ಮತ್ತು 3ನೇ ಮಹಾಯುದ್ಧದಿಂದ ಜಾಗತಿಕ ತಾಪಮಾನದ ಬಿಕ್ಕಟ್ಟಿನವರೆಗೆ ಹೀಗೆ ಹಲವು ಭಯಾನಕ ಘಟನೆಗಳು ಜರುಗಲಿವೆ ಎಂದು ಹೇಳಲಾಗಿದೆ. ಜರ್ಮನಿಯ ಮೇಲೆ ಹಿಟ್ಲರನ ಆಳ್ವಿಕೆ ಮತ್ತು 9/11 ನಂತಹ ಭಯೋತ್ಪಾದಕ ದಾಳಿಯ ಕುರಿತು ನಾಸ್ಟ್ರಾಡಾಮಸ್‌ನ ಭವಿಷ್ಯವಾಣಿಗಳು ನಿಜವೆಂದು ಸಾಬೀತಾಗಿದೆ. ಇದರಿಂದಾಗಿ ಮುಂದಿನ ವರ್ಷದ ಭವಿಷ್ಯ ಕುರಿತು ಜನರಲ್ಲಿ ಭಯದ ವಾತಾವರಣ ಮೂಡಿದೆ.


2023ರಲ್ಲಿ ಆರ್ಥಿಕ ಬಿಕ್ಕಟ್ಟು


ನಾಸ್ಟ್ರಾಡಾಮಸ್ ಅವರ ಭವಿಷ್ಯವಾಣಿಯ ಪ್ರಕಾರ, 2023ರಲ್ಲಿ ಆರ್ಥಿಕ ಬಿಕ್ಕಟ್ಟು ತೀವ್ರಗೊಳ್ಳಬಹುದು ಮತ್ತು ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು. ನಾಸ್ಟ್ರಾಡಾಮಸ್ ಹೇಳುವ ಪ್ರಕಾರ, ‘ಗೋಧಿಗೆ ಹೆಚ್ಚಿನ ಬೇಡಿಕೆ ಬರಲಿದ್ದು, ಜನರು ಪರಸ್ಪರ ಪರದಾಡಲಿದ್ದಾರಂತೆ. ರಷ್ಯಾ-ಉಕ್ರೇನ್ ಯುದ್ಧದ ನಂತರ ವಿಶ್ವದಾದ್ಯಂತ ಉಂಟಾಗಿರುವ ಗೋಧಿ ಕೊರತೆಗೆ ಇದನ್ನು ಲಿಂಕ್ ಮಾಡುವ ಮೂಲಕ ಜನರು ಈ ಭವಿಷ್ಯದ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ.


ಇದನ್ನೂ ಓದಿ: Viral Video: ಅಣ್ಣ-ತಂಗಿಯ ಬಾಂಧವ್ಯದ ಈ ವಿಡಿಯೋ ನೋಡಿದ್ರೆ ನಿಮ್ಮ ಕಣ್ಣಲ್ಲಿ ನೀರು ಬರುತ್ತೆ!


2023ರಲ್ಲಿ 3ನೇ ಮಹಾಯುದ್ಧ  


ನಾಸ್ಟ್ರಾಡಾಮಸ್ 2023ರಲ್ಲಿ ದೊಡ್ಡ ಯುದ್ಧದ ಮುನ್ಸೂಚನೆ ನೀಡಿದ್ದರು. ರಷ್ಯಾ-ಉಕ್ರೇನ್ ಯುದ್ಧವು ಮುಂಬರುವ ದಿನಗಳಲ್ಲಿ ವಿಶ್ವ ಯುದ್ಧದ ಸ್ವರೂಪ ಪಡೆಯಬಹುದು ಎಂದು ಜನರು ನಂಬುತ್ತಿದ್ದಾರೆ. ಈ ಬಗ್ಗೆ ನಾಸ್ಟ್ರಾಡಾಮಸ್, ‘7ತಿಂಗಳ ಕಾಲ ಮಹಾಯುದ್ಧ ನಡೆಯಲಿದ್ದು, ಇದರಿಂದ ಸಾವಿರಾರು ಜನರು ಪ್ರಾಣ ಕಳೆದುಕೊಳ್ಳಲಿದ್ದಾರೆ’ ಎಂದು ಹೇಳಿದ್ದರು. ರಷ್ಯಾ-ಉಕ್ರೇನ್ ಯುದ್ಧದ ಸಮಯದಲ್ಲಿ ಪರಮಾಣು ಬಾಂಬ್ ಬಳಕೆ ವಿಚಾರವಾಗಿ ಜನರು ಈ ಭವಿಷ್ಯವನ್ನು ತಾಳೆ ಮಾಡಿ ನೋಡುತ್ತಿದ್ದಾರೆ.


2023ರಲ್ಲಿ ಆಕಾಶದಿಂದ ಬೆಂಕಿಯ ಮಳೆ


ನಾಸ್ಟ್ರಾಡಾಮಸ್ ತನ್ನ ಭವಿಷ್ಯವಾಣಿಯಲ್ಲಿ, ‘ರಾಜಮನೆತನದ ಮೇಲೆ ಆಕಾಶ ಬೆಂಕಿ’ ಎಂದು ಬರೆದಿದ್ದಾನಂತೆ. ನಾಸ್ಟ್ರಾಡಾಮಸ್‌ನ ಈ ಭವಿಷ್ಯವಾಣಿಗೆ ಸಂಬಂಧಿಸಿದಂತೆ, ಬೆಂಕಿಯ ಮಳೆಯಿಂದಾಗಿ ನಾಗರಿಕತೆಯು ಕೊನೆಗೊಳ್ಳುತ್ತದೆ ಮತ್ತು ಅದರ ಬೂದಿಯಿಂದ ಹೊಸ ನಾಗರಿಕತೆ ಹುಟ್ಟುತ್ತದೆ ಎಂದು ಜನರು ನಂಬಿದ್ದಾರೆ. ಅದೇ ರೀತಿ ಕೆಲವರು ಇದನ್ನು ಪ್ರಪಂಚದ ಅಂತ್ಯದ ಸಂಕೇತವೆಂದು ಭಾವಿಸಿದ್ದಾರೆ.


2023ರಲ್ಲಿ ಅಂತರ್ಯುದ್ಧ


ನಾಸ್ಟ್ರಾಡಾಮಸ್ ತನ್ನ ಭವಿಷ್ಯವಾಣಿಯಲ್ಲಿ, ‘ಜಗತ್ತಿನಲ್ಲಿ ದೊಡ್ಡ ದೊಡ್ಡ ಬದಲಾವಣೆಗಳಾಗುತ್ತವೆ, ಭಯಾನಕ ಘಟನೆಗಳು ನಡೆಯಲಿದ್ದು, ಪ್ರತೀಕಾರವು ಕಂಡುಬರುತ್ತದೆ’ ಎಂದು ಬರೆದಿದ್ದಾರೆ. ಇಲ್ಲಿಯವರೆಗೆ ದಬ್ಬಾಳಿಕೆಗೆ ಬಲಿಯಾದ ಜನರು 2023ರಲ್ಲಿ ಪ್ರತಿರೋಧ ತೋರಲಿದ್ದಾರೆ. ಇದರ ನಂತರ 2023ರಲ್ಲಿ ಕೆಲವು ದೇಶಗಳಲ್ಲಿ ಅಂತರ್ಯುದ್ಧ ಸಂಭವಿಸಬಹುದು ಎಂದು ಹೇಳಲಾಗಿದೆ.


ಇದನ್ನೂ ಓದಿ: Woman Joined Adult Site To Buy Home: ಕೇವಲ ಮನೆ ಖರೀದಿಸಲು ನೀಲಿ ಚಿತ್ರ ಲೋಕಕ್ಕೆ ಕಾಲಿಟ್ಟಳು ಈ ಸುಂದರಿ!


2023ರಲ್ಲಿ ಮಂಗಳ ಗ್ರಹಕ್ಕೆ ಮಾನವರು


ನಾಸ್ಟ್ರಾಡಾಮಸ್ ಅವರು 2023ರಲ್ಲಿ ಮಂಗಳ ಗ್ರಹಕ್ಕೆ ಮಾನವರು ಪ್ರವೇಶಿಸಲಿದ್ದಾರೆಂದು ಭವಿಷ್ಯ ನುಡಿದಿದ್ದರು. ಮಂಗಳ ಗ್ರಹಕ್ಕೆ ಮಾನವರನ್ನು ಕಳುಹಿಸುವ ಕಾರ್ಯಾಚರಣೆಯಲ್ಲಿ ಉತ್ತಮ ಯಶಸ್ಸನ್ನು ಸಾಧಿಸಬಹುದು ಎಂದು ತಿಳಿಸಿದ್ದಾರೆ. ‘ಮಂಗಳ ಗ್ರಹದ ಮೇಲೆ ಬೆಳಕು ಬೀಳಲಿದೆ’ ಎಂದು ನಾಸ್ಟ್ರಾಡಾಮಸ್ ತಮ್ಮ ಭವಿಷ್ಯವಾಣಿಯಲ್ಲಿ ಬರೆದಿದ್ದಾರೆ. ಇದರ ಬಗ್ಗೆಯೂ ಜನರು ತಮ್ಮದೇಯಾದ ರೀತಿ ಲೆಕ್ಕಾಚಾರ ಹಾಕುತ್ತಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.