Hospital Guard Speaks to Ghost Patient: ದೆವ್ವದ ಹೆಸರು ಹೇಳಿದರೆ ನಮ್ಮಲ್ಲಿ ಹೆಚ್ಚಿನವರು ನಡುಗುತ್ತಾರೆ. ನಿಜವಾಗಿ ದೆವ್ವ ಇದೆಯೋ ಇಲ್ಲವೋ ಎಂಬ ವಾದವನ್ನು ಬದಿಗಿಟ್ಟರೆ, ದೆವ್ವ ಇದೆ ಎಂಬುದಕ್ಕೆ ಸಾಕ್ಷಿಯನ್ನು ನೀಡುವ ಅನೇಕ ವಿಡಿಯೋಗಳು ವೈರಲ್ ಆಗುತ್ತಿರುವುದನ್ನು ನೋಡುತ್ತೇವೆ. ಇತ್ತೀಚೆಗಷ್ಟೇ ಕಾವಲುಗಾರನೊಬ್ಬ ದೆವ್ವದೊಂದಿಗೆ ಮಾತನಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಇದನ್ನೂ ಓದಿ: Viral Video: ಲಾರಿ ಡಿಕ್ಕಿ- ಬೈಕ್ ಸವಾರ ಸ್ಥಳದಲ್ಲೇ ಸಾವು, ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಅರ್ಜೆಂಟೀನಾದ ಈ ವಿಡಿಯೋ ನೆಟ್ಟಿಗರನ್ನು ಬೆಚ್ಚಿ ಬೀಳಿಸುತ್ತಿದೆ. ವೈರಲ್ ವೀಡಿಯೊವನ್ನು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಲಕ್ಷಾಂತರ ಜನರು ವೀಕ್ಷಿಸುತ್ತಿದ್ದಾರೆ.
Guard speaks to ‘ghost patient’ in spine-chilling viral video. Internet has this to say.
.
.#viralvideo #viralnews #reel #viralshorts #trendingreel #trendingvideos #topvideos #ghost #ghostvideo #ghosttrend #memes #viralbake pic.twitter.com/ceCHNgDEgg— Viral Bake (@viralbake) November 22, 2022
ಬ್ಯೂನಸ್ ಐರಿಸ್‌ನ ಖಾಸಗಿ ಆರೈಕೆ ಕೇಂದ್ರವಾದ ಫಿನೋಚಿಯಾಟೊ ಸ್ಯಾನಿಟೋರಿಯಂನಲ್ಲಿ ಈ ಘಟನೆ ನಡೆದಿದೆ. ಈ ವಿಡಿಯೋ ಮುಂಜಾನೆ 3 ಗಂಟೆಗೆ ಆಸ್ಪತ್ರೆಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ದಾಖಲಾಗಿದೆ. ವೀಡಿಯೊ ಪ್ರಾರಂಭವಾದ ತಕ್ಷಣ, ಆಸ್ಪತ್ರೆಯ ಪ್ರವೇಶ ಬಾಗಿಲು ಸ್ವಯಂಚಾಲಿತವಾಗಿ ತೆರೆಯುತ್ತದೆ. ಸದ್ದು ಕೇಳಿದ ಸೆಕ್ಯುರಿಟಿ ಗಾರ್ಡ್ ಸೀಟಿನಿಂದ ಎದ್ದು ಡೆಸ್ಕ್ ಮೇಲಿದ್ದ ಕ್ಲಿಪ್ ಬೋರ್ಡ್ ತೆಗೆದುಕೊಂಡು ಬಾಗಿಲ ಕಡೆ ಹೋಗುತ್ತಾನೆ.
ಲೈನ್ ಡಿವೈಡರ್ ತೆಗೆದು ಮಾತು ಆರಂಭಿಸುತ್ತಾನೆ. ಆದರೆ ಅತ್ತ ಕಡೆ ಯಾರೂ ಇರುವುದಿಲ್ಲ. ಆ ಬಳಿಕ ವೀಲ್ ಚೇರ್ ನಲ್ಲಿ ಕುಳಿತು ಮುಂದೆ ಹೋಗುವಂತೆ ಕಾಣಿಸುತ್ತದೆ. ಈ ವಿಡಿಯೋದಲ್ಲಿ ಸೆಕ್ಯೂರಿಟಿ ಗಾರ್ಡ್ ನ ವರ್ತನೆ ನೋಡಿ ಸೋಷಿಯಲ್ ಮೀಡಿಯಾ ಬಳಕೆದಾರರು ಶಾಕ್ ಆಗಿದ್ದಾರೆ. ಹಿಂದಿನ ದಿನ ಆಸ್ಪತ್ರೆಯಲ್ಲಿ ರೋಗಿಯೊಬ್ಬರು ಸಾವನ್ನಪ್ಪಿದ್ದಾರೆ. ದೆವ್ವದ ರೂಪದಲ್ಲಿ ಬಂದಿದ್ದಾರೆ ಎಂದು ಮಾಹಿತಿ ಸದ್ಯ ಹಬ್ಬಿಸಲಾಗುತ್ತಿದೆ.
ಇದನ್ನೂ ಓದಿ: ಯಾವ ಹಣ್ಣು ಇಷ್ಟ ಎನ್ನುವ ಆಧಾರದ ಮೇಲೆ ಹೇಳಬಹುದು ವ್ಯಕ್ತಿಯ ಗುಣ ಸ್ವಭಾವ .!
ಕೆಲವು ಬಳಕೆದಾರರು ಈ ದೃಶ್ಯಾವಳಿಗಳನ್ನು ನೋಡಿ ಭಯಗೊಂಡಿದ್ದರೆ, ಇನ್ನು ಕೆಲವರು ಅದನ್ನು ನಕಲಿ ಎಂದು ತಳ್ಳಿಹಾಕುತ್ತಿದ್ದಾರೆ. ವೀಡಿಯೋ ರೆಕಾರ್ಡ್ ಆಗುತ್ತದೆ ಎಂದು ತಿಳಿದು ಸಿಬ್ಬಂದಿ ಆ ರೀತಿ ಮಾಡಿದ್ದಾನೆ ಎನ್ನುತ್ತಾರೆ. ಆದರೆ ಸ್ಥಳೀಯ ಮಾಧ್ಯಮ ಡೈಲಿ ಸ್ಟಾರ್ ಈ ಬಗ್ಗೆ ವಿಚಾರಿಸಿದಾಗ, ಗುರುವಾರ ರಾತ್ರಿ ಮತ್ತು ಶುಕ್ರವಾರ ಬೆಳಿಗ್ಗೆ 10 ಗಂಟೆಯ ನಡುವೆ 28 ಬಾರಿ ಬಾಗಿಲು ಸ್ವಯಂಚಾಲಿತವಾಗಿ ತೆರೆಯಲ್ಪಟ್ಟಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ. ಕ್ಲಿಪ್‌ಬೋರ್ಡ್ ಪೇಪರ್‌ನಲ್ಲಿ ಸೆಕ್ಯುರಿಟಿ ಗಾರ್ಡ್ ಏನೋ ಬರೆಯುತ್ತಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ.. ರಿಜಿಸ್ಟರ್‌ನಲ್ಲಿ ಏನು ಬರೆದಿಲ್ಲ ಎಂಬುದು ಸ್ಪಷ್ಟವಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.