Nostradamus Predictions 2024: 2024ರಲ್ಲಿ ಜಗತ್ತಿನ ವಿನಾಶದ ಬಗ್ಗೆ ನಾಸ್ಟ್ರಾಡಾಮಸ್ ಭಯಾನಕ ಭವಿಷ್ಯವಾಣಿಗಳು!
Nostradamus Predictions 2024: ರಾಣಿ ಎಲಿಜಬೆತ್ ಸಾವು, 2008ರ ಮುಂಬೈ ಭಯೋತ್ಪಾದಕ ದಾಳಿ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹತ್ಯೆಗೆ ಸಂಚು, ಹವಾಮಾನ ವೈಪರೀತ್ಯ, ತಾಲಿಬಾನ್ ಅಟ್ಟಹಾಸ, ಬರ, ಪ್ರವಾಹ, ಚೀನಾದ ಯುದ್ಧ, ಉಕ್ರೇನ್‌ನಲ್ಲಿನ ಯುದ್ಧ ಮತ್ತು ಗೋಧಿಯ ಬೆಲೆ ಏರಿಕೆ ಹೀಗೆ ಹಲವಾರು ಭವಿಷ್ಯವಾಣಿಗಳನ್ನು ನಾಸ್ಟ್ರಾಡಾಮಸ್ ನುಡಿದಿದ್ದಾರೆ ಎನ್ನಲಾಗಿದೆ.
Nostradamus Predictions 2024: ನಾಸ್ಟ್ರಾಡಾಮಸ್ ನುಡಿದಿರುವ ಭವಿಷ್ಯವಾಣಿಗಳ ಪೈಕಿ ಹಲವಾರು ಘಟನೆಗಳು ನಿಜವಾಗಿದೆ ಎಂದು ನಂಬುವ ಕೋಟ್ಯಂತರ ಜನರಿದ್ದಾರೆ. ಬಾಬಾ ವಂಗಾರಂತೆ ನಾಸ್ಟ್ರಾಡಾಮಸ್‌ಗೂ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಈ ಇಬ್ಬರು ಪ್ರವಾದಿಗಳ ನೂರಾರು ವರ್ಷಗಳ ಭವಿಷ್ಯವಾಣಿಗಳನ್ನು ನುಡಿದಿದ್ದಾರೆ. ಪ್ರಪಂಚದಲ್ಲಿ ನಡೆದಿರುವ ಮಹತ್ವದ ಘಟನೆಗಳ ಬಗ್ಗೆ ಈ ಪ್ರವಾದಿಗಳು ಹಲವಾರು ವರ್ಷಗಳ ಹಿಂದೆಯೇ ಭವಿಷ್ಯ ನುಡಿದಿದ್ದರು, ಅವು ನಿಜವಾಗಿವೆ ಅಂತಾ ಅವರ ಅನುಯಾಯಿಗಳು ನಂಬುತ್ತಾರೆ.
ರಾಣಿ ಎಲಿಜಬೆತ್ ಸಾವು, 2008ರ ಮುಂಬೈ ಭಯೋತ್ಪಾದಕ ದಾಳಿ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹತ್ಯೆಗೆ ಸಂಚು, ಹವಾಮಾನ ವೈಪರೀತ್ಯ, ತಾಲಿಬಾನ್ ಅಟ್ಟಹಾಸ, ಬರ, ಪ್ರವಾಹ, ಚೀನಾದ ಯುದ್ಧ, ಉಕ್ರೇನ್‌ನಲ್ಲಿನ ಯುದ್ಧ ಮತ್ತು ಗೋಧಿಯ ಬೆಲೆ ಏರಿಕೆ ಹೀಗೆ ನೂರಾರು ಭವಿಷ್ಯವಾಣಿಗಳನ್ನು ನುಡಿದಿದ್ದರು ಎನ್ನಲಾಗದೆ. ಈ ಪೈಕಿ ಅನೇಕ ಘಟನೆಗಳು ನಿಜವಾಗಿವೆಯಂತೆ. ಅದರಂತೆ 2024ರ ಬಗ್ಗೆ ಪ್ರಸಿದ್ಧ ಪ್ರವಾದಿ ನಾಸ್ಟ್ರಾಡಾಮಸ್ ಯಾವ್ಯಾವ ಭವಿಷ್ಯಗಳನ್ನು ನುಡಿದಿದ್ದಾರೆ ಅನ್ನೋದರ ಬಗ್ಗೆ ತಿಳಿಯಿರಿ.
ಇದನ್ನೂ ಓದಿ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ತೀವ್ರಗೊಂಡ ಪ್ರತಿಭಟನೆ, ಗುಂಡಿನ ದಾಳಿಗೆ ಮೂವರು ನಾಗರಿಕರು ಬಲಿ.. ಉದ್ವಿಗ್ನ ಪರಿಸ್ಥಿತಿ!
ಹವಾಮಾನ ವೈಪರೀತ್ಯ: ನಾಸ್ಟ್ರಾಡಾಮಸ್ ಪ್ರಕಾರ, 2024ರಲ್ಲಿ ಅನೇಕ ಗಂಭೀರ ಹವಾಮಾನ ಬದಲಾವಣೆಗಳು ಸಂಭವಿಸಬಹುದಂತೆ. ಬರ, ಪ್ರವಾಹ, ಕಾಡ್ಗಿಚ್ಚು ಮತ್ತು ದಾಖಲೆಯ ತಾಪಮಾನದಂತಹ ವಿಪತ್ತುಗಳ ಸಾಧ್ಯತೆಯ ಬಗ್ಗೆ ಅವರು ತಮ್ಮ ಭವಿಷ್ಯವಾಣಿಗಳಲ್ಲಿ ಉಲ್ಲೇಖಿಸಿದ್ದಾರೆ. ನಾಸ್ಟ್ರಾಡಾಮಸ್‌ನ ಈ ಭವಿಷ್ಯ ನಿಜವಾದರೆ ಜಗತ್ತಿನಲ್ಲಿ ಬಹುದೊಡ್ಡ ಕೋಲಾಹಲವೇ ಉಂಟಾಗುತ್ತದೆ.
ಅಮೆರಿಕದಲ್ಲಿ ಅಂತರ್ಯುದ್ಧ: ನಾಸ್ಟ್ರಾಡಾಮಸ್ ಹೇಳಿರುವ ಭವಿಷ್ಯವಾಣಿಯ ಪ್ರಕಾರ 2024ರಲ್ಲಿ ಅಮೆರಿಕದಲ್ಲಿ ಅಂತರ್ಯುದ್ಧ ಆರಂಭವಾಗಬಹುದು ಎಂದು ಹೇಳಲಾಗಿದೆ. ಮುಂದಿನ ವರ್ಷ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಗಳು ನಡೆಯಲಿದ್ದು, ಇಂತಹ ಪರಿಸ್ಥಿತಿಯಲ್ಲಿ ಚುನಾವಣೆ ವೇಳೆ ಅಸ್ಥಿರತೆ ಉಂಟಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಅಮೆರಿಕದ ಬಗ್ಗೆ ನಾಸ್ಟ್ರಾಡಾಮಸ್‌ನ ಈ ಭವಿಷ್ಯವು ಸಾಕಷ್ಟು ಆತಂಕಕಾರಿಯಾಗಿದೆ.
ಹೊಸ ಪೋಪ್ ಆಯ್ಕೆ?: ನಾಸ್ಟ್ರಾಡಾಮಸ್ ಭವಿಷ್ಯವಾಣಿಯ ಪ್ರಕಾರ, 2024ರಲ್ಲಿ ರೋಮನ್‌ನಲ್ಲಿ ಕ್ರೈಸ್ತರ ಪ್ರಧಾನ ಗುರುವಿಗೆ ಚುನಾವಣೆ ನಡೆಯಬಹುದು. ಪೋಪ್ ಫ್ರಾನ್ಸಿಸ್ ಅವರಿಗೆ 86 ವರ್ಷ ವಯಸ್ಸಾಗಿದ್ದು, ಅವರು ಪ್ರಸ್ತುತ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಶೀಘ್ರವೇ ಹೊಸ ಪೋಪ್ ಆಯ್ಕೆ ನಡೆಯಲಿದೆ ಎಂದು ಹೇಳಲಾಗಿದೆ.
ಬ್ರಿಟನ್‌ಗೆ ಹೊಸ ರಾಜ?: ನಾಸ್ಟ್ರಾಡಾಮಸ್ ತನ್ನ ಪುಸ್ತಕದಲ್ಲಿ ‘ದಿ ಕಿಂಗ್ ಆಫ್ ದಿ ಐಲ್ಸ್’ನ್ನು ಬಲವಂತವಾಗಿ ಹೊರಹಾಕಲಾಗುವುದು ಅಂತಾ ಉಲ್ಲೇಖಿಸಿದ್ದಾರೆ. ಅವರ ಈ ಹೇಳಿಕೆಯು ಬ್ರಿಟನ್‌ನ ಕಿಂಗ್ ಚಾರ್ಲ್ಸ್ IIIಗೆ ಸಂಬಂಧಿಸಿದೆ ಎನ್ನಲಾಗಿದೆ. ಇದರ ಪ್ರಕಾರ ಚಾರ್ಲ್ಸ್ III ತನ್ನ ಮತ್ತು ಅವನ ೨ನೇ ಹೆಂಡತಿಯ ಮೇಲಿನ ದಾಳಿಯ ಭಯದಿಂದ ರಾಜನ ಸ್ಥಾನ ತ್ಯಜಿಸುತ್ತಾರಾ ಅನ್ನೋದು ಯಕ್ಷಪ್ರಶ್ನೆಯಾಗಿದೆ. ಅಂದುಕೊಂಡಂತೆ ಆದರೆ ಪ್ರಿನ್ಸ್ ಹ್ಯಾರಿಗೆ ಬ್ರಿಟಿಷ್ ಸಿಂಹಾಸನ ದೊರೆಯಲಿದೆ ಎಂದು ಹೇಳಲಾಗಿದೆ.
ಚೀನಾದಿಂದ ಯುದ್ಧ: ನಾಸ್ಟ್ರಾಡಾಮಸ್ ತನ್ನ ಪುಸ್ತಕದಲ್ಲಿ 2024ರ ಬಗ್ಗೆ ಮತ್ತೊಂದು ಭಯಾನಕ ಭವಿಷ್ಯ ಹೇಳಿದ್ದಾನೆ. ಇದರ ಪ್ರಕಾರ, ಚೀನಾ ಹಿಂದೂ ಮಹಾಸಾಗರದಲ್ಲಿ ವಿನಾಶ ಉಂಟಾಗಲಿದ್ದು, ನೌಕಾ ಯುದ್ಧ ನಡೆಯಲಿದೆಯಂತೆ. ʼಕೆಂಪು ಶತ್ರು ಭಯದಿಂದ ಮಸುಕಾಗುತ್ತಾನೆ ಮತ್ತು ವಿಶಾಲ ಸಾಗರವನ್ನು ಹೆದರಿಸುತ್ತಾನೆ’ ಅಂತಾ ಉಲ್ಲೇಖಿಸಲಾಗಿದೆ. ಇಲ್ಲಿ ಕೆಂಪು ಶತ್ರು ಎಂದರೆ ಚೀನಾ ಅಂತಾ ನಾಸ್ಟ್ರಾಡಾಮಸ್ ಹೇಳಿದ್ದಾನೆ. ಜಗತ್ತಿನ ಮೇಲೆ ಹಿಡಿತ ಸಾಧಿಸಲು ಚೀನಾ ಯುದ್ಧ ನಡೆಸಲಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: 2050ಕ್ಕೆ ಸಮುದ್ರದಲ್ಲಿ ಮುಳಗಲಿವೆ ಭಾರತದ ಈ ಎರಡು ಬೃಹತ್ ನಗರಗಳು...!
2024ರಲ್ಲಿ ನಡೆಯುವ ವಿದ್ಯಮಾನಗಳ ಬಗ್ಗೆ ಮತ್ತು ನಾಸ್ಟ್ರಾಡಾಮಸ್ ಹೇಳಿರುವ ಭವಿಷ್ಯವಾಣಿಗಳ ಬಗ್ಗೆ ಕೋಟ್ಯಂತರ ಜನರು ತೀವ್ರ ಕುತೂಹಲವನ್ನು ಹೊಂದಿದ್ದಾರೆ. ಆದರೆ ಜಗತ್ತಿಗೆ ವಿಶಾನಕಾರಿ ಪರಿಸ್ಥಿತಿ ಎದುರಾಗುತ್ತಿದ್ದು, ಜನರು ತಮ್ಮ ದುರಾಸೆಯಿಂದ ಎಚ್ಚೆತ್ತುಕೊಳ್ಳಬೇಕೆಂದು ಅವರು ಎಚ್ಚರಿಕೆ ನೀಡಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.