Weired Pregnancy News: ಹೆಚ್ಚಿನ ಮಹಿಳೆಯರಿಗೆ, ತಾಯಿಯಾಗುವುದು ಜೀವನದಲ್ಲಿ ಪ್ರಮುಖ ಒಂದು ಬದಲಾವಣೆಯಂತೆ ಕಂಡುಬರುತ್ತದೆ. ಮಹಿಳೆಯಿಂದ ಮಕ್ಕಳಿಗೆ ಜನ್ಮ ನೀಡುವುದು ಅವಳಿಗೆ ಅತ್ಯಂತ ಕಷ್ಟಕರ ಮತ್ತು ಅಷ್ಟೇ ಸಂತೋಷದ ಕ್ಷಣವಾಗಿರುತ್ತದೆ. ಮಹಿಳೆಯರ ಗರ್ಭಾವಸ್ಥೆಯ ಒಂದು ಚಕ್ರವು 9 ತಿಂಗಳುಗಳದ್ದಾಗಿರುತ್ತದೆ ಎಂಬುದು ಸಾಮಾನ್ಯವಾಗಿ ನಮ್ಮೆಲ್ಲರಿಗೂ ತಿಳಿದ ಒಂದು ಸತ್ಯ ಸಂಗತಿ, ಆದರೆ ಕೆಲ ವಿಶೇಷ ಸಂದರ್ಭಗಳಲ್ಲಿ, ಮಗು ಏಳನೇ ಅಥವಾ ಎಂಟನೇ ತಿಂಗಳಲ್ಲಿ ಜನಿಸುತ್ತದೆ. ಆದರೆ ಪ್ರಸ್ತುತ ವೈದ್ಯ ಲೋಕವನ್ನೇ ಬೆಚ್ಚಿಬೀಳಿಸಿದ ಪ್ರಕರಣವೊಂದು ಮುನ್ನೆಲೆಗೆ ಬಂದಿದ್ದು, ಇದರಲ್ಲಿ ಓರ್ವ ಮಹಿಳೆ 9 ತಿಂಗಳು ಅಲ್ಲ ಸುಮಾರು 9 ವರ್ಷಗಳ ಕಾಲ ಗರ್ಭಿಣಿಯಾಗಿದ್ದಳು. ಇದಾದ ಬಳಿಕ ಆಕೆಯ  ಹೊಟ್ಟೆಯಿಂದ ಮಗುವಿನ ಬದಲು ಗಟ್ಟಿಯಾದ ಕಲ್ಲು ಹೊರಬಂದಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-Viral Video: ಬೇಕಿದ್ರೆ ಬೆಟ್ ಕಟ್ಟಿ... ಇಂಥ ಸಾಹಸ ಭರಿತ ಪ್ರೀ-ವೇಡ್ಡಿಂಗ್ ಷೂಟ್ ನೀವು ನಿಮ್ಮ್ ಲೈಫಲ್ಲೆ ನೋಡಿರ್ಲಿಕ್ಕಿಲ್ಲ!


ಪ್ರಕರಣ ಏನು?
ಇಲ್ಲಿ ಪ್ರಸ್ತಾಪಿಸಿರುವ ವಿಷಯ ಅಮೆರಿಕದ ಕಾಂಗೋ ನಗರದಿಂದ ಹೊರಹೊಮ್ಮಿದೆ. ಡೈಲಿ ಮೇಲ್ ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಅಮೆರಿಕದ ಮಹಿಳೆಯೊಬ್ಬರು ಸುಮಾರು 9 ವರ್ಷಗಳ ಕಾಲ ಗರ್ಭಿಣಿಯಾಗಿದ್ದು, ನಂತರ ಆಕೆಯ  ಹೊಟ್ಟೆಯಿಂದ ಕಲ್ಲು ಹೊರಬಂದಿದೆ. ನಿಮ್ಮ ಮಾಹಿತಿಗಾಗಿ ಹೇಳುವುದಾದರೆ, ಸಾಮಾನ್ಯವಾಗಿ ಇಂತಹ  ಘಟನೆಗಳನ್ನು ವೈದ್ಯಕೀಯ ಭಾಷೆಯಲ್ಲಿ ಲಿಥೋಪಿಡಿಯನ್ ಎಂದು ಕರೆಯಲಾಗುತ್ತದೆ. ಇದರಲ್ಲಿ, ರಕ್ತವು ಸಾಕಷ್ಟು ಪ್ರಮಾಣದಲ್ಲಿ ಮಗುವನ್ನು ತಲುಪುವುದಿಲ್ಲ ಮತ್ತು ಗರ್ಭಾವಸ್ಥೆಯಲ್ಲಿ ಅದರ ಬೆಳವಣಿಗೆಯು ನಿಂತುಹೋಗುತ್ತದೆ. ಅಮೆರಿಕದ ಮಹಿಳೆಯ ವಿಷಯದಲ್ಲೂ ಇದೇ ರೀತಿ ಆಗಿದೆ.


ಇದನ್ನೂ ಓದಿ-Viral Video: ರಸ್ತೆಗಿಳಿದ ವಿಶ್ವದ ಅತಿ ದೊಡ್ಡ ಹಾವು ಅನಕೊಂಡ, ನೋಡಿ ಸ್ಥಭ್ದರಾದ ಜನ!


ವೈದ್ಯರು ನೀಡಿದ ಮಾಹಿತಿ ಏನು?
ಮಹಿಳೆಯ ಗರ್ಭಾವಸ್ಥೆಯ ಏಳನೇ ತಿಂಗಳಿನಲ್ಲಿ ಮಗುವಿನ ಚಲನೆ ಇರಲಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಮಹಿಳೆ ತನ್ನ ಮಗುವಿಗೆ ಗರ್ಭಪಾತವಾಗಿದೆ ಎಂದು ಭಾವಿಸಿದ್ದಾಳೆ, ಆದರೆ ವೈದ್ಯರು ಅದು ಸಂಭವಿಸಿಲ್ಲ ಎಂದು ಹೇಳಿದ್ದಾರೆ. ಆದರೆ ಮಗು ಜೀವಂತವಾಗಿಲ್ಲ ಎಂದಿದ್ದಾರೆ. ಇದಾದ ನಂತರ ವೈದ್ಯರು ಹಲವಾರು ಔಷಧಿಗಳನ್ನು ಬರೆದಿದ್ದಾರೆ ಮತ್ತು ಮಹಿಳೆಯನ್ನು ಮತ್ತೆ ತಪಾಸಣೆಗೆ ಕರೆದಿದ್ದಾರೆ. ಮನೆಗೆ ತಲುಪಿದ ಮಹಿಳೆಯನ್ನು ಜನರು ಮೂದಲಿಸಲು ಪ್ರಾರಂಭಿಸಿದ್ದಾರೆ, ನಂತರ ಅವಳು ಮಗುವಿನ ಶಸ್ತ್ರಚಿಕಿತ್ಸೆಗೆ ಆಸ್ಪತ್ರೆಗೆ ಹೋಗಲಿಲ್ಲ ಮತ್ತು 9 ವರ್ಷಗಳವರೆಗೆ ಸತ್ತ ಮಗುವನ್ನು ಗರ್ಭದಲ್ಲಿಯೇ ಇರಿಸಿದ್ದಾಳೆ. ಇಂತಹ ಪರಿಸ್ಥಿತಿಯಲ್ಲಿ ಮಹಿಳೆ ಯಾವುದೇ ಆಹಾರವನ್ನು ಸೇವಿಸಿದಾಗ ಅದನ್ನು ಅರಗಿಸಿಕೊಳ್ಳಲು ಸಾಧ್ಯವಾಗದೆ ಕ್ರಮೇಣ ಅಪೌಷ್ಟಿಕತೆಗೆ ಬಲಿಯಾಗುತ್ತಾಳೆ. ಹೆಚ್ಚುತ್ತಿರುವ ಅಪೌಷ್ಟಿಕತೆಯಿಂದ ಮಹಿಳೆ ಸಾವನ್ನಪ್ಪಿದ್ದಾಳೆ. ಶಸ್ತ್ರಚಿಕಿತ್ಸೆ ನಡೆಸಿದ ಬಳಿಕ ಮಹಿಳೆಯ ಹೊಟ್ಟೆಯಲ್ಲಿದ್ದ ಮಗು ಸಂಪೂರ್ಣವಾಗಿ ಕಲ್ಲಾಗಿರುವುದನ್ನು ವೈದ್ಯರು ಪತ್ತೆ ಮಾಡಿದ್ದಾರೆ. ಮಹಿಳೆಯ ಹೊಟ್ಟೆಯಲ್ಲಿದ್ದ ಭ್ರೂಣವು ಕಲ್ಲಾಗಿ ನಂತರ ಕರುಳಿನಲ್ಲಿ ಸಿಲುಕಿಕೊಂಡಿದೆ, ಇದರಿಂದಾಗಿ ಅವರು ಸಾವನ್ನಪ್ಪಿದ್ದಾರೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.