ಹೌದು ಇನ್ನು ಮುಂದೆ ನೀವು ಪೆಟ್ರೋಲ್ ಪಂಪ್ಗಳಲ್ಲಿ ಕ್ಯೂಗಟ್ಟಿ ನಿಲ್ಲುವ ಪರಿಪಾಠಕ್ಕೆ ಕೊನೆ ಬಿಳಲಿದೆ.
ಇತ್ತಿಚೇಗೆ ಬ್ರಿಟನ್ನಲ್ಲಿ  ವಿಜ್ಞಾನಿಗಳು ಬಿಯರನ್ನು ವಾಹನದ ಇಂಧನವಾಗಿ ಬಳಸಬಹುದೆಂದು ತಮ್ಮ ಸಂಶೋಧನೆಯಲ್ಲಿ ಕಂಡು ಹಿಡಿದಿದ್ದಾರೆ.ಆ ಮೂಲಕ ಪೆಟ್ರೋಲ್ ಮೇಲಿನ ಹೊರೆಗೆ ಇನ್ನು ತೆರೆ ಬಿಳಲಿದೆ ಎಂದು ಹೇಳಲಾಗುತ್ತಿದೆ.  


COMMERCIAL BREAK
SCROLL TO CONTINUE READING

ಈ ಸಂಶೋಧನೆಯ ನೇತೃತ್ವ ವಹಿಸಿರುವ ಬ್ರಿಟನ್ ನ ಬ್ರಿಸ್ಟೋಲ್  ವಿಶ್ವವಿದ್ಯಾನಿಲಯದಲ್ಲಿ ಸಂಶೋಧಕರಾಗಿರುವ ಡಂಕನ್ ವಾಸ್ರವರ ಅಭಿಪ್ರಾಯದಂತೆ ಮದ್ಯವು ಕೂಡ ಕೂಡ ಎಥೆನಾಲ್ ಆಗಿದ್ದು ಇದನ್ನು ಬುಥನಾಲ್ ಆಗಿ ಪರಿವರ್ತಿಸುವುದರ ಮೂಲಕ ಇದನ್ನು ಪೆಟ್ರೋಲ್ ರೀತಿಯಲ್ಲೇ ಬಳಸಬಹುದೆಂದು ತಿಳಿಸಿದ್ದಾರೆ.


ಆದರೆ ವಿಜ್ಞಾನಿಗಳು ಹೇಳುವಂತೆ ಇದು  ನೀರಿನೊಂದಿಗೆ ಸುಲಭವಾಗಿ ಬೆರೆಯುವುದರಿಂದ ಇದನ್ನು ಪೆಟ್ರೋಲ್ಗೆ ಪರ್ಯಾಯವಲ್ಲ ಎಂದು ಹೇಳಲಾಗುತ್ತಿದೆ.  ಹಲವಾರು ವರ್ಷಗಳ ಸಂಶೋಧನೆಯ ಪ್ರತಿಫಲವಾಗಿ ವಿಜ್ಞಾನಿಗಳು ಎಥೆನಾಲ್ ಅನ್ನು ಬುತನಾಲ್ ಆಗಿ ಪರಿವರಿವರ್ತಿಸಲು ಯಶಸ್ವಿಯಾಗಿದ್ದಾರೆ. ಇನ್ನು ಎಥೆನಾಲ್ ನ ಗುಣಮಟ್ಟವನ್ನು ಹೆಚ್ಚಿಸಿ ಅದನ್ನು ಪರಿಶುದ್ದ ಬುಥನಾಲ್ ಆಗಿ ಪರಿವರ್ತನೆಯಾದಲ್ಲಿ ಇದನ್ನು ಪೆಟ್ರೋಲ್ ರೀತಿಯಲ್ಲೇ ಬಳಸಬಹುದೆಂದು ಅವರು ಅಭಿಪ್ರಾಯಪಟ್ಟಿದ್ದಾರೆ.