ನವದೆಹಲಿ: War Between America And North Korea - ರಷ್ಯಾ ಉಕ್ರೇನ್ ಮೇಲೆ ಆಕ್ರಮಣ (Ukraine Russia War 2022) ಮಾಡಿದ ಕೆಲವೇ ವಾರಗಳಲ್ಲಿ ಯುಎಸ್ ಮತ್ತು ಉತ್ತರ ಕೊರಿಯಾ ನಡುವಿನ ಯುದ್ಧವು (North Korea War With Usa) ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಟೈಮ್ ಟ್ರಾವೆಲರ್ ಎಚ್ಚರಿಕೆ ನೀಡಿದ್ದಾನೆ. ಮಾರ್ಚ್ 10 ರಂದು ' ಎ ಟೈಮ್ ವಾರ್ಪರ್' (2022 Time Traveller) ಮೂಲಕ ಟಿಕ್-ಟಾಕ್ ಮೇಲೆ  ಹಂಚಿಕೊಳ್ಳಲಾಗಿರುವ ವಿಡಿಯೋದಲ್ಲಿ ಅಪಾಯಕಾರಿ ಘಟನೆಗಳ ಒಂದು ಭವಿಷ್ಯವಾಣಿ (Bhavishyavani) ಮಾಡಲಾಗಿದ್ದು, ಇದು 2022 ವರ್ಷಕ್ಕೆ ಸಂಬಂಧಿಸಿದೆ ಎನ್ನಲಾಗಿದೆ.

COMMERCIAL BREAK
SCROLL TO CONTINUE READING

ಈ ಮುನ್ಸೂಚನೆಯ ಪ್ರಕಾರ ಉತ್ತರ ಕೊರಿಯಾ (North Korea War) ಮತ್ತು ಅಮೆರಿಕ ನಡುವೆ ಯುದ್ಧ ನಡೆಯಬಹುದು ಎಂದು ಡೈಲಿ ಸ್ಟಾರ್ ನಲ್ಲಿ ಪ್ರಕಟವಾಗಿರುವ ವರದಿ ಹೇಳಿದೆ. ಯಾರು ಮೊದಲ ಹೆಜ್ಜೆ ಇಡುತ್ತಾರೆ ಎಂಬುದನ್ನು ವೀಡಿಯೊ ವಿವರಿಸದಿದ್ದರೂ, ಇದು ಉತ್ತರ ಕೊರಿಯಾದ ಆಕ್ರಮಣ ಆಗಿರಲಿದೆ ಎಂದು ಓರ್ವ  ಟಿಕ್‌ಟಾಕರ್ ಕಾಮೆಂಟ್ ಮಾಡಿದ್ದಾನೆ.

ವಿಡಿಯೋದಲ್ಲಿ ನೀಡಲಾಗಿರುವ ಲಿಸ್ಟ್ ಈ ಕೆಳಗಿನಂತಿದೆ
>> ಮಾರ್ಚ್ 22 - ಉತ್ತರ ಕೊರಿಯಾ ಮತ್ತು ಅಮೆರಿಕ ನಡುವೆ ಯುದ್ಧ.

>> ಏಪ್ರಿಲ್ 19 - ಹೊಸ ಕೋವಿಡ್ ರೂಪಾಂತರಿಯ ಎಂಟ್ರಿ, ಇದನ್ನು ಒಮೆಗಾ ಎಂದು ಕರೆಯಲಾಗುತ್ತದೆ ಮತ್ತು ಇದು ಎಲ್ಲ ರೂಪಾಂತರಿಗಿಂತ 5 ಪಟ್ಟು ಹೆಚ್ಚು ಅಪಾಯಕಾರಿಯಾಗಿರಲಿದೆ.

>>  ಮೇ 24 - ನಾಸಾ 'KLET-33' ಎಂಬ ಹೆಸರಿನ ಮತ್ತೊಂದು ಗ್ರಹವನ್ನು ಪತ್ತೆಹಚ್ಚಲಿದ್ದು ಮತ್ತು ಅದರಲ್ಲಿ ಜೀವನದ ಸಾದ್ಯತೆ ಇರಲಿದೆ.

>> ಜೂನ್ 28 - 5 ಅತ್ಯಂತ ಅಪಾಯಕಾರಿ ಚಂಡಮಾರುತಗಳಲ್ಲಿ ಒಂದು ಜಾರ್ಜಿಯಾ ಮತ್ತು ದಕ್ಷಿಣ ಕೆರೊಲಿನಾ ನಡುವೆ ಅಪ್ಪಳಿಸಲಿದೆ.

>> ಜುಲೈ 13 - ದಂತಕಥೆ ಎಂದು ಕರೆಯಲ್ಪಡುವ ಅತ್ಯಂತ ಪ್ರಸಿದ್ಧ ರಾಪರ್‌ಗಳಲ್ಲಿ ಒಬ್ಬರು, ಅವ ತಮ್ಮ ಸಾವನ್ನು ನಕಲಿ ಮಾಡಿದ್ದಾರೆ ಎಂದು ಹೇಳಲಿದ್ದಾರೆ.

>> ಜುಲೈ 23 - ಇತಿಹಾಸದ ಅತ್ಯಂತ ಪ್ರಬಲವಾದ ಭೂಕಂಪವು ಎಲ್ಎ, ಕ್ಯಾಲಿಫೋರ್ನಿಯಾಕ್ಕೆ ಅಪ್ಪಳಿಸಲಿದೆ ಮತ್ತು ಅದು  'ದಿ ಜೈಂಟ್ ವೇವ್' ಗೆ ಕಾರಣವಾಗಲಿದೆ.

>> ಆಗಸ್ಟ್ 3 - 2 ಡೈವರ್‌ಗಳು ಅಟ್ಲಾಂಟಿಕ್ ಮಹಾ ಸಾಗರದಲ್ಲಿ ನೀರಿನೊಳಗಿನ ನಗರವೊಂದನ್ನು ಪತ್ತೆಹಚ್ಚಲಿದ್ದಾರೆ.

>> ಆಗಸ್ಟ್ 17 - ರೇನ್ಬೋ ಫನ್‌ಹೌಸ್ ಎಂದು ಕರೆಯಲ್ಪಡುವ ಸೀಮಿತ ಸ್ಥಳವನ್ನು ಮರುಸೃಷ್ಟಿಸಲಾಗುವುದು ಮತ್ತು ನವೆಂಬರ್ 30 ರಂದು ಅದು ತನ್ನ ಬಾಗಿಲನ್ನು ತೆರೆಯಲಿದೆ.

>> ಸೆಪ್ಟೆಂಬರ್ 1 - '4 ವೆಸ್ಟಾ' ಹೆಸರಿನ ಉಲ್ಕೆಯು ಭೂಮಿಯ ಸಮೀಪ ಹಾದುಹೋಗಲಿದೆ ಮತ್ತು ಅದು ಚೀನಾದ ಕರಾವಳಿಗೆ ಬಹುತೇಕ ಅಪ್ಪಳಿಸುತ್ತದೆ.


ಇದನ್ನೂ ಓದಿ-Serial Blast In Sialkot Of Pakistan: ಪಾಕಿಸ್ತಾನದ ಸಿಯಾಲ್ಕೊಟ್ ನಲ್ಲಿ ಸರಣಿ ಬಾಂಬ್ ಬ್ಲಾಸ್ಟ್, ಸೇನಾ ನೆಲೆಗೆ ಬೆಂಕಿ

>> 26 ಸೆಪ್ಟೆಂಬರ್ - ಮತ್ತೊಂದು ಸಾಂಕ್ರಾಮಿಕ ರೋಗದಿಂದಾಗಿ ಎಲ್ಲಾ ಶಾಲೆಗಳನ್ನು ಮುಚ್ಚಲಾಗುವುದು ಮತ್ತು ಸಾಂಕ್ರಾಮಿಕ ರೋಗವು ಕೋವಿಡ್‌ಗಿಂತ ಕೆಟ್ಟದಾಗಿರಲಿದೆ.


ಇದನ್ನೂ ಓದಿ-International Day of Happiness 2022: ಅಂತರಾಷ್ಟ್ರೀಯ ಸಂತೋಷ ದಿನದ ಮಹತ್ವ ಮತ್ತು ಇತಿಹಾಸ

>> ಅಕ್ಟೋಬರ್ 14 - ಏಲಿಯನ್ಸ್ ಗಳು ಭೂಮಿಗೆ ಬರಲಿವೆ ಮತ್ತು ಅವುಗಳಲ್ಲಿ ಕೆಲವು ಏಲಿಯನ್ ಗಳು ನಮ್ಮೊಂದಿಗೆ ಸಂವಹನ ನಡೆಸಲಿವೆ ಮತ್ತು ಕೆಲ ಏಲಿಯನ್ಸ್ ಮನುಷ್ಯರ ಮೇಲೂ ದಾಳಿ ಮಾಡಲಿವೆ.


ಇದನ್ನೂ ಓದಿ-ಕಾಗದದ ಕೊರತೆಯಿಂದ ಶಾಲಾ ಪರೀಕ್ಷೆಗಳನ್ನು ರದ್ದುಗೊಳಿಸಿದ ಶ್ರೀಲಂಕಾ..!



ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.