ಟೆಹ್ರಾನ್: ಇರಾನಿನ ಹಲವು ಭಾಗಗಳಲ್ಲಿ ಸಂಭವಿಸಿರುವ ಪ್ರವಾಹದಲ್ಲಿ 19 ಜನರು ಮೃತಪಟ್ಟಿದ್ದಾರೆ ಮತ್ತು 90 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಇರಾನ್ ನ ತುರ್ತು ಸೇವಾ ಸಂಸ್ಥೆ ಸೋಮವಾರ ತಿಳಿಸಿದೆ.


COMMERCIAL BREAK
SCROLL TO CONTINUE READING

ದಕ್ಷಿಣದ ಶಿಯರ್ ನಗರದಲ್ಲಿ 17 ಜನರು ಸಾವನ್ನಪ್ಪಿದ್ದು, 94 ಜನ ಗಾಯಗೊಂಡಿದ್ದಾರೆ. ಅದೇ ಸಮಯದಲ್ಲಿ ಸರ್ಪೋಲ್-ಎ-ಝಹೀಬ್ ಮತ್ತು ಪಶ್ಚಿಮ ಪ್ರಾಂತ್ಯದ ಕರಣ್ಶಾಹ್ನ ಲೋರೆನ್ನಲ್ಲಿ ಒಬ್ಬರು ಮರಣಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.


ದೇಶದ 31 ಪ್ರಾಂತ್ಯಗಳ ಪೈಕಿ 25 ಪ್ರಾಂತ್ಯಗಳಲ್ಲಿ ಇರಾನ್ ಭಾರಿ ಪ್ರವಾಹ ಎದುರಿಸುತ್ತಿದೆ ಎಂದು ದೇಶದ ವಿಪತ್ತು ನಿರ್ವಹಣೆ ಸಂಸ್ಥೆ ಹೇಳಿದೆ.


ಈಶಾನ್ಯ ಗೋಲಿಸ್ತಾನ್ ಮತ್ತು ಮಜ್ನಾರನ್ ಪ್ರಾಂತ್ಯಗಳಲ್ಲಿ ಮಾರ್ಚ್ 19 ರಂದು ಭಾರಿ ಪ್ರವಾಹ ಉಂಟಾಗಿತ್ತು. ಆದರೆ, ಈ ಎರಡು ಪ್ರಾಂತ್ಯಗಳಲ್ಲಿ ಪ್ರವಾಹದಿಂದಾಗಿ ಯಾವುದೇ ಸಾವುನೋವುಗಳು ಸಂಭವಿಸಿರಲಿಲ್ಲ.