ನವದೆಹಲಿ: ಇಡೀ ಪ್ರಪಂಚವು ಅಸಂಖ್ಯಾತ ರಹಸ್ಯಗಳಿಂದ(Mysterious World) ತುಂಬಿದೆ. ವಿಜ್ಞಾನಿಗಳು ಸಹ ಇಲ್ಲಿಯವರೆಗೆ ಪರಿಹರಿಸಲು ಸಾಧ್ಯವಾಗದ ಅನೇಕ ರಹಸ್ಯಗಳಿವೆ. ಅಂತಹ ಒಂದು ರಹಸ್ಯದ ಬಗ್ಗೆ ನಾವು ನಿಮಗೆ ಹೇಳಲಿದ್ದೇವೆ, ಇದು ನಿಮಗೆ ಆಶ್ಚರ್ಯವಾಗುತ್ತದೆ. ಈ ರಹಸ್ಯವು ನಿಗೂಢ ಸಾವಿನ ಕುರ್ಚಿಗೆ ಸಂಬಂಧಿಸಿದೆ.


COMMERCIAL BREAK
SCROLL TO CONTINUE READING

ದಿ ನಾರ್ದರ್ನ್ ಎಕೋ ವೆಬ್‌ಸೈಟ್‌ನ(The Northern Echo website) ಪ್ರಕಾರ, ಇಲ್ಲಿಯವರೆಗೆ ಈ ಕುರ್ಚಿಯ ಮೇಲೆ ಕುಳಿತವರು ಒಂದಲ್ಲ ಒಂದು ಕಾರಣದಿಂದ ಸಾವನ್ನಪ್ಪಿದ್ದಾರಂತೆ. ಇಲ್ಲಿಯವರೆಗೆ ಈ ಕುರ್ಚಿಯಲ್ಲಿ ಕುಳಿತಿದ್ದ 63 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈಗ ಈ ಕುರ್ಚಿಯನ್ನು ಇಂಗ್ಲೆಂಡ್‌ನ ವಸ್ತುಸಂಗ್ರಹಾಲಯದಲ್ಲಿ ಇರಿಸಲಾಗಿದೆ.


ಇದನ್ನೂ ಓದಿ: Trending News: ನಗರಕ್ಕಪ್ಪಳಿಸಿದ ಭೀಕರ ಬಿರುಗಾಳಿ, ಬಳಿಕ ನಡೆದ ಚೇಳುಗಳ ದಾಳಿಗೆ 500 ಜನ ಅಸ್ವಸ್ಥ


ಸಾವಿನ ಕುರ್ಚಿಯನ್ನು ಗೋಡೆಗೆ ನೇತು ಹಾಕಲಾಗಿದೆ


ಈ ಖುರ್ಚಿಯ(Busby Stoop Chair) ಮೇಲೆ ಕುಳಿತರೆ ಸಾವು ಖಚಿತ ಎಂಬ ಹೆದರಿಕೆಯಿಂದ ಗೋಡೆಗೆ ನೇತು ಹಾಕಲಾಗಿದೆ. ನೆಲದ ಮೇಲೆ ಇಟ್ಟರೆ ಎಲ್ಲಿ ಯಾರಾದರೂ ಅದರ ಮೇಲೆ ಕುಳಿತು ತಮ್ಮ ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಾರೋ ಅನ್ನೋ ಹೆದರಿಕೆಯಿಂದ ಈ ಸಾವಿನ ಕುರ್ಚಿಯನ್ನು ಹಗ್ಗದ ಸಹಾಯದಿಂದ ವಸ್ತುಸಂಗ್ರಹಾಲಯದಲ್ಲಿ ಹೀಗೆ ಗೋಡೆಗೆ ನೇತುಹಾಕಲಾಗಿದೆ.


ಈ ನಿಗೂಢ ಕುರ್ಚಿ ಸಾವಿರಾರು ಜನರಿಗೆ ಅಚ್ಚರಿಯ ಜೊತೆಗೆ ಆಶ್ಚರ್ಯವನ್ನುಂಟು ಮಾಡಿದೆ. ಈ ಕುರ್ಚಿ ಥಾಮಸ್ ಬಸ್ಬಿ(Thomas Busby Chair) ಎಂಬ ವ್ಯಕ್ತಿಗೆ ಸೇರಿದ್ದು ಎನ್ನಲಾಗಿದೆ. ವರದಿಗಳ ಪ್ರಕಾರ ಬಸ್ಬಿ ಈ ಕುರ್ಚಿಯನ್ನು ತುಂಬಾ ಪ್ರೀತಿಸುತ್ತಿದ್ದರು ಮತ್ತು ಈ ಕುರ್ಚಿಯ ಮೇಲೆ ಯಾರಿಗೂ ಕುಳಿತುಕೊಳ್ಳಲು ಅವಕಾಶ ನೀಡುತ್ತಿರಲಿಲ್ಲವಂತೆ. ಒಮ್ಮೆ ಅವರ ಮಾವ ಅವರ ನೆಚ್ಚಿನ ಕುರ್ಚಿಯ ಮೇಲೆ ಕುಳಿತುಕೊಂಡಿದ್ದರಂತೆ. ಇದರಿಂದ ಕೋಪಗೊಂಡ ಥಾಮಸ್ ತನ್ನ ಮಾವನನ್ನೇ ಕೊಂದಿದ್ದರಂತೆ.  


ಇದನ್ನೂ ಓದಿ: Viral Online Marriage: Facebook ನಲ್ಲಿ ಹುಟ್ಟಿದ ಪ್ರೀತಿ, Video Call ಮೂಲಕ ವಿವಾಹ, ಮಿಲನ ಇನ್ನೂ ಬಾಕಿ


ನಿಗೂಢ ಸಾವಿನ ಕುರ್ಚಿಯ ಕಥೆ ಭಯಾನಕವಾಗಿದೆ


ತನ್ನ ಮಾವನನ್ನು ಕೊಂದ ನಂತರ ಥಾಮಸ್‌ಗೆ ಮರಣದಂಡನೆ ವಿಧಿಸಲಾಯಿತು. ವರದಿಯ ಪ್ರಕಾರ ಥಾಮಸ್ ಸಾಯುವ ಮೊದಲು ಶಾಪ(Cursed Chair) ನೀಡಿದ್ದಾನಂತೆ. ತನ್ನಿಷ್ಟದ ಕುರ್ಚಿಯ ಮೇಲೆ ಕುಳಿತುಕೊಳ್ಳುವವನು ಸಾಯುತ್ತಾರೆ ಎಂದು ಆತ ಹೇಳಿದ್ದನಂತೆ. ಆದರೆ ಥಾಮಸ್ ಅವರ ಈ ಶಾಪವನ್ನು ಜನರು ಗಂಭೀರವಾಗಿ ಪರಿಗಣಿಸದೆ ಕುರ್ಚಿಯ ಮೇಲೆ ಕುಳಿತು ತಪ್ಪು ಮಾಡಿದ್ದಾರೆ. ಈ ಖುರ್ಚಿಯ ಮೇಲೆ ಕುಳಿತು ತಪ್ಪು ಮಾಡಿದವರು ಒಂದಲ್ಲ ಒಂದು ಕಾರಣದಿಂದ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.


2ನೇ ಮಹಾಯುದ್ಧದ ಸಮಯದಲ್ಲಿ ಕೆಲವು ಸೈನಿಕರು ಈ ಕುರ್ಚಿಯ(Haunted Chair) ಮೇಲೆ ಕುಳಿತಿದ್ದರು. ಇದರ ನಂತರ ಒಬ್ಬನೇ ಒಬ್ಬ ಸೈನಿಕನೂ ಬದುಕಲು ಸಾಧ್ಯವಾಗಲಿಲ್ಲ. ಥಾಮಸ್ ಬಸ್ಬಿ ಅವರ ಆತ್ಮ ಇನ್ನೂ ಕುರ್ಚಿಯಲ್ಲಿದೆ ಎಂದು ಹೇಳಲಾಗುತ್ತದೆ. ಎಷ್ಟೋ ಸಾವುಗಳ ನಂತರ ಈ ಕುರ್ಚಿ ಜನರಿಂದ ದೂರವಾಗಿದೆ. ಇದನ್ನು ಈಗ ಡೆತ್ ಚೇರ್ ಎಂದು ಕರೆಯಲಾಗುತ್ತದೆ. ಸದ್ಯ ಮ್ಯೂಸಿಯಂನಲ್ಲಿ ಇಟ್ಟಿರುವ ಈ ಖುರ್ಚಿಯನ್ನು ನೋಡುವುದಕ್ಕೂ ಜನ ಹೆದರುತ್ತಾರಂತೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.