Viral Online Marriage: Facebook ನಲ್ಲಿ ಹುಟ್ಟಿದ ಪ್ರೀತಿ, Video Call ಮೂಲಕ ವಿವಾಹ, ಮಿಲನ ಇನ್ನೂ ಬಾಕಿ

Unique Marriage: ವರದಿಗಳ ಪ್ರಕಾರ, ಕರೋನಾದಿಂದಾಗಿ, ಯುಕೆಯಲ್ಲಿ ಲಾಕ್‌ಡೌನ್ ಇತ್ತು. ಈ ಸಂದರ್ಭದಲ್ಲಿ ಐಸೆ ಹೆಸರಿನ ಯುವತಿ ಫೇಸ್ಬುಕ್ ಗುಂಪಿಗೆ ಸೇರಿದ್ದಾಳೆ. ಅಲ್ಲಿ ಅವಳು 56 ವರ್ಷದ ಮಹಿಳೆ ಕೆಂಡಾಳನ್ನು ಭೇಟಿಯಾಗಿದ್ದಾಳೆ.   

Written by - Nitin Tabib | Last Updated : Nov 16, 2021, 12:57 PM IST
  • ಲಾಕ್ ಡೌನ್ ನಲ್ಲಿ ಫೇಸ್ ಬುಕ್ ನಲ್ಲಿ ಭೇಟಿ.
  • ಪ್ರೇಮಕ್ಕೆ ತಿರುಗಿದ ಗೆಳೆತನ
  • ಜೂಮ್ ಕಾಲ್ ಮೂಲಕ ಕಾನೂನು ಬದ್ಧ ವಿವಾಹ
Viral Online Marriage: Facebook ನಲ್ಲಿ ಹುಟ್ಟಿದ ಪ್ರೀತಿ, Video Call ಮೂಲಕ ವಿವಾಹ, ಮಿಲನ ಇನ್ನೂ ಬಾಕಿ title=
Viral Online Marriage (File Photo)

Online Marriage: ಜೀವನದ ದೊಡ್ಡ ನಿರ್ಧಾರಗಳಲ್ಲಿ ಮದುವೆಯ ನಿರ್ಧಾರವೂ ಒಂದು ಎಂದು ಹೇಳಲಾಗುತ್ತದೆ. ಜನರು ತಮ್ಮ ಭವಿಷ್ಯದ ಸಂಗಾತಿಯನ್ನು ಮದುವೆಯಾಗುವ ಮೊದಲು ಅನೇಕ ಬಾರಿ ಭೇಟಿಯಾಗುತ್ತಾರೆ ಮತ್ತು ಸಾಕಷ್ಟು ಸಮಯವನ್ನು ಕಳೆಯುತ್ತಾರೆ. ಆ ನಂತರವೇ ಮದುವೆಯ ನಿರ್ಧಾರ ತೆಗೆದುಕೊಳ್ಳುತ್ತಾರೆ. ಆದರೆ, ವಧು-ವರರು ಪ್ರೇಮವಿವಾಹ ಮಾಡಿಕೊಂಡಿದ್ದು, ಮುಖಾಮುಖಿಯಾಗಿ ನೋಡದೇ ಆನ್‌ಲೈನ್‌ನಲ್ಲಿ ಮದುವೆಯನ್ನೂ ಮಾಡಿಕೊಂಡಿರುವ ಬಗ್ಗೆ ಕೇಳಿದ್ದೀರಾ. ಹೌದು ನೀವು ಓದಿದ್ದು ಸರಿ!

ಬ್ರಿಟನ್‌ನ 26 ವರ್ಷದ ಯುವತಿ ಐಸೆ (Ayse) ಮತ್ತು ಅಮೆರಿಕದ (America) 24 ವರ್ಷದ ಡ್ಯಾರಿನ್‌  (Darrin) ಜೀವನದಲ್ಲಿ ಇಂತಹುದೊಂದು ಪ್ರಸಂಗ ನಡೆದು ಹೋಗಿದೆ. ಇಬ್ಬರೂ ಪರಸ್ಪರ ಭೇಟಿಯಾಗದೆ ಜೂಮ್ ಕಾಲ್ (Zoom Call) ಮೂಲಕ ಮದುವೆಯಾಗಿದ್ದಾರೆ. ಇಬ್ಬರೂ ಫೇಸ್‌ಬುಕ್ (Facebook) ಮೂಲಕ ಭೇಟಿಯಾಗಿದ್ದಾರೆ ಮತ್ತು ನಂತರ ಇಬ್ಬರೂ ಪರಸ್ಪರ ಪ್ರೀತಿಸಿದ್ದರೆ. ಇದಾದ ಬಳಿಕ ಇಬ್ಬರೂ ಆನ್‌ಲೈನ್‌ನಲ್ಲಿ ಮದುವೆಯಾಗಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ- Trending News: ನಗರಕ್ಕಪ್ಪಳಿಸಿದ ಭೀಕರ ಬಿರುಗಾಳಿ, ಬಳಿಕ ನಡೆದ ಚೇಳುಗಳ ದಾಳಿಗೆ 500 ಜನ ಅಸ್ವಸ್ಥ

ವರದಿಗಳ ಪ್ರಕಾರ ಕರೋನಾದಿಂದಾಗಿ, ಯುಕೆಯಲ್ಲಿ ಲಾಕ್‌ಡೌನ್ ಇತ್ತು. ಈ ಅವಧಿಯಲ್ಲಿ ಐಸಿ ಫೇಸ್ಬುಕ್ ಗುಂಪೊಂದಕ್ಕೆ ಸೇರಿದ್ದಾಳೆ. ಅದರಲ್ಲಿ ಅವಳು 56 ವರ್ಷದ ಮಹಿಳೆ ಕೆಂಡಾಳನ್ನು  ಭೆತಿಯಾಗಿದ್ದಾಳೆ. ಇದರ ನಂತರ, ಐಸಿ ಕೆಂಡಾಳ ಮಗ ಡೇರಿನ್ ಅನ್ನು ಭೇಟಿಯಾಗಿದ್ದಾಳೆ. ಕರೋನಾ ಸಮಯದಲ್ಲಿ ಇಬ್ಬರೂ ಪರಸ್ಪರ ಮಾತನಾಡಲು ಆರಂಭಿಸಿದ್ದಾರೆ. ಇದಾದ ನಂತರ ಇಬ್ಬರೂ ಫೋನ್‌ನಲ್ಲಿ ಮಾತನಾಡಲು ಆರಂಭಿಸಿದ್ದು, ವಿಷಯ ವಿಡಿಯೋ ಕಾಲ್‌ಗೆ ತಲುಪಿದೆ. ಇಬ್ಬರೂ ಭೇಟಿಯಾಗಲು ಪ್ರಯತ್ನಿಸಿದರು ಆದರೆ, ಕೊರೊನಾದಿಂದಾಗಿ ಅದು ಸಾಧ್ಯವಾಗಲಿಲ್ಲ.

ಇದನ್ನೂ ಓದಿ-China: ಹೊಸ ಸಮಸ್ಯೆಯಲ್ಲಿ ಸಿಲುಕಿದ ಚೀನಾ: ಉದ್ವಿಗ್ನತೆ ಹೆಚ್ಚಿಸಿದ ಡ್ರ್ಯಾಗನ್ ದೇಶದ ಈ ವರದಿ..!

ಆನ್‌ಲೈನ್‌ನಲ್ಲಿ ಮದುವೆಯಾಗಲು ನಿರ್ಧರಿಸಿದೆ
ಇಬ್ಬರೂ ಪ್ರೀತಿಸಿದ ನಂತರ, ಡ್ಯಾರೆನ್ ಆನ್‌ಲೈನ್‌ನಲ್ಲಿ ಐಸಿಗೆ ಪ್ರಪೋಸ್ ಮಾಡಿದ್ದಾನೆ ಮತ್ತು ನಂತರ ಇಬ್ಬರೂ ಕಾನೂನುಬದ್ಧವಾಗಿ ಆನ್‌ಲೈನ್‌ನಲ್ಲಿ ಮದುವೆಯಾಗಲು ನಿರ್ಧರಿಸಿದ್ದಾರೆ. ಆಗಸ್ಟ್ 19 ರಂದು ಇಬ್ಬರೂ ಜೂಮ್ ಕಾಲ್ ಮೂಲಕ ವಿವಾಹವಾಗಿದ್ದಾರೆ. ಆಪ್ತರು ಈ ಮದುವೆಯಲ್ಲಿ ಪಾಲ್ಗೊಂಡಿದ್ದರು. ಇನ್ನೂ ಇಬ್ಬರೂ ಮುಖಾಮುಖಿಯಾಗಿ ಒಬ್ಬರನ್ನೊಬ್ಬರು ನೋಡಿಲ್ಲ ಮತ್ತು ಕರೋನಾ ನಿರ್ಬಂಧಗಳು ಮುಗಿದ ನಂತರ, ಇಬ್ಬರೂ ಭೇಟಿಯಾಗಲಿದ್ದಾರೆ ಮತ್ತು ಮದುವೆಯ ಔತಣಕೂಟ ಕೂಡ ಏರ್ಪಡಿಸಲಿದ್ದಾರೆ ಎನ್ನಲಾಗಿದೆ. 

ಇದನ್ನೂ ಓದಿ-Alert! Last Road on Earth: ಇದುವೇ ಭೂಮಿಯ ಕೊನೆಯ ದಾರಿ, ಅಪ್ಪಿ-ತಪ್ಪಿಯೂ ಒಂಟಿಯಾಗಿ ಹೋದರೆ ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News