ನವದೆಹಲಿ: ರಾತ್ರಿ ಸರಿಯಾಗಿ ನಿದ್ರೆ ಬರದ ಕಾರಣ ನಿದ್ದೆ ಮಾಡಲು ಕಷ್ಟಪಡುವ ಅನೇಕರನ್ನು ನಾವು ನೋಡಿದ್ದೇವೆ. ನಮ್ಮ ದಿನನಿತ್ಯದ ಜೀವನದಲ್ಲಿ ನಿದ್ದೆಯಿಲ್ಲದ ಅನೇಕ ಜನರನ್ನು ನಾವು ಭೇಟಿಯಾಗುತ್ತೇವೆ. ಇದಕ್ಕೆ ವಿರುದ್ಧವಾಗಿ ಸದಾಕಾಲ ಹೆಚ್ಚು ನಿದ್ರಿಸುವವರನ್ನೂ ಅಥವಾ ಎಷ್ಟೇ ಹೊತ್ತು ಮಲಗಿದರೂ ನಮಗೆ ನಿದ್ರೆಯೇ ಮುಗಿದಿಲ್ಲ ಎಂದು ಹೇಳುವ ಹಲವರನ್ನು ನಮ್ಮ ಸುತ್ತಮುತ್ತಲೂ ನೋಡುತ್ತೇವೆ.  ಆದರೆ ಚೀನಾದಲ್ಲಿ ವಾಸಿಸುತ್ತಿರುವ ಮಹಿಳೆಯೊಬ್ಬರು ಕಳೆದ 40 ವರ್ಷಗಳಿಂದ ತಾನು ಒಂದು ಕ್ಷಣವೂ ನಿದ್ದೆಯೇ ಮಾಡಿಲ್ಲ ಎಂದು ಹೇಳಿಕೊಂಡಿದ್ದಾರೆ. ತಾನು ಬಾಲ್ಯದಿಂದಲೂ ಒಂದು ರಾತ್ರಿ ಕೂಡ ಮಲಗಿಲ್ಲ ಎಂದು ಹೇಳಿಕೊಳ್ಳುವ ಚೀನಾದ ಮಹಿಳೆಯ ನಿಗೂಢ ಸ್ಥಿತಿಯು ವೈದ್ಯರನ್ನು ಕಂಗೆಡಿಸಿದೆ.


COMMERCIAL BREAK
SCROLL TO CONTINUE READING

ನಿದ್ರಾಹೀನತೆಯಿಂದ ಬಳಲುತ್ತಿರುವ ಮಹಿಳೆ:
ಪೂರ್ವ ಚೀನಾದ (China) ಹೆನಾನ್ ಪ್ರಾಂತ್ಯದ ಲಿ ಜಾನಿಂಗ್ (Li Zhanying) ಅವರಿಗೆ ಸದ್ಯ ಸುಮಾರು 45-46 ವರ್ಷ, ಆಕೆ ಐದು ವರ್ಷದವಳಿದ್ದಾಗ ಕೊನೆಯ ಬಾರಿಗೆ ಮಲಗಿದ್ದಳು ಎಂದು ಹೇಳಿದ್ದಾರೆ. ಲಿ ನಿದ್ದೆಯಿಲ್ಲದ ರಾತ್ರಿಗಳು ಅವಳ ಹಳ್ಳಿಯಲ್ಲಿ ಅವಳನ್ನು ಸೆಲೆಬ್ರಿಟಿಗಳನ್ನಾಗಿ ಮಾಡಿದೆ. ಆಷ್ಟೇ ಅಲ್ಲ ವೈದ್ಯಕೀಯ ಜಗತ್ತಿಗೆ ಒಂದು ಸವಾಲಾಗಿರುವ ಈ ಮಹಿಳೆ ಈಗ ಸಖತ್ ವೈರಲ್ ಆಗುತ್ತಿದ್ದಾರೆ.


ಇದನ್ನೂ ಓದಿ- Viral Video: ಗರ್ಲ್ ಫ್ರೆಂಡ್ ಜೊತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತಿ, ಮುಂದೇನಾಯ್ತು ನೀವೇ ನೋಡಿ...


ಆರಂಭದಲ್ಲಿ, ನೆರೆಹೊರೆಯವರು ಆಕೆಯ ಹಕ್ಕುಗಳು ಪೊಳ್ಳು ಎಂದು ಭಾವಿಸಿದರು ಮತ್ತು ಅವರು ರಾತ್ರಿಯಿಡೀ ಅವಳೊಂದಿಗೆ ಎಚ್ಚರವಾಗಿರಲು ಪ್ರಯತ್ನಿಸಿದರು ಮತ್ತು ಅವಳೊಂದಿಗೆ ಕಾರ್ಡ್‌ಗಳನ್ನು ಆಡುತ್ತಿದ್ದರು. ಕೆಲವರು ಅಲ್ಲಿಯೇ ಮೇಜಿನ ಮೇಲೆ ಮಲಗಿದರೆ, ಕೆಲವರು ಮನೆಗೆ ಮರಳುತ್ತಿದ್ದರು. ಆದಾಗ್ಯೂ, ಲಿ ಕ್ಷಣ ಮಾತ್ರವೂ ನಿದ್ರೆ ಮಾಡುತ್ತಿರಲಿಲ್ಲ ಎಂದು ತಿಳಿದುಬಂದಿದೆ.


ಮದುವೆಯ ನಂತರ ಗಂಡನಿಗೂ ಆಶ್ಚರ್ಯವಾಯಿತು:
ಲಿ ಜಾನಿಂಗ್ (Li Zhanying) ಅವರ ಈ ಸ್ಥಿತಿಯ ಬಗ್ಗೆ ಅವರ ಪತಿ ಲುಯಿ ಸುಕ್ವಿನ್ ಅವರು ದೃಢಪಡಿಸಿದ್ದಾರೆ. ತನ್ನ ಪತ್ನಿ ನಿದ್ರಿಸುವುದನ್ನು(Sleeping) ಎಂದಿಗೂ ನೋಡಿಲ್ಲ ಎಂದು ಹೇಳಿರುವ ಲುಯಿ ಸುಕ್ವಿನ್, ಇದು ಮಾತ್ರವಲ್ಲ, ತನ್ನ ಪತ್ನಿ ಲೀ ರಾತ್ರಿಯಲ್ಲಿ ಸಮಯ ಕಳೆಯಲು ಮನೆಕೆಲಸ ಮಾಡುತ್ತಾರೆ ಎಂದಿದ್ದಾರೆ.


ಇದನ್ನೂ ಓದಿ- Viral video: ಕೇವಲ ಬಿಕಿನಿ ಧರಿಸಿ ವಿಮಾನ ನಿಲ್ದಾಣಕ್ಕೆ ಬಂದ ಮಹಿಳೆ..!


ಆರಂಭದಲ್ಲಿ ಲಿ ಜಾನಿಂಗ್ ಅವರ ಈ ನಿದ್ರಾಹೀನತೆ ಸಮಸ್ಯೆಯನ್ನು ನಿವಾರಿಸಲು ನಿದ್ರೆ ಮಾತ್ರೆಗಳನ್ನು ಸಹ ಖರೀದಿಸಿದೆ. ಹಲವು ವೈದ್ಯರನ್ನೂ ಸಂಪರ್ಕಿಸಿದೆವು. ಆದರೆ ಯಾವ ಔಷಧಿಯಿಂದಲೂ ಏನೂ ಪ್ರಯೋಜನವಾಗಲಿಲ್ಲ.  ಇಲ್ಲಿಯವರೆಗೆ ಯಾವುದೇ ವೈದ್ಯರು ಲಿ ಯ ವಿಚಿತ್ರ ಕಾಯಿಲೆಯ ಚಿಕಿತ್ಸೆ ಅಥವಾ ಕಾರಣದ ಬಗ್ಗೆ ಸ್ಪಷ್ಟವಾಗಿ ಏನನ್ನೂ ಹೇಳಿಲ್ಲ ಎಂದು  ಲುಯಿ ಸುಕ್ವಿನ್ ಪತ್ನಿಯ ಪರಿಸ್ಥಿತಿಯ ಬಗ್ಗೆ ವಿವರಿಸಿದ್ದಾರೆ.


ಲಿ ವೈದ್ಯರನ್ನು ಸಂಪರ್ಕಿಸಿದಾಗ, ಅವರಿಗೆ ವೈದ್ಯಕೀಯ ವಿವರಣೆ ನೀಡಲು ಸಾಧ್ಯವಾಗಲಿಲ್ಲ ಎಂದು ಚೀನಾದ ಸುದ್ದಿ ತಾಣ ಬಾಸ್ಟಿಲ್ಲೆ ಪೋಸ್ಟ್ ವರದಿ ಮಾಡಿದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.