ನವದೆಹಲಿ: ಇತಿಹಾಸದಲ್ಲಿ ಆಲ್ಕೋಹಾಲ್ ಮಹತ್ವದ ಸ್ಥಾನವನ್ನು ಪಡೆದುಕೊಂಡಿದೆ. ಮತ್ತೇರಿಸುವ ಮದಿರೆಯ ಹುಟ್ಟಿನ ಬಗ್ಗೆ ಅನೇಕರು ಉಲ್ಲೇಖಿಸಿದ್ದಾರೆ. ಸಾಮಾನ್ಯವಾಗಿ ಸಾವಿರಾರು ಅಥವಾ ಲಕ್ಷಾಂತರ ರೂ. ತೆತ್ತು ಅನೇಕ ಬ್ರ್ಯಾಂಡ್ ಗಳ ಆಲ್ಕೋಹಾಲ್ ಕುಡಿಯುವವರನ್ನು ನಾವು ನೋಡಿದ್ದೇವೆ. ಆದರೆ ಇಲ್ಲೊಂದು ವಿಸ್ಕಿ ಬಾಟಲ್ ಹರಾಜಿನಲ್ಲಿ ಬರೋಬ್ಬರಿ 1 ಕೋಟಿ ರೂ.ಗೆ ಸೇಲ್ ಆಗಿದೆ.    


COMMERCIAL BREAK
SCROLL TO CONTINUE READING

ಹೌದು, ಕೇವಲ ಒಂದೇ ಒಂದು ವಿಸ್ಕಿ ಬಾಟಲ್ 1 ಕೋಟಿ ರೂ.ಗೆ ಮಾರಾಟವಾಗಿದೆ. ಅಷ್ಟಕ್ಕೂ ಈ ವಿಸ್ಕಿಗೆ ಕೋಟಿ ರೂ. ಬೆಲೆ ಬಂದಿದ್ದಾರೂ ಹೇಗೆ, ಅದರ ವಿಶೇಷತೆ ಏನು ಅಂತೀರಾ..? 1860ರಲ್ಲಿಯೇ ಈ ವಿಸ್ಕಿಯನ್ನು ಬಾಟಲಿಗೆ ಹಾಕಲಾಗಿತ್ತಂತೆ. ಆದರೆ ವಿಸ್ಕಿಯೊಳಗೆ ಹಾಕಲಾದ ದ್ರವವು ಅದಕ್ಕಿಂತಲೂ ಶತಮಾನಗಳಷ್ಟು ಹಳೆಯದಂತೆ. ಹೀಗಾಗಿ ವಿಶ್ವದ ಅತ್ಯಂತ ಹಳೆಯ, 250 ವರ್ಷಗಳ ಇತಿಹಾಸ ಹೊಂದಿರುವ ಈ ವಿಸ್ಕಿ ಬಾಟಲ್(Whisky Bottle)1.37 ಲಕ್ಷ ಅಮೆರಿಕನ್ ಡಾಲರ್ ಅಂದರೆ ಸುಮಾರು 1 ಕೋಟಿ ರೂ.ಗಿಂತಲೂ ಹೆಚ್ಚು ಬೆಲೆಗೆ ಹರಾಜಿ(Auction)ನಲ್ಲಿ ಸೇಲ್ ಆಗಿದೆ.


ಇದನ್ನೂ ಓದಿ: ಸಂಪೂರ್ಣ ಲಸಿಕೆ ತೆಗೆದುಕೊಂಡರೂ ಬ್ರಿಟನ್ ಆರೋಗ್ಯ ಸಚಿವರಿಗೆ ಕೊರೊನಾ ಪಾಸಿಟಿವ್..!


ಈ ವಿಸ್ಕಿಯನ್ನು ಅದರ ಮೂಲ ಬೆಲೆಗೆ 6 ಬಾರಿ ಮಾರಾಟಕ್ಕಿಡಲಾಗಿತ್ತು. 1860ರಲ್ಲಿ ತಯಾರಾಗಿದ್ದ ಈ ವಿಸ್ಕಿ ಬಾಟಲ್ ಹಿಂದೊಮ್ಮೆ ಪ್ರಸಿದ್ಧ ಫೈನಾನ್ಶಿಯರ್ ಜೆ.ಪಿ.ಮೊರ್ಗನ್(JP Morgan)ಅವರಿಗೆ ಸೇರಿತ್ತು. ಇಡೀ ಪ್ರಪಂಚದಲ್ಲಿಯೇ ಅತಿ ಪುರಾತನ ವಿಸ್ಕಿಯಾಗಿರುವುದರಿಂದ ಇದನ್ನು 1 ಕೋಟಿ ರೂ.ಗೆ ಹರಾಜು ಹಾಕಲಾಗಿದೆ. ವಿಸ್ಕಿ, ವೈನ್ ಸೇರಿದಂತೆ ಕೆಲ ಮದ್ಯಗಳು ಹಳೆಯದಾದಷ್ಟೂ ಜಾಸ್ತಿ ಬೆಲೆ ಪಡೆದುಕೊಳ್ಳುತ್ತವೆ. ಅದರಂತೆ ಇದು ಕೂಡ ದೊಡ್ಡ ಮೊತ್ತಕ್ಕೆ ಹರಾಜಾಗಿದೆ.


ವಿಸ್ಕಿ ಬಾಟಲಿಯ ಲೇಬಲ್ ಮೇಲೆ ‘ಈ ವಿಸ್ಕಿಯನ್ನು ಬಹುಶಃ 1865ಕ್ಕಿಂತಲೂ ಮೊದಲು ತಯಾರಿಸಲಾಗಿದೆ. ಜಾನ್ ಫೀರ್​ಪಾಯಿಂಟ್ ಮೊರ್ಗನ್ ಅವರ ಮನೆಯ ನೆಲಮಾಳಿಯಲ್ಲಿ ಇದನ್ನು ಸುರಕ್ಷಿತವಾಗಿಡಲಾಗಿತ್ತು. ಆತನ ಮರಣದ ಬಳಿಕ ಅವರ ಎಸ್ಟೇಟ್​ನಿಂದ ಈ ವಿಸ್ಕಿ ಬಾಟಲಿ(Whisky Bottle)ಯನ್ನು ಸ್ವಾಧೀನಪಡಿಸಿಕೊಳ್ಳಲಾಯಿತು’ ಎಂಬ ಉಲ್ಲೇಖವಿದೆ.


ಇದನ್ನೂ ಓದಿ: China Launched UUV: ಕೊರೊನಾ ಕಾಲದಲ್ಲಿಯೂ ಕೂಡ ಕರಾಮತ್ತು ಮೆರೆದ ಚೀನಾ, ಏನ್ ಮಾಡಿದೆ ಗೊತ್ತಾ?


ಸ್ಕಿನ್ನರ್ ಇಂಕ್ ಎಂಬ ಹರಾಜಿನ ಮನೆಯಿಂದ ಈ ಬಾಟಲಿಯನ್ನು 20 ರಿಂದ 40 ಸಾವಿರ ಅಮೆರಿಕನ್ ಡಾಲರ್ ನೀಡಿ ಪಡೆದುಕೊಳ್ಳಲಾಗಿತ್ತು. ಬಳಿಕ ಅದನ್ನು ಮಿಡ್ಟೌನ್ ಮ್ಯಾನ್ಹ್ಯಾಟನ್‌ ನಲ್ಲಿರುವ ಮ್ಯೂಸಿಯಂ(Museum) ಮತ್ತು ಸಂಶೋಧನಾ ಸಂಸ್ಥೆಯಾದ ದಿ ಮೊರ್ಗನ್ ಲೈಬ್ರರಿಗೆ 1,37,500 ಅಮೆರಿಕನ್ ಡಾಲರ್ ಗೆ ಮಾರಾಟ ಮಾಡಲಾಯಿತು. ಜೂನ್ 30ರಂದು ಈ ಹರಾಜು ಪ್ರಕ್ರಿಯೆ ಕೊನೆಗೊಂಡಿತ್ತು. ವಿಶ್ವದಲ್ಲಿಯೇ ಅತಿಪುರಾತನವಾಗಿರುವ ಈ ವಿಸ್ಕಿ ಬರೋಬ್ಬರಿ 1 ಕೋಟಿ ರೂ.ಗೆ ಮಾರಾಟವಾಗಿರುವ ವಿಷಯ ಕೇಳಿದರೆ ಮದ್ಯಪ್ರಿಯರಿಗೆ ಮತ್ತಷ್ಟು ಕಿಕ್ ಏರುವುದರಲ್ಲಿ ಅನುಮಾನವೇ ಇಲ್ಲ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ