Liquor at Home: ಈಗ ಮದ್ಯಕ್ಕಾಗಿ ಅಂಗಡಿ ಮುಂದೆ ಕ್ಯೂ ನಿಲ್ಲಬೇಕಿಲ್ಲ, ಈ ರೀತಿ ನಿಮ್ಮ ಮನೆ ಬಾಗಿಲಿಗೇ ತರಿಸಬಹುದು

Liquor at Home: ಕೊರೊನಾವೈರಸ್  (Coronavirus) ನಡುವೆ ರಾಷ್ಟ್ರ ರಾಜಧಾನಿಯ ನಿವಾಸಿಗಳು ಇನ್ನು ಮುಂದೆ ಮದ್ಯದಂಗಡಿಗಳ ಹೊರಗೆ ಗಂಟೆಗಟ್ಟಲೆ ಕಾಯಬೇಕಾಗಿಲ್ಲ, ಏಕೆಂದರೆ ಸರ್ಕಾರವು ಮನೆಗೆ ಮದ್ಯ ವಿತರಿಸಲು ಅನುಮತಿ ನೀಡಿದೆ.

Written by - Yashaswini V | Last Updated : Jun 1, 2021, 11:55 AM IST
  • ಭಾರತೀಯ ಮತ್ತು ವಿದೇಶಿ ಬ್ರ್ಯಾಂಡ್ಗಳ ಮದ್ಯಗಳ ಹೋಂ ಡೆಲಿವರಿ ಸೇವೆಗೆ ಅನುಮತಿ
  • ಮದ್ಯ ತಯಾರಕರು ದೀರ್ಘಕಾಲದಿಂದ ಆನ್‌ಲೈನ್ ಆರ್ಡರ್ ಮತ್ತು ಮದ್ಯ ಹೋಂ ಡೆಲಿವರಿಗೆ ಸಂಬಂಧಿಸಿದಂತೆ ದೆಹಲಿ ಸರ್ಕಾರದಿಂದ ಅನುಮತಿ ಕೋರಿದ್ದರು
  • ದೆಹಲಿಯಲ್ಲಿ ಲಾಕ್‌ಡೌನ್ ಘೋಷಣೆಯ ನಂತರ, ಮದ್ಯದಂಗಡಿಗಳ ಮುಂದೆ ದೊಡ್ಡ ದೊಡ್ಡ ಕ್ಯೂ ಕಾಣುತ್ತಿತ್ತು
Liquor at Home: ಈಗ ಮದ್ಯಕ್ಕಾಗಿ ಅಂಗಡಿ ಮುಂದೆ ಕ್ಯೂ ನಿಲ್ಲಬೇಕಿಲ್ಲ, ಈ ರೀತಿ ನಿಮ್ಮ ಮನೆ ಬಾಗಿಲಿಗೇ ತರಿಸಬಹುದು title=
Liquor Home Delievery In Delhi

ನವದೆಹಲಿ : ದೆಹಲಿ ಸರ್ಕಾರ (Delhi Govt) ಭಾರತೀಯ ಮತ್ತು ವಿದೇಶಿ ಬ್ರ್ಯಾಂಡ್ಗಳ ಮದ್ಯಗಳ ಹೋಂ ಡೆಲಿವರಿ ಸೇವೆಯನ್ನು ಮಂಗಳವಾರ ಅನುಮತಿಸಿದೆ. ಕೊರಾನಾ ಸೋಂಕನ್ನು ಜಯಿಸಲು ಮತ್ತು ಮದ್ಯ ಅಂಗಡಿಗಳ ಮುಂದೆ ಸಾಲುಗಟ್ಟಿ ನಿಲ್ಲುವುದನ್ನು ತಪ್ಪಿಸಲು ಸರ್ಕಾರ ಈ ನಿರ್ಧಾರ ಕೈಗೊಂಡಿದ್ದು ಈಗ ಜನರು ತಮ್ಮ ಮೊಬೈಲ್ ಅಪ್ಲಿಕೇಶನ್ ಅಥವಾ ಆನ್ಲೈನ್ ​​ವೆಬ್ ಪೋರ್ಟಲ್ ಮೂಲಕ ಮದ್ಯವನ್ನು ಆರ್ಡರ್ ಮಾಡಬಹುದಾಗಿದೆ.

ದೆಹಲಿ ಸರ್ಕಾರದ ಅಬಕಾರಿ ನಿಯಮಗಳಲ್ಲಿ ಬದಲಾವಣೆ:
ದೆಹಲಿ ಸರ್ಕಾರ  (Delhi Govt) ಮದ್ಯ ಹೋಂ ಡೆಲಿವರಿಗಾಗಿ ಅಬಕಾರಿ ನಿಯಮಗಳನ್ನು ಬದಲಿಸಿದೆ. ದೆಹಲಿ ಎಕ್ಸೈಸ್ (ತಿದ್ದುಪಡಿ) ನಿಯಮ ಪ್ರಕಾರ, 2021 ಎಲ್ -13 ಪರವಾನಗಿ ಹೊಂದಿರುವವರು ಜನರ ಮನೆಗೆ ಆಲ್ಕೋಹಾಲ್ ಅನ್ನು ತಲುಪಿಸಲು ಅನುಮತಿಸಲಾಗುವುದು. ಮೊಬೈಲ್ ಅಪ್ಲಿಕೇಶನ್ ಅಥವಾ ಆನ್ಲೈನ್ ​​ವೆಬ್ ಪೋರ್ಟಲ್ ನಲ್ಲಿ ಆರ್ಡರ್ ಮಾಡುವ ಮೂಲಕ ಭಾರತೀಯ ಮತ್ತು ವಿದೇಶಿ ಮದ್ಯವನ್ನು ಹೋಂ ಡೆಲಿವರಿ ಪಡೆಯಲು ಸಾಧ್ಯವಾಗುತ್ತದೆ.

ಇದನ್ನೂ ಓದಿ - Karnataka Bank Timings : ಬ್ಯಾಂಕ್ ಗ್ರಾಹಕರ ಗಮನಕ್ಕೆ : ಇಂದಿನಿಂದ ಬ್ಯಾಂಕ್ ವ್ಯವಹಾರದ ವೇಳೆಯಲ್ಲಿ ಬದಲಾವಣೆ!

ದೀರ್ಘ ಸಮಯದಿಂದಲೂ ಬೇಡಿಕೆಯಿತ್ತು:
ಮದ್ಯ ತಯಾರಕರು ದೀರ್ಘಕಾಲದಿಂದ ಆನ್‌ಲೈನ್ ಆರ್ಡರ್ ಮತ್ತು ಮದ್ಯ ಹೋಂ ಡೆಲಿವರಿಗೆ (Liquor Home Delivery) ಸಂಬಂಧಿಸಿದಂತೆ ದೆಹಲಿ ಸರ್ಕಾರದಿಂದ ಅನುಮತಿ ಕೋರಿದ್ದರು. ಕರೋನಾ ಸೋಂಕನ್ನು ನಿಯಂತ್ರಿಸಲು ದೆಹಲಿಯಲ್ಲಿ ಲಾಕ್‌ಡೌನ್  (Lockdown in Delhi) ಘೋಷಣೆಯ ನಂತರ, ಮದ್ಯದಂಗಡಿಗಳ ಮುಂದೆ ದೊಡ್ಡ ದೊಡ್ಡ ಕ್ಯೂ ಕಾಣುತ್ತಿತ್ತು. ಇದರ ನಂತರ, ಮದ್ಯವನ್ನು ಮನೆಗೆ ತಲುಪಿಸಲು ಅನುಮತಿ ನೀಡುವಂತೆ ಮದ್ಯ ಉತ್ಪಾದನಾ ಕಂಪನಿಗಳು ದೆಹಲಿ ಸರ್ಕಾರಕ್ಕೆ ಮನವಿ ಮಾಡಿದ್ದರು.

ಇದನ್ನೂ ಓದಿ - LPG Price Cut: LPG ಗ್ರಾಹಕರಿಗೆ ಗುಡ್ ನ್ಯೂಸ್, ಸಿಲಿಂಡರ್‌ನ ಬೆಲೆ 122 ರೂ.ವರೆಗೆ ಕಡಿತ

ಮಹಾರಾಷ್ಟ್ರದಲ್ಲಿ ಈಗಾಗಲೇ ಮದ್ಯ ಹೋಂ ಡೆಲಿವರಿ ಅನುಮತಿಸಲಾಗಿದೆ:
ಕರೋನಾವೈರಸ್ ಹೆಚ್ಚುತ್ತಿರುವ ಸೋಂಕಿನ ದೃಷ್ಟಿಯಿಂದ, ಮಹಾರಾಷ್ಟ್ರ ಸರ್ಕಾರ ಈಗಾಗಲೇ ಮದ್ಯವನ್ನು ಹೋಂ ಡೆಲಿವರಿ ಮಾಡಲು ಅನುಮತಿ ನೀಡಿತ್ತು. ಕೋವಿಡ್ -19 ಹರಡುವುದನ್ನು ತಡೆಯಲು ಮಹಾರಾಷ್ಟ್ರದಲ್ಲಿ ಕಟ್ಟುನಿಟ್ಟಿನ ನಿರ್ಬಂಧಗಳನ್ನು ವಿಧಿಸಲಾಗಿದೆ ಮತ್ತು ಮುಂಬೈ ಹೊರತುಪಡಿಸಿ ಅನೇಕ ನಗರಗಳಲ್ಲಿ ಅಂಗಡಿಗಳನ್ನು ಮುಚ್ಚಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News