ನವದೆಹಲಿ: Omicron In Children - ಓಮಿಕ್ರಾನ್ ರೂಪಾಂತರವು ಡೆಲ್ಟಾ (Covid-19 Delta Variant) ರೂಪಾಂತರಕ್ಕಿಂತ ಹೆಚ್ಚು ವೇಗವಾಗಿ ಹರಡುತ್ತಿದೆ ಮತ್ತು ತಜ್ಞರ ಪ್ರಕಾರ, ಮಕ್ಕಳು ಕರೋನಾದ ಈ ಸೋಂಕಿಗೆ  ಹೆಚ್ಚು ಒಳಗಾಗುವ ಎಲ್ಲಾ ಸಾಧ್ಯತೆಗಳಿವೆ. ಕರೋನಾ ವೈರಸ್ (Coronavirus) ವಯಸ್ಕರು ಮತ್ತು ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ವಿಶ್ವಾದ್ಯಂತದ ತಜ್ಞರು ಮಕ್ಕಳಲ್ಲಿನ ಕರೋನದ ಹೆಚ್ಚಿನ ಪ್ರಕರಣಗಳು ಸೌಮ್ಯವಾಗಿರುತ್ತವೆ ಅಥವಾ ಯಾವುದೇ ರೋಗಲಕ್ಷಣಗಳನ್ನು ಹೊಂದಿರುವುದಿಲ್ಲ ಎಂದು ಹೇಳುತ್ತಾರೆ. ಆದರೆ ಕೆಲವು ಸಂದರ್ಭಗಳಲ್ಲಿ ಈ ರೋಗಲಕ್ಷಣಗಳು ತೀವ್ರವಾಗುವ ಸಾಧ್ಯತೆಗಳಿವೆ ಎಂದು ಅವರು ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಮಕ್ಕಳಲ್ಲಿ ಕರೋನಾ ಲಕ್ಷಣಗಳು
ವಯಸ್ಕರು ಮತ್ತು ವಯಸ್ಸಾದವರಂತೆ, ಮಕ್ಕಳಲ್ಲೂ ಕರೋನದ (Covid-19) ವಿಭಿನ್ನ ಲಕ್ಷಣಗಳು ಕಂಡುಬರುತ್ತಿವೆ. ಈ ಕೆಲವು ರೋಗಲಕ್ಷಣಗಳು ತುಂಬಾ ಸಾಮಾನ್ಯವಾಗಿದೆ. ಜ್ವರ, ಆಯಾಸ, ಕೆಮ್ಮು, ರುಚಿ ಮತ್ತು ವಾಸನೆ ಕಳೆದುಕೊಳ್ಳುವುದು ಇವು ಮಕ್ಕಳಲ್ಲಿನ ಕರೋನದ (Coronavirus) ಕೆಲವು ಸಾಮಾನ್ಯ ಲಕ್ಷಣಗಳಾಗಿವೆ.


ತೀವ್ರವಾದ ರೋಗಲಕ್ಷಣಗಳು ಸಹ ಕಾಣಿಸಿಕೊಳ್ಳಬಹುದು
ಇದು ಮಕ್ಕಳಲ್ಲಿ ಮಲ್ಟಿಸಿಸ್ಟಮ್ ಉರಿಯೂತದ ಸಿಂಡ್ರೋಮ್ (MIS-C) ಗೆ ಕಾರಣವಾಗುತ್ತಿದೆ ಎಂದು ಹೇಳಲಾಗಿದೆ. ವೈದ್ಯರ ಪ್ರಕಾರ, ಈ ಸಮಸ್ಯೆಯನ್ನು ಹೊಂದಿರುವ ಮಕ್ಕಳು ಹೃದಯ, ಶ್ವಾಸಕೋಶಗಳು, ರಕ್ತನಾಳಗಳು, ಮೂತ್ರಪಿಂಡಗಳು, ಜೀರ್ಣಾಂಗ ವ್ಯವಸ್ಥೆ, ಮೆದುಳು, ಚರ್ಮ ಅಥವಾ ಕಣ್ಣುಗಳಂತಹ ಅನೇಕ ಅಂಗಗಳಲ್ಲಿ ತೀವ್ರವಾದ ಉರಿಯೂತವನ್ನು ಹೊಂದಿರುತ್ತಾರೆ.


ಇದನ್ನೂ ಓದಿ -Viral Video: ಪಾಪ್ ಸಿಂಗರ್ ಕೆನ್ನೆ ಕಚ್ಚಿದ ಹಾವು!, ಭಯಾನಕ ದೃಶ್ಯ ಹೇಗಿದೆ ನೋಡಿ


ಇತ್ತೀಚಿನ ವರದಿಗಳ ಪ್ರಕಾರ, ಓಮಿಕ್ರಾನ್ (Omcron Variant) 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಕ್ರೂಪ್ ಸಮಸ್ಯೆಯನ್ನು ಉಂಟುಮಾಡುತ್ತದೆ, ಇದು ನಾಯಿಕೆಮ್ಮಿಗೆ ಕಾರಣವಾಗುತ್ತದೆ.


ಇದನ್ನೂ ಓದಿ-YouTube Star: ವಿಚಿತ್ರ ಕಾಯಿಲೆಗೆ ಬಲಿಯಾದ ಯೂಟ್ಯೂಬ್ ಸ್ಟಾರ್!, ಏನಾಗಿತ್ತು ಗೊತ್ತಾ..?


ಉಸಿರಾಟದ ನಾಳಗಳಲ್ಲಿನ ಸೋಂಕು
ವೈದ್ಯರ ಪ್ರಕಾರ, ಓಮಿಕ್ರಾನ್ (Omicron) ನಿಂದ ಪ್ರಭಾವಿತವಾಗಿರುವ ಮಕ್ಕಳು ತಮ್ಮ ಮೇಲ್ಭಾಗದ ಶ್ವಾಸೇಂದ್ರಿಯ ಪ್ರದೇಶದಲ್ಲಿ ಸೋಂಕನ್ನು ಹೊಂದಿರಬಹುದು, ಇದು ಕ್ರೂಪ್ (Croup) ಅನ್ನು ಉಂಟುಮಾಡುತ್ತದೆ. ಮೇಲ್ಭಾಗದ ಶ್ವಾಸೇಂದ್ರಿಯ ಪ್ರದೇಶದಲ್ಲಿನ ಸೋಂಕು ಉಸಿರಾಟದಲ್ಲಿ ತೊಂದರೆ ಉಂಟುಮಾಡಬಹುದು. ಇದರೊಂದಿಗೆ ಜ್ವರ, ಕರ್ಕಶ ಶಬ್ದ ಮತ್ತು ಉಸಿರಾಡುವಾಗ ಶಬ್ದದ ಸಮಸ್ಯೆ ಇರಬಹುದು.


ಇದನ್ನೂ ಓದಿ-Pakistan: ಸೇನಾ ಮುಖ್ಯಸ್ಥರ ಎಚ್ಚರಿಕೆಯ ಬಳಿಕ ಭೀತಿಯಲ್ಲಿರುವ ಪಾಕಿಸ್ತಾನಕ್ಕೆ ಆಪರೇಶನ್ ಕಾಟ


(Disclaimer: ಇಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಇದನ್ನು ಅನುಸರಿಸುವ ಮುನ್ನ ತಜ್ಞ ವೈದ್ಯರನ್ನು ಸಂಪರ್ಕಿಸಿ. ಝೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.