Viral Video: ಪಾಪ್ ಸಿಂಗರ್ ಕೆನ್ನೆ ಕಚ್ಚಿದ ಹಾವು!, ಭಯಾನಕ ದೃಶ್ಯ ಹೇಗಿದೆ ನೋಡಿ

ಶೇರ್ ಆದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋ ಸೋಷಿಯಲ್ ಮೀಡಿಯಾ(Social Media)ದಲ್ಲಿ ಸಖತ್ ಸೌಂಡ್ ಮಾಡಿದ್ದು, ಲಕ್ಷಾಂತರ ಜನರು ವೀಕ್ಷಿಸಿದ್ದಾರೆ.

Written by - Puttaraj K Alur | Last Updated : Jan 15, 2022, 01:44 PM IST
  • ಮೈಮೇಲೆ ಹಾವುಗಳನ್ನು ಹಾಕಿಕೊಂಡು ಮ್ಯೂಸಿಕ್ ಆಲ್ಬಂ ಶೂಟಿಂಗ್
  • ಅಮೆರಿಕನ್ ಪಾಪ್ ಗಾಯಕಿ ಮೇಟಾಳ ಕೆನ್ನೆಗೆ ಕಚ್ಚಿದ ಹಾವು
  • ಪ್ರಾಣಾಪಾಯದಿಂದ ಪಾರಾದ ಪಾಪ್ ಗಾಯಕಿಯ ವಿಡಿಯೋ ವೈರಲ್
Viral Video: ಪಾಪ್ ಸಿಂಗರ್ ಕೆನ್ನೆ ಕಚ್ಚಿದ ಹಾವು!, ಭಯಾನಕ ದೃಶ್ಯ ಹೇಗಿದೆ ನೋಡಿ title=
ಅಮೆರಿಕನ್ ಪಾಪ್ ಗಾಯಕಿ ಕೆನ್ನೆಗೆ ಕಚ್ಚಿದ ಹಾವು

ನವದೆಹಲಿ: ‘ನಿಮಗೆಲ್ಲರಿಗೂ ವಿಡಿಯೋ ಮಾಡಲು ನಾನು ಏನು ಮಾಡುತ್ತೇನೆ’ ನೋಡಿ ಅಂತಾ ಮೈಮೇಲೆ ಹಾವು ಬಿಟ್ಟುಕೊಂಡು ವಿಡಿಯೋ ಶೂಟ್ ಮಾಡಿಸಿಕೊಳ್ಳುತ್ತಿದ್ದ ಪಾಪ್ ಗಾಯಕಿಗೆ ಶಾಕ್ ಆಗಿದೆ. ಏಕೆಂದರೆ ಮೈಮೇಲೆ ಹೀಗೆ ಬಿಟ್ಟುಕೊಂಡಿದ್ದ ಹಾವೊಂದು ಆಕೆಯ ಕೆನ್ನೆಯನ್ನೇ ಕಚ್ಚಿದೆ. ಹೌದು, ಹಾವಿನಿಂದ ಕೆನ್ನೆ ಕಚ್ಚಿಸಿಕೊಂಡು ಅಪಾಯದಿಂದ ಪಾರಾಗಿರುವ ಪಾಪ್ ಗಾಯಕಿ(Pop Singer Maeta) ಈಗ ಆ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾಳೆ.

ಹಾವಿನಿಂದ ಕೆನ್ನೆ ಕಚ್ಚಿಸಿಕೊಂಡು ಪ್ರಾಣಾಪಾಯದಿಂದ ಪಾರಾಗಿರುವ ಪಾಪ್ ಗಾಯಕಿ(American Pop Singer) ಬೇರಾರೂ ಅಲ್ಲ ಮೇಟಾ(Maeta). ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿರುವ 5 ಸೆಕೆಂಡುಗಳ ಈ ವಿಡಿಯೋ ನೋಡಲು ಭಯಾನಕವಾಗಿದೆ. ತನ್ನ ಮೈಮೇಲೆ 2 ಹಾವುಗಳನ್ನು ಬಿಟ್ಟುಕೊಂಡು ಮ್ಯೂಸಿಕ್ ಆಲ್ಬಂ ಶೂಟ್ ಮಾಡುತ್ತಿರುವಾಗ ಆಕಸ್ಮಿಕವಾಗಿ ಮೇಟಾ(Maeta)ಳ ಕೆನ್ನೆಗೆ ಕರಿ ಬಣ್ಣದ ಹಾವೊಂದು ಕಚ್ಚಿಬಿಟ್ಟಿದೆ. ಮಲಗಿದ್ದ ಮೇಟಾ ಸ್ವಲ್ಪ ವಿಚಲಿತರಾಗಿ ಕೂಡಲೇ ಆ ಹಾವನ್ನು ಎತ್ತಿ ಪಕ್ಕಕ್ಕೆ ಸರಿಸಿದ್ದಾರೆ. ಹಾವು ಕೆನ್ನೆ ಕಚ್ಚಿದ್ದರಿಂದ ಪಾಪ್ ಗಾಯಕಿ ಒಂದು ಕ್ಷಣ ಕಕ್ಕಾಬಿಕ್ಕಿಯಾಗಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

 
 
 
 

 
 
 
 
 
 
 
 
 
 
 

A post shared by Maeta (@maetasworld)

ಇದನ್ನೂ ಓದಿ: ಸೈನಾ ನೆಹ್ವಾಲ್ ವಿರುದ್ಧ ನಟ ಸಿದ್ದಾರ್ಥ್ ಆಕ್ಷೇಪಾರ್ಹ ಟ್ವೀಟ್‌; "ಉತ್ತಮ ಪದಗಳನ್ನು ಬಳಸಬಹುದಿತ್ತು" ಎಂದ ಬ್ಯಾಡ್ಮಿಂಟನ್ ತಾರೆ

ಶೇರ್ ಆದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋ ಸೋಷಿಯಲ್ ಮೀಡಿಯಾ(Social Media)ದಲ್ಲಿ ಸಖತ್ ಸೌಂಡ್ ಮಾಡಿದ್ದು, ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಅನೇಕರು ತಮಾಷೆಯ ಕಾಮೆಂಟ್ ಮಾಡಿದ್ದಾರೆ. ಮೇಟಾ ಕೆನ್ನೆಗೆ ಮುತ್ತು ಕೊಟ್ಟಿರುವ ಈ ಹಾವು ವಿಷಕಾರಿಯಾಗಿರಲಿಲ್ಲ. ಹೀಗಾಗಿ ಪಾಪ್ ಗಾಯಕಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಲ್ಲದ್ದಿದ್ದರೆ ಜೀವಕ್ಕೆ ಕುತ್ತು ಉಂಟಾಗುವ ಸಾಧ್ಯತೆ ಇತ್ತು. ಸದ್ಯ 21 ವರ್ಷದ ಗಾಯಕಿ ಸಂಪೂರ್ಣವಾಗಿ ಆರೋಗ್ಯವಾಗಿದ್ದು, ಯಾವುದೇ ತೊಂದರೆಯಾಗಿಲ್ಲವೆಂದು ತಿಳಿದುಬಂದಿದೆ.  

ತನ್ನ ಮ್ಯೂಸಿಕ್ ಅಲ್ಬಂ ಮೂಲಕವೇ ಪ್ರಸಿದ್ಧಿಯಾಗಿರುವ ಮೇಟಾ Instagramನಲ್ಲಿ ಲಕ್ಷಾಂತರ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ. ಮೇಟಾ ಕೆನ್ನೆ ಕಚ್ಚಿರುವ ಹಾವಿನ ಮೇಲೆ ಆಕೆಯ ಅಭಿಮಾನಿಗಳು ಕೋಪ ವ್ಯಕ್ತಪಡಿಸಿದ್ದಾರೆ. ಈ ರೀತಿ ಸಾಹಸ ಮಾಡುವುದು ಬೇಡವೆಂದು ಅನೇಕರು ಆಕೆಗೆ ಸಲಹೆ ನೀಡಿದ್ದಾರೆ.

 
 
 
 

 
 
 
 
 
 
 
 
 
 
 

A post shared by Maeta (@maetasworld)

ಇದನ್ನೂ ಓದಿ: ಮಲೈಕಾ ಅರೋರಾ ಜೊತೆಗಿನ ಬ್ರೇಕಪ್ ಸುದ್ದಿ ಬಗ್ಗೆ ಮೌನ ಮುರಿದ ಅರ್ಜುನ್ ಕಪೂರ್!

ಪಾಪ್ ಗಾಯಕಿ ಮೇಟಾ ತನ್ನ ಹಲವಾರು ಸಂಗೀತ ವಿಡಿಯೋಗಳು, Instagram ಕ್ಲಿಪ್‌ಗಳು ಮತ್ತು ಪೋಸ್ಟ್‌ ಗಳ ಮೂಲಕ ತನ್ನ ಅಭಿಮಾನಿಗಳ ಹೃದಯವನ್ನು ಕದಿಯುತ್ತಲೇ ಇರುತ್ತಾಳೆ. ಆಕೆಯ ಚೊಚ್ಚಲ ಇಪಿ(Extended play) ‘ಡು ನಾಟ್ ಡಿಸ್ಟರ್ಬ್’ ನವೆಂಬರ್ 2019ರಲ್ಲಿ ಬಿಡುಗಡೆಯಾಗಿ ಹಿಟ್ ಆಗಿತ್ತು. ಈ ವರ್ಷದ ಆರಂಭದಲ್ಲಿ ಅವರು Jay-Z’ನ ‘Roc Nation’ ಮ್ಯೂಸಿಕ್ ಆಲ್ಬಂಗೆ ಸಹಿ ಹಾಕಿದ್ದಾರೆ.

 
 
 
 

 
 
 
 
 
 
 
 
 
 
 

A post shared by Maeta (@maetasworld)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News