ಲಂಡನ್: Omicron Latest Update - ಇಂಗ್ಲೆಂಡ್ ನಲ್ಲಿ (UK) ಕೋವಿಡ್-19 ನ (Covid-19) ಒಮಿಕ್ರಾನ್ ರೂಪಾಂತರಿಯ (Omicron) ಉಪ-ರೂಪಾಂತರಿಯಾಗಿರುವ BA.2 ಇನ್ನೂ ದೊಡ್ಡ ಪ್ರಮಾಣದಲ್ಲಿದೆ, ಆದರೆ ಇಂಗ್ಲೆಂಡ್‌ನಲ್ಲಿ ಕೊರೊನಾವೈರಸ್ (Coronavirus) ಸೋಂಕಿನ ಪ್ರಕರಣಗಳು ಕಡಿಮೆಯಾಗಿವೆ. ಇತ್ತೀಚಿನ ಅಧ್ಯಯನದ ಬಳಿಕ ಗುರುವಾರ ಈ ಮಾಹಿತಿಯನ್ನು ನೀಡಲಾಗಿದೆ. ಕೆಲವು ಆನುವಂಶಿಕ ಬದಲಾವಣೆಗಳಿಂದಾಗಿ ತಜ್ಞರು ಒಮಿಕ್ರಾನ್‌ನ ಈ ರೂಪಾಂತರಿಯನ್ನು ಸ್ಟೆಲ್ತ್ ರೂಪಾಂತರಿ (Stealth Variant) ಎಂದು ಹೆಸರಿಸಿದ್ದಾರೆ.


COMMERCIAL BREAK
SCROLL TO CONTINUE READING

UK ಯ 'ರಿಯಲ್-ಟೈಮ್ ಅಸೆಸ್ಮೆಂಟ್ ಆಫ್ ಕಮ್ಯುನಿಟಿ ಸ್ಪ್ರೆಡ್' (ರಿಯಾಕ್ಟ್-1) ಅಧ್ಯಯನದ ತಜ್ಞರು ಓಮಿಕ್ರಾನ್ ಸೋಂಕಿನ ಪ್ರಮಾಣವು ಇನ್ನೂ ಹೆಚ್ಚಾಗಿರಲಿದೆ ಮತ್ತು ವಯಸ್ಸಾದವರಲ್ಲಿ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಆತಂಕಕ್ಕೆ ಕಾರಣವಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

ಇಂಪೀರಿಯಲ್ ಕಾಲೇಜ್ ಲಂಡನ್ ಮತ್ತು Ipsos MORI ನ ವಿಶ್ಲೇಷಣೆಯು ಫೆಬ್ರವರಿ 8 ಮತ್ತು ಮಾರ್ಚ್ 1 ರ ನಡುವೆ ತೆಗೆದುಕೊಂಡ ಸುಮಾರು 95,000 ಲಾಲಾರಸದ ಮಾದರಿಗಳನ್ನು ಆಧರಿಸಿದೆ. BA.2 ಸೋಂಕಿತರ ಪ್ರಮಾಣವು ಲಂಡನ್‌ನಲ್ಲಿ ಹೆಚ್ಚು ಎಂದು ಅಧ್ಯಯನ ತೋರಿಸುತ್ತಿದೆ.

ಈ ಕುರಿತು ಹೇಳಿಕೆ ನೀಡಿರುವ ಇಂಪೀರಿಯಲ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನ ರಿಯಾಕ್ಟ್ ಕಾರ್ಯಕ್ರಮದ ನಿರ್ದೇಶಕ ಪ್ರೊಫೆಸರ್ ಪಾಲ್ ಎಲಿಯಟ್,  "ಇಂಗ್ಲೆಂಡ್‌ನಲ್ಲಿ ಸೋಂಕುಗಳು ಕಡಿಮೆಯಾಗುತ್ತಿರುವುದು ಉತ್ತೇಜನಕಾರಿಯಾಗಿದೆ, ಆದರೆ ಸಂಖ್ಯೆಗಳು ಇನ್ನೂ ಹೆಚ್ಚಿವೆ ಮತ್ತು ವಯಸ್ಸಾದವರಲ್ಲಿ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆಯಿದೆ ಮತ್ತು ಇದೊಂದು ಚಿಂತಾಜನಕ ಸಂಗತಿಯಾಗಿದೆ" ಎಂದಿದ್ದಾರೆ. 


ಇದನ್ನೂ ಓದಿ-International Flights Resumed: ಎರಡು ವರ್ಷಗಳ ನಂತರ ಅಂತಾರಾಷ್ಟ್ರೀಯ ವಾಣಿಜ್ಯ ವಿಮಾನಗಳ ಹಾರಾಟಕ್ಕೆ ಕೇಂದ್ರ ಸರ್ಕಾರದ ಅನುಮತಿ, ಈ ದಿನದಿಂದ ಸೇವೆ ಆರಂಭ

" ಒಳ್ಳೆಯ ಸಂಗತಿ ಎಂದರೆ, ಇವರು ಲಸಿಕೆಯ ಪ್ರಮಾಣಗಳನ್ನು ಪಡೆದ ಜನರಾಗಿದ್ದಾರೆ. ಆದರೆ, ಸೋಂಕು ಹೆಚ್ಚಾಗುತ್ತಿದ್ದಂತೆ ಅಧಿಕ ಜನರು ಕಾಯಿಲೆಗೆ ಗುರಿಯಾಗಬಹುದು. ಹೀಗಾಗಿ ಸೋಂಕಿನ ಹರಡುವಿಕೆಯನ್ನು ತಡೆಗಟ್ಟಲು ಜನರು ಆರೋಗ್ಯ ಇಲಾಖೆ ಜಾರಿಗೊಳಿಸಿರುವ ಮಾರ್ಗ ಸೂಚಿಗಳನ್ನು ಪಾಲಿಸುವುದನ್ನು ಮುಂದುವರೆಸಬೇಕಿದೆ" ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ-ಕೊರೊನಾ ನಾಲ್ಕನೇ ಅಲೆ ಅಷ್ಟು ಪರಿಣಾಮಕಾರಿಯಾಗಿರಲ್ಲ..!


 ಈ ಕುರಿತು ಎಚ್ಚರಿಕೆಯನ್ನು ನೀಡಿರುವ ಬ್ರಿಟನ್ ನ ಆರೋಗ್ಯ ರಕ್ಷಣಾ ಸಂಸ್ಥೆಯ (UKSA) ಮುಖ್ಯ ಕಾರ್ಯಕಾರಿ ಅಧಿಕಾರಿ ಡಾ.ಜೆನಿ ಹ್ಯಾರಿಸ್, "ಮಹಾಮಾರಿ ಇನ್ನೂ ಸಂಪೂರ್ಣವಾಗಿ ಅಂತ್ಯವಾಗಿಲ್ಲ ಎಂಬುದನ್ನು ಈ ತಾಜಾ ಅಂಕಿ-ಅಂಶಗಳು ತೋರಿಸುತ್ತಿದ್ದು, ಮುನ್ನೆಚ್ಚರಿಕಾ ಕ್ರಮಗಳನ್ನು ಮುಂದುವರೆಸುವ ಅವಶ್ಯಕತೆ ಇದೆ ಎಂಬುದನ್ನು ಸೂಚಿಸುತ್ತಿವೆ" ಎಂದಿದ್ದಾರೆ.


ಇದನ್ನೂ ಓದಿ-ಸಾರ್ವಜನಿಕರಿಗೆ ದೆಹಲಿ ಮೃಗಾಲಯ ಮುಕ್ತ, ರಾತ್ರೋ ರಾತ್ರಿ ಟಿಕೆಟ್ ಮಾರಾಟ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.