Osama Bin Laden Helped Nawaz Sharif:  ಪಾಕಿಸ್ತಾನದ (Pakistan) ಮಾಜಿ ಪ್ರಧಾನಿ ನವಾಜ್ ಶರೀಫ್ ಗೆ ಅಲ್ ಕೈದಾ ಉಗ್ರಸಂಘಟನೆಯಾ ಮುಖ್ಯಸ್ಥನಾಗಿದ್ದ ಒಸಾಮಾ ಬಿನ್ ಲಾಡೆನ್ ಆರ್ಥಿಕ ನೆರವು ನೀಡುತ್ತಿದ್ದ ಎಂದು ಅಮೇರಿಕಾದಲ್ಲಿ ಪಾಕಿಸ್ತಾನದ ರಾಯಭಾರಿಯಾಗಿದ್ದ (Ex Pakistan Envoy)  ಅಬಿದಾ ಹುಸೈನ್ (Abida Hussain) ಬಹಿರಂಗಪಡಿಸಿದ್ದಾರೆ. ಈ ಕುರಿತು ಎಕ್ಸ್ಪ್ರೆಸ್ ಟ್ರಿಬ್ಯೂನ್ ಗೆ ಹೇಳಿಕೆ ನೀಡಿರುವ ಅವರು, 'ಹೌದು, ಆತ (ಒಸಾಮಾ ಬಿನ್ ಲಾಡೆನ್ ಮಿಯಾ ನವಾಜ್ ಶರೀಫ್ ಅವರಿಗೆ ಸಹಾಯ ಮಾಡುತ್ತಿದ್ದ ಹಾಗೂ ಇದೊಂದು ಜಟಿಲ ಕಥೆಯಾಗಿದೆ. ಅಷ್ಟೇ ಅಲ್ಲ ಆತ ಅವರಿಗೆ ಆರ್ಥಿಕ ನೆರವು ಕೂಡ ನೀಡುತ್ತಿದ್ದ )


COMMERCIAL BREAK
SCROLL TO CONTINUE READING

ನವಾಜ್ ಷರೀಫ್ (Nawaz Sharif) ಸರ್ಕಾರದಲ್ಲಿ ಸಚಿವರಾಗಿದ್ದ ಅಬಿದಾ, ಬಿನ್ ಲಾಡೆನ್ ಒಂದು ಕಾಲದಲ್ಲಿ ತುಂಬಾ ಜನಪ್ರಿಯವಾಗಿದ್ದ. ಹಾಗೂ ಅಮೆರಿಕನ್ನರು ಸೇರಿದಂತೆ ಇತರರೆಲ್ಲರೂ ಆತನನ್ನು ಇಷ್ಟಪಡುತ್ತಿದ್ದರು. ಆದರೆ ನಂತರದ ಕಾಲದಲ್ಲಿ ಆಟ  ಪರಕೀಯನಾದ ಎಂದು ಹೇಳಿದ್ದಾರೆ. ತೆಹ್ರೀಕ್-ಇ-ಇನ್ಸಾಫ್ ಸದಸ್ಯ ಫಾರೂಕ್ ಹಬೀಬ್ ಅವರ ಆರೋಪದ ನಂತರ ಅಬಿದಾ ಅವರ ಈ ಹೇಳಿಕೆ ಬಂದಿದ್ದು, ಇದರಲ್ಲಿ ನವಾಜ್ ಷರೀಫ್ ದೇಶದಲ್ಲಿ ವಿದೇಶಿ ಧನಸಹಾಯಕ್ಕೆ ಅಡಿಪಾಯ ಹಾಕಿ ಬೆನಜೀರ್ ಭುಟ್ಟೋ ಅವರ ಸರ್ಕಾರವನ್ನು ಉರುಳಿಸಲು ಶರೀಫ್, ಒಸಮಾ ಬಿನ್ ಲಾಡೆನ್ ನಿಂದ 10 ಮಿಲಿಯನ್ ಡಾಲರ್ ಹಣ ಪಡೆದುಕೊಂಡಿದ್ದರು ಎಂದು ಅವರು ಹೇಳಿದ್ದಾರೆ.


ಮೂರು ಬಾರಿ ಪಾಕಿಸ್ತಾನದ ಪ್ರಧಾನಿಯಾಗಿದ್ದ ನವಾಜ್ ಶರೀಫ್ ಅವರ ಮೇಲೆ ಕಾಶ್ಮೀರದಲ್ಲಿ ಜಿಹಾದ್ ಗೆ ಕುಮ್ಮಕ್ಕು ನೀಡಲು ಅಮೆರಿಕಾದ ಹಲ್ಲೆಯಲ್ಲಿ ಹತ್ಯೆಗೀಡಾದ ಉಗ್ರ ಒಸಾಮಾ ಬಿನ್ ಲಾಡೆನ (Osama Bin Laden) ನಿಂದ ಹಲವು ಬಾರಿ ಆಥಿಕ ನೆರವು ಪಡೆದಿದ್ದರು ಎಂದು ಆರೋಪಿಸಲಾಗುತ್ತದೆ. ನವಾಜ್ ಶರೀಫ್ 1990-93, 1997-98 ಮತ್ತು  2013-17 ರವರೆಗೆ ಪಾಕ್ ಪ್ರಧಾನಿಯಾಗಿದ್ದರು.


ಇದನ್ನು ಓದಿ-ನನ್ನ ಸೆರೆಮನೆ ಹಾಗೂ ಸ್ನಾನ ಗೃಹದಲ್ಲಿ ಕ್ಯಾಮರಾ ಅಳವಡಿಸಲಾಗಿದೆ-ನವಾಜ್ ಷರೀಫ್ ಪುತ್ರಿ


ಭ್ರಷ್ಟಾಚಾರದ ಆರೋಪಗಳ ಬಳಿಕ 2017 ರಲ್ಲಿ ಸುಪ್ರೀಂ ಕೋರ್ಟ್ ವತಿಯಿಂದ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ ಬಳಿಕ ನವಾಜ್ ಶರೀಫ್ ಸದ್ಯ ಜಾಮೀನಿನ ಮೇಲೆ ಹೊರಗಿದ್ದು, ಲಂಡನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 2016ರಲ್ಲಿ ಪ್ರಕಟಗೊಂಡ ಒಂದು ಪುಸ್ತಕದಲ್ಲಿಯೂ ಕೂಡ ನವಾಜ್ ಶರೀಫ್ ಅಲ್ ಕೈದಾ ಉಗ್ರ ಒಸಾಮಾ ಬಿನ್ ಲಾಡೆನ್ ನಿಂದ ಆರ್ಥಿಕ ನೆರವು ಪಡೆಯುತ್ತಿದ್ದ ಎಂದು ಉಲ್ಲೇಖಿಸಲಾಗಿದೆ.


ಇದನ್ನು ಓದಿ-ಪೊಲೀಸರು ಬಾಗಿಲು ಮುರಿದು ನನ್ನ ಕೋಣೆಯೊಳಗೆ ನುಗ್ಗಿದ್ದಾರೆ: ನವಾಜ್ ಷರೀಫ್ ಪುತ್ರಿ ಮರಿಯಮ್ ಆರೋಪ


"PML-N ಮುಖ್ಯಸ್ಥ ಮಿಯಾ ಮೊಹಮ್ಮದ್ ನವಾಜ್ ಶರೀಫ್ ಒಸಾಮಾ ಬಿನ್ ಲಾಡೆನ್ ನಿಂದ ಹಣ ಪಡೆದಿದ್ದ. ಬೆನಜೀರ್ ಭುಟ್ಟೋ ನೇತೃತ್ವದ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ವತಿಯಿಂದ ಚುನಾವಣೆ ಎದುರಿಸುವುದು ಇದರ ಹಿಂದಿನ ಉದ್ದೇಶವಾಗಿತ್ತು" ಎಂದು ಈ ಪುಸ್ತಕದಲ್ಲಿ ಉಲ್ಲಖಿಸಲಾಗಿದೆ. ಡಾನ್ ವೃತ್ತಪತ್ರಿಕೆಯಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ ಇದಕ್ಕಾಗಿ ಒಸಾಮಾ, ಶರೀಫ್ ಗೆ ಭಾರಿ ಧನಸಹಾಯ ನೀಡಿದ್ದ, ಆದರೆ, ಬಳಿಕ ಅಧಿಕಾರಕ್ಕೆ ಬಂದ ನಂತರ ಶರೀಫ್ ತನ್ನೆಲ್ಲಾ ಭರವಸೆಗಳಿಂದ ಹಿಂದೆ ಸರೆದಿದ್ದ ಎನ್ನಲಾಗಿತ್ತು.


ಇದನ್ನು ಓದಿ-ಪಾಕಿಸ್ತಾನಕ್ಕೆ ಮರಳಲು ನಿರಾಕರಿಸಿದ ನವಾಜ್ ಷರೀಫ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.