ಪಾಕಿಸ್ತಾನದತ್ತ ಸಿಡಿಯಿತಾ ಭಾರತದ ಕ್ಷಿಪಣಿ..! ವಾಸ್ತವ ಏನು ?
ಭಾರತ ಉಡಾಯಿಸಿದ ಕ್ಷಿಪಣಿ ತನ್ನ ಪಂಜಾಬ್ ಪ್ರಾಂತ್ಯದಲ್ಲಿ ಬಿದ್ದಿದೆ ಇದರಿಂದ ನಾಗರಿಕ ಪ್ರದೇಶಗಳಿಗೆ ಹಾನಿಯಾಗಿದೆ ಎಂದು ಪಾಕಿಸ್ತಾನಿ ಸೇನೆ ಹೇಳಿದೆ.
ಇಸ್ಲಾಮಾಬಾದ್ : ಭಾರತದ ವಿರುದ್ದ ಆರೋಪ ಮಾಡುವುಡು ಪಾಕಿಸ್ತಾನಕ್ಕೆ (Pakistan)ಹೊಸತೇನಲ್ಲ. ಹಿಂದಿನಿಂದಲೂ ಪಾಕ್ ಈ ಕೆಲಸವನ್ನು ಮಾಡುತ್ತಾ ಬಂದಿದೆ. ಈಗಲೂ ಅಂಥದ್ದೇ ಒಂದು ದೊಡ್ಡ ಆರೋಪವನ್ನು ಮಾಡಿದೆ. ಭಾರತ ಉಡಾಯಿಸಿದ ಕ್ಷಿಪಣಿ (India Missile)ತನ್ನ ಪಂಜಾಬ್ (Punjab)ಪ್ರಾಂತ್ಯದಲ್ಲಿ ಬಿದ್ದಿದೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ. ಭಾರತದಿಂದ ತನ್ನ ವಾಯುಪ್ರದೇಶಕ್ಕೆ ಬರುತ್ತಿದೆ ಎನ್ನಲಾದ ಕ್ಷಿಪಣಿಯನ್ನು ಪಂಜಾಬ್ ಪ್ರಾಂತ್ಯದಲ್ಲಿ ಪತನಗೊಳಿಸಿರುವುದಾಗಿ ಪಾಕಿಸ್ತಾನ ಸೇನೆ ಗುರುವಾರ ಹೇಳಿಕೊಂಡಿದೆ.
ನಾಗರಿಕ ಪ್ರದೇಶಗಳಲ್ಲಿ ಹಾನಿ :
ಮಾರ್ಚ್ 9 ರಂದು ಸಂಜೆ 6.43 ಕ್ಕೆ ಅತಿವೇಗದ ವಸ್ತುವೊಂದು ಭಾರತದ ಪ್ರದೇಶದಿಂದ ಹೊರಟು ಪಾಕಿಸ್ತಾನದ (Pakistan) ಪ್ರದೇಶವನ್ನು ಪ್ರವೇಶಿಸಿದೆ ನೆಲಕ್ಕಪ್ಪಳಿಸಿದೆ ಎಂದು ಪಾಕಿಸ್ತಾನಿ ಸೇನಾ ವಕ್ತಾರ ಮೇಜರ್ ಜನರಲ್ ಬಾಬರ್ ಇಫ್ತಿಕರ್ (Babar Iftikar)ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇದರಿಂದ ನಾಗರಿಕ ಪ್ರದೇಶಗಳಿಗೆ ಸ್ವಲ್ಪ ಹಾನಿಯನ್ನುಂಟುಮಾಡಿದೆ ಎಂದು ಅವರು ಹೇಳಿದ್ದಾರೆ. ಆದರೆ ಘಟನೆಯಲ್ಲಿ ಯಾರೂ ಸಾವನ್ನಪ್ಪಲಿಲ್ಲ ಎನ್ನುವುದನ್ನು ಅವರು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ : Omicron ಇನ್ನೂ ಹೋಗಿಲ್ಲ! ಬ್ರಿಟನ್ ನಲ್ಲಿ ನಡೆಸಲಾದ ಅಧ್ಯಯನದಲ್ಲಿ ಬೆಚ್ಚಿಬೀಳಿಸುವ ಮಾಹಿತಿ ಬಹಿರಂಗ
ಭಾರತ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ :
ಈ ವಿಚಾರಕ್ಕೆ ಸಬಂಧಪಟ್ಟಂತೆ ಭಾರತದಿಂದ (India) ಇದುವರೆಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಪಂಜಾಬ್‌ನ ಖಾನೆವಾಲ್ ಜಿಲ್ಲೆಯ ಮಿಯಾನ್ ಚನ್ನು ಪ್ರದೇಶದಲ್ಲಿ ಬುಧವಾರ ರಾತ್ರಿ ಅಪರಿಚಿತ ವಸ್ತು (missile) ಬಿದ್ದಿದೆ ಎಂದು ಮೇಜರ್ ಜನರಲ್ ಇಫ್ತಿಕರ್ ಹೇಳಿದ್ದಾರೆ. ಈ ಬಗ್ಗೆ ಪಾಕ್ ವಾಯುಪಡೆ ಶೋಧ ಕಾರ್ಯ ಆರಂಭಿಸಿದೆ ಎಂದೂ ಅದು ತಿಳಿಸಿದೆ.
ಕ್ಷಿಪಣಿಯ ಉಡಾವಣೆ ಪಾಕಿಸ್ತಾನ ಮತ್ತು ಭಾರತ ಎರಡರ ನಾಗರಿಕರನ್ನು ಅಪಾಯಕ್ಕೆ ಸಿಲುಕಿಸಿದೆ ಎಂದು ಪಾಕಿಸ್ತಾನ (Pakistan)ಹೇಳಿದೆ. ಘಟನೆಗೆ ಏನು ಕಾರಣ ಏನು ಎನ್ನುವುದನ್ನು ಭಾರತ ಸ್ಪಷ್ಟಪಡಿಸಬೇಕು ಎಂದು ಅದು ಹೇಳಿದೆ. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಪಾಕಿಸ್ತಾನಿ ಸೇನೆಯ ವಕ್ತಾರ, ಕ್ಷಿಪಣಿಯು 40,000 ಅಡಿ ಎತ್ತರದಲ್ಲಿ ಹಾದು ಹೋಗುತ್ತಿತ್ತು ಎಂದು ಹೇಳಿದ್ದಾರೆ.
ಇದನ್ನೂ ಓದಿ : Lost City: ಈಜಿಪ್ಟ್ ನಲ್ಲಿ 3000 ವರ್ಷಗಳಷ್ಟು ಹಳೆ ನಗರ ಪತ್ತೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.