ನವದೆಹಲಿ: ಎಂಟು ವರ್ಷಗಳ ಕಾಲ ಸರ್ವಾಧಿಕಾರಿಯಾಗಿ ಪಾಕಿಸ್ತಾನವನ್ನು ಆಳಿದ್ದ ಮಾಜಿ ಅಧ್ಯಕ್ಷ  ಪರ್ವೇಜ್ ಮುಷರಫ್‌ಗೆ ಪಾಕಿಸ್ತಾನದ ವಿಶೇಷ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ. ಪಾಕಿಸ್ತಾನದ ಇತಿಹಾಸದಲ್ಲಿ ಮೊದಲ ಬಾರಿಗೆ ಅಧ್ಯಕ್ಷರಿಗೆ ವಿಶೇಷ ನ್ಯಾಯಾಲಯವು ಮರಣದಂಡನೆ ವಿಧಿಸಿದೆ ಎಂದು ಪಾಕಿಸ್ತಾನದ ಮಾಧ್ಯಮ ಡಾನ್ ವರದಿ ಮಾಡಿದೆ. ಗಮನಾರ್ಹವಾಗಿ ನವಾಜ್ ಷರೀಫ್ ಸರ್ಕಾರ 1999 ರಿಂದ 2008ರವರೆಗೆ ಪಾಕಿಸ್ತಾನದ ಸರ್ವಾಧಿಕಾರಿಯಾಗಿದ್ದ  ಪರ್ವೇಜ್ ಮುಷರಫ್(Pervez Musharraf) ವಿರುದ್ಧ ಪ್ರಕರಣ ದಾಖಲಿಸಿತ್ತು.


COMMERCIAL BREAK
SCROLL TO CONTINUE READING

ಡಿಸೆಂಬರ್ 3, 2007 ರಂದು, ತುರ್ತು ಪರಿಸ್ಥಿತಿಯನ್ನು ಜಾರಿಗೊಳಿಸಿದ್ದಕ್ಕಾಗಿ ಮಾಜಿ ಅಧ್ಯಕ್ಷರ ವಿರುದ್ಧ 2013 ರ ಡಿಸೆಂಬರ್‌ನಲ್ಲಿ ದೇಶದ್ರೋಹ ಪ್ರಕರಣವನ್ನು ದಾಖಲಿಸಲಾಯಿತು. ಮುಷರಫ್ ಅವರನ್ನು 31 ಮಾರ್ಚ್ 2014 ರಂದು ಶಿಕ್ಷೆಗೊಳಪಡಿಸಲಾಯಿತು. ಅದೇ ವರ್ಷದ ಸೆಪ್ಟೆಂಬರ್‌ನಲ್ಲಿ ಪ್ರಾಸಿಕ್ಯೂಷನ್ ವಿಶೇಷ ನ್ಯಾಯಾಲಯದ ಮುಂದೆ ಸಂಪೂರ್ಣ ಸಾಕ್ಷ್ಯವನ್ನು ಮಂಡಿಸಿತು. ಮುಷರಫ್ ಅವರು ಮಾರ್ಚ್ 2016 ರಲ್ಲಿ ಪಾಕಿಸ್ತಾನವನ್ನು ತೊರೆದರು. ಅವರು ಪ್ರಸ್ತುತ ದುಬೈನಲ್ಲಿ ವಾಸಿಸುತ್ತಿದ್ದಾರೆ. 


ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ದುಬೈನ ಆಸ್ಪತ್ರೆಗೆ ದಾಖಲು


ಇದಕ್ಕೂ ಮೊದಲು ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ಡಿಸೆಂಬರ್ 15 ರಂದು ಲಾಹೋರ್ ಹೈಕೋರ್ಟ್‌ನಲ್ಲಿ (ಎಲ್‌ಎಚ್‌ಸಿ) ಅರ್ಜಿ ಸಲ್ಲಿಸಿದ್ದರು. ಈ ಕುರಿತು ಲಾಹೋರ್ ಹೈಕೋರ್ಟ್ (ಎಲ್‌ಎಚ್‌ಸಿ) ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರ ಅರ್ಜಿ ಕುರಿತು ಪಾಕಿಸ್ತಾನ ಸರ್ಕಾರಕ್ಕೆ ಸೋಮವಾರ ನೋಟಿಸ್ ನೀಡಿದೆ.


ಇದಕ್ಕೂ ಮುನ್ನ ಡಿಸೆಂಬರ್‌ನಲ್ಲಿ ಆಸ್ಪತ್ರೆಯಿಂದಲೇ ಮಾತನಾಡಿದ್ದ ಮುಷರಫ್ ಅವರ ವಿರುದ್ಧದ ಹೆಚ್ಚಿನ ದೇಶದ್ರೋಹ ಪ್ರಕರಣವು "ಆಧಾರರಹಿತ" ಎಂದು ಪ್ರತಿಪಾದಿಸಿದ್ದರು. ಈ ವಿಷಯದಲ್ಲಿ ಅವರ ವಕೀಲರನ್ನು ನ್ಯಾಯಾಲಯವು ವಿಚಾರಣೆಗೆ ಒಳಪಡಿಸುತ್ತಿಲ್ಲ ಎಂದು ಅವರು ಆರೋಪಿಸಿದ್ದರು.ಪಾಕಿಸ್ತಾನಕ್ಕಾಗಿ ಯುದ್ಧಗಳನ್ನು ಮಾಡಿ ಒಂದು ದಶಕದ ಕಾಲ ದೇಶಕ್ಕೆ ಸೇವೆ ಸಲ್ಲಿಸಿರುವುದಾಗಿಯೂ ಮಾಜಿ ಅಧ್ಯಕ್ಷ ತಿಳಿಸಿದ್ದರು. "ಈ ಪ್ರಕರಣ ನನಗೆ ಆಧಾರರಹಿತವಾಗಿದೆ. ನಾನು ಪಾಕಿಸ್ತಾನಕ್ಕಾಗಿ ಯುದ್ಧಗಳನ್ನು ನಡೆಸಿ 10 ವರ್ಷಗಳಿಂದ ನನ್ನ ದೇಶಕ್ಕೆ ಸೇವೆ ಸಲ್ಲಿಸಿದ್ದೇನೆ. ನನ್ನ ವಕೀಲ ಸಲ್ಮಾನ್ ಸಫ್ದಾರ್ ಅವರ ವಾದವನ್ನೂ ಕೂಡ ನ್ಯಾಯಾಲಯ ಕೇಳುತ್ತಿಲ್ಲ" ಎಂದು ತಿಳಿಸಿದ್ದರು.


ವೈದ್ಯಕೀಯ ವರದಿಗಳ ಪ್ರಕಾರ, ಮುಷರಫ್ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಮತ್ತು ರಕ್ತದೊತ್ತಡದ ಸಮಸ್ಯೆಯನ್ನು ಹೊಂದಿದ್ದಾರೆ ಎಂದು ಪಾಕಿಸ್ತಾನದ ಮಾಧ್ಯಮ ವರದಿ ಮಾಡಿದೆ. ದುಬೈನ ಅಮೇರಿಕನ್ ಆಸ್ಪತ್ರೆಯ ವೀಡಿಯೊ ಸಂದೇಶವೊಂದರಲ್ಲಿ, ಜಿಯೋ ನ್ಯೂಸ್ ಮುಷರಫ್ ಅವರನ್ನು ಉಲ್ಲೇಖಿಸಿ ಮುಷರಫ್ ಅನಾರೋಗ್ಯದ ಬಗ್ಗೆ ವರದಿ ಮಾಡಿದೆ.