ಇಸ್ಲಾಮಾಬಾದ್ :  ಕರೋನಾ ವೈರಸ್ (Coronavirus) ವಿರುದ್ದ ಹೋರಾಡಲು ಪಾಕಿಸ್ತಾನವೂ ವ್ಯಾಕ್ಸಿನ್ ಒಂದನ್ನು ತಯಾರು ಮಾಡಿದೆ.  ಚೀನಾ ನೆರವಿನೊಂದಿಗೆ ದೇಶಿಯವಾಗಿ ಅಭಿವೃದ್ಧಿಪಡಿಸಲಾಗಿರುವ ವ್ಯಾಕ್ಸಿನ್ ಒಂದನ್ನು ಪಾಕಿಸ್ತಾನ (Pakistan) ಅಧಿಕೃತವಾಗಿ ಬಿಡುಗಡೆ ಮಾಡಿದೆ.  ಈ  ವ್ಯಾಕ್ಸಿನ್ ಗೆ ಪ್ಯಾಕ್ ವ್ಯಾಕ್ (Pakvac) ಕೊವಿಡ್ ವ್ಯಾಕ್ಸಿನ್ ಎಂದು ಹೆಸರಿಡಲಾಗಿದೆ.  ರಾಷ್ಟ್ರೀಯ ಕಮಾಂಡ್ ಮತ್ತು ಅಪರೇಶನ್ ಸೆಂಟರ್ ಮುಖ್ಯಸ್ಥ ಅಸದ್ ಊಮರ್ ಮತ್ತು ಆರೋಗ್ಯ ವಿಚಾರದಲ್ಲಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಸಲಹೆಗಾರರಾಗಿರುವ ಡಾ. ಫೈಸಲ್ ಸುಲ್ತಾನ್ ವ್ಯಾಕ್ಸಿನ್ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 


COMMERCIAL BREAK
SCROLL TO CONTINUE READING

ಈ ಸಂದರ್ಭದಲ್ಲಿ ಮಾತನಾಡಿದ ಅಸದ್ ಉಮರ್, ಕರೋನಾ ವೈರಸ್ (Coronavirus) ಪ್ರಪಂಚಕ್ಕೆ ಸವಾಲೊಡ್ಡಿದೆ. ವೈರಸ್ ಗೆ ಯಾವುದೇ ಸೀಮೆಯ ಪರಿಮಿತಿ ಇಲ್ಲ. ಬೇರೆ ದೇಶಗಳಿಗೆ ಹೋಲಿಸಿದರೆ, ಪಾಕಿಸ್ತಾನದಲ್ಲಿ (Pakistan) ಕರೋನಾ ಸ್ಥಿತಿ ಸಾಕಷ್ಟು ಉತ್ತಮವಾಗಿದೆ ಎಂದು ಹೇಳಿದರು.  


ಇದನ್ನೂ ಓದಿ : Corona Virus Nomination By WHO: ಭಾರತದಲ್ಲಿ ದೊರೆತೆ Covid-19 ರೂಪಾಂತರಿಗಳಿಗೆ ನಾಮಕರಣ ಮಾಡಿದ WHO


ಇದೇ ವೇಳೆ ಮಾತನಾಡಿದ ಡಾ. ಫೈಸಲ್ ಸುಲ್ತಾನ್,  ಇನ್ನು ಕೆಲವು ವರ್ಷಗಳ ತನಕ ಪಾಕಿಸ್ತಾನವು ಕೊವಿಡ್ ವ್ಯಾಕ್ಸಿನ್ ಪ್ಯಾಕ್ ವ್ಯಾಕ್ (Pakvac) ಪೂರ್ಣ ರೀತಿಯಲ್ಲಿ ಉತ್ಪಾದನೆ ಮಾಡಲಿದೆ ಎಂದು ಹೇಳಿದರು.


ಪಾಕಿಸ್ತಾನದಲ್ಲಿ ಕಳೆದ 24 ಗಂಟೆಗಳಲ್ಲಿ 2117 ಹೊಸ ಕರೋನಾ (COVID-19) ಕೇಸುಗಳು ದಾಖಲಾಗಿವೆ. 43 ಜನರು ಸಾವನ್ನಪ್ಪಿದ್ದಾರೆ.  ಪಾಕಿಸ್ತಾನದಲ್ಲಿ ಕರೋನಾ ಸಂಕ್ರಾಮಿತರ ಸಂಖ್ಯೆ 9.21 ಲಕ್ಷ ತಲುಪಿದೆ. ಮುಂದಿನ ದಿನಗಳಲ್ಲಿ ಮೆಡಿಕಲ್ ಮೂಲಸೌಕರ್ಯ  ಬಲಪಡಿಸಲು ಯೋಜನೆ ರೂಪಿಸುತ್ತಿದೆ.


ಇದನ್ನೂ ಓದಿ : 'Patient Su': ಸಿಕ್ ಹಾಕೊಂಡ್ಲು 'ಪೇಶಂಟ್ ಸೂ', ಇನ್ನು ಚೀನಾ 'ಖೇಲ್ ಖತಂ'


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ