ನವದೆಹಲಿ: ಯುರೋಪಿಯನ್ ಯೂನಿಯನ್ ಪಾಕಿಸ್ತಾನಕ್ಕೆ (Pakistan) ದೊಡ್ಡ ಹೊಡೆತ ನೀಡಿದ್ದು, ಅಲ್ಲಿನ ಸರ್ಕಾರಿ ವಿಮಾನಯಾನ ಕಂಪನಿಯನ್ನು 6 ತಿಂಗಳು ನಿಷೇಧಿಸಿದೆ.  ಈ ಕುರಿತಂತೆ ಮಹತ್ವದ ನಿರ್ಧಾರ ಕೈಗೊಂಡಿರುವ ಇಯುನ ವಾಯು ಸುರಕ್ಷತಾ ಸಂಸ್ಥೆ ಪಾಕಿಸ್ತಾನ ಇಂಟರ್ನ್ಯಾಷನಲ್ ಏರ್ಲೈನ್ಸ್ ಯುರೋಪ್ಗೆ ಹೋಗುವುದನ್ನು ನಿಷೇಧಿಸಲಾಗಿದೆ ಎಂದು ಹೇಳಿದೆ. ಅಂತಹ ಪರಿಸ್ಥಿತಿಯಲ್ಲಿ ಇನ್ನು ಮುಂದೆ ಯಾವುದೇ ಪಿಐಎ ವಿಮಾನ ಯುರೋಪ್‌ಗೆ ಹೋಗುವುದಿಲ್ಲ. ಈ ನಿಷೇಧ ಜುಲೈ 1 ರಿಂದ ಜಾರಿಗೆ ಬರಲಿದೆ.


COMMERCIAL BREAK
SCROLL TO CONTINUE READING

ಯುರೋಪಿಯನ್ ಯೂನಿಯನ್ ನಿರ್ಧಾರದ ಹಿಂದಿನ ಕಾರಣ:
ಕಳೆದ ತಿಂಗಳು ಕರಾಚಿಯಲ್ಲಿ ಪಿಐಎ ವಿಮಾನ ಅಪಘಾತಕ್ಕೀಡಾಗಿದ್ದು 97 ಜನರು ಸಾವನ್ನಪ್ಪಿದ್ದಾರೆ. ಮೇ 22 ರಂದು ಜಿನ್ನಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪವಿರುವ ವಸತಿ ಪ್ರದೇಶದಲ್ಲಿ ವಿಮಾನ ಅಪಘಾತಕ್ಕೀಡಾಗಿದೆ. 91 ಪ್ರಯಾಣಿಕರು ಮತ್ತು ಎಂಟು ಸಿಬ್ಬಂದಿಗಳನ್ನು ಹೊತ್ತ ಏರ್‌ಬಸ್ ಎ 320 ವಿಮಾನದಲ್ಲಿ ಇಬ್ಬರು ಮಾತ್ರ ಬದುಕುಳಿದರು.


ಭಾರತದ ಪರಾಕ್ರಮ ಕಂಡು ಭಯಭೀತರಾದ ಪಾಕಿಸ್ತಾನ ವಿದೇಶಾಂಗ ಸಚಿವ


ಇದರ ನಂತರ, ಪಿಐಎ ಪೈಲಟ್‌ಗಳ ಕೆಲವು ಪರವಾನಗಿಗಳು ನಕಲಿ ಎಂಬ ವರದಿಗಳ ಆಧಾರದ ಮೇಲೆ ಯುರೋಪಿಯನ್ ಯೂನಿಯನ್ ವಾಯು ಸುರಕ್ಷತಾ ಸಂಸ್ಥೆ ಈ ನಿರ್ಧಾರವನ್ನು ತೆಗೆದುಕೊಂಡಿದೆ. ವಿಶೇಷವೆಂದರೆ ಕತಾರ್ ಏರ್ವೇಸ್ ಸೇರಿದಂತೆ ಹಲವಾರು ಅಂತರರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳು 262 ಪೈಲಟ್‌ಗಳು ನಕಲಿ ಪರವಾನಗಿ ಹೊಂದಿದ್ದಾರೆ ಎಂಬ ವರದಿಗಳನ್ನು ಪಡೆದ ನಂತರ ಪಾಕಿಸ್ತಾನದ ಸಿಬ್ಬಂದಿಗಳ ವಿರುದ್ಧ ತನಿಖೆ ಆರಂಭಿಸಿದ್ದಾರೆ ಮತ್ತು ಮುಂದಿನ ಸೂಚನೆ ಬರುವವರೆಗೂ ಅವರನ್ನು ಕೆಲಸ ಮಾಡುವುದನ್ನು ನಿರ್ಬಂಧಿಸಿದ್ದಾರೆ.


ಪಾಕಿಸ್ತಾನ ಭಯೋತ್ಪಾದನೆಯ ಕೇಂದ್ರ ಎಂದು ಹೇಳಿದ ಯುಎನ್ ವರದಿಯಲ್ಲಿ ಏನಿದೆ?


ಪಾಕಿಸ್ತಾನ ಅಂತರರಾಷ್ಟ್ರೀಯ ವಿಮಾನಯಾನ ಸಂಸ್ಥೆ (ಪಿಐಎ) ಕಳೆದ ವಾರ 'ಅನುಮಾನಾಸ್ಪದ ಪರವಾನಗಿ' ಹೊಂದಿರುವ 150 ಪೈಲಟ್‌ಗಳನ್ನು ಕೆಲಸ ಮಾಡಲು ನಿರಾಕರಿಸಿತು. ಪಾಕಿಸ್ತಾನದ ವಾಯುಯಾನ ಸಚಿವ ಗುಲಾಮ್ ಸರ್ವಾರ್ ಖಾನ್ ಅವರು ಸಂಸತ್ತಿನಲ್ಲಿ 40 ಪ್ರತಿಶತದಷ್ಟು ಪೈಲಟ್‌ಗಳ ಪರವಾನಗಿಗಳು ನಕಲಿ ಎಂದು ಹೇಳಿದ್ದಾರೆ. ನಕಲಿ ಪರವಾನಗಿ ಹೊಂದಿರುವ ಪೈಲಟ್‌ಗಳಿಗೆ ವಿಮಾನಗಳನ್ನು ಹಾರಲು ಅನುಮತಿಸದಂತೆ ಖಾಸಗಿ ವಿಮಾನಯಾನ ಕಂಪನಿಗಳಿಗೆ ಸೂಚನೆ ನೀಡಲಾಗಿದೆ ಎಂದು ವಿಮಾನಯಾನ ಸಚಿವರು ತಿಳಿಸಿದ್ದಾರೆ.