ಇಸ್ಲಾಮಾಬಾದ್: ಕರೋನವೈರಸ್ ಸಾಂಕ್ರಾಮಿಕ ರೋಗದಿಂದ ಪಾಕಿಸ್ತಾನ ಭಯಭೀತಗೊಂಡಿದೆ. ವಾಸ್ತವವಾಗಿ ವಿಶ್ವದ ಅನೇಕ ದೇಶಗಳಲ್ಲಿ ಕೋವಿಡ್-19 ಮತ್ತೆ ಉಲ್ಬಣಗೊಳ್ಳುತ್ತಿದೆ. ಈ ಹಿನ್ನಲೆಯಲ್ಲಿ ಪಿಎಂ ಇಮ್ರಾನ್ ಖಾನ್ ಸರ್ಕಾರ ಆದಷ್ಟು ಬೇಗ ಎಲ್ಲ ಜನರಿಗೆ ಲಸಿಕೆ ಹಾಕಲು ಬಯಸಿದೆ. ಈ ಸಂಚಿಕೆಯಲ್ಲಿ ಕರೋನಾ ಲಸಿಕೆ (Corona Vaccine) ಪಡೆಯದವರ ವಿರುದ್ಧ ಪಾಕ್ ಸರ್ಕಾರ ಹೊಸ ಕ್ರಮ ಕೈಗೊಳ್ಳಲು ಮುಂದಾಗಿದೆ. ಅಂದರೆ, ಲಸಿಕೆ ಪಡೆಯುವ ಬಗ್ಗೆ ಇನ್ನೂ ಗಂಭೀರವಾಗಿರದವರು ಸರ್ಕಾರದ ಈ ಕ್ರಮವನ್ನು ಎದುರಿಸಬೇಕಾಗುತ್ತದೆ. ಅಕ್ಟೋಬರ್ 1 ರಿಂದ ಕರೋನಾ ಲಸಿಕೆ ಪಡೆಯದ ಜನರು ರೈಲಿನಲ್ಲಿ ಪ್ರಯಾಣಿಸಲು ಸಾಧ್ಯವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.


COMMERCIAL BREAK
SCROLL TO CONTINUE READING

ಪಾಕ್ ಮೊದಲೇ ಈ ಕ್ರಮಗಳನ್ನು ಕೈಗೊಂಡಿತ್ತು:
ಇದಕ್ಕೂ ಮುಂಚೆಯೇ, ಕರೋನಾ ಲಸಿಕೆ (Corona Vaccine) ಪಡೆಯದವರ ಹೃದಯದಲ್ಲಿ ಭಯವನ್ನು ಸೃಷ್ಟಿಸಲು ಪಾಕ್ ಸರ್ಕಾರವು ಅನೇಕ ಕ್ರಮಗಳನ್ನು ಕೈಗೊಂಡಿದೆ. ಇದರಲ್ಲಿ ಫ್ಲೈಟ್ ಬ್ಯಾನ್ ಮತ್ತು ಸಿಮ್ ಕಾರ್ಡ್ ಬ್ಯಾನ್ ನಂತಹ ನಿರ್ಧಾರಗಳು ಪ್ರಮುಖವಾಗಿವೆ. ಒಂದೇ ಒಂದು ಡೋಸ್ ಲಸಿಕೆ ತೆಗೆದುಕೊಳ್ಳದವರು ದೇಶೀಯ ವಿಮಾನಗಳಲ್ಲಿ ಪ್ರಯಾಣಿಸುವುದನ್ನು ಪಾಕಿಸ್ತಾನ ನಿಷೇಧಿಸಿದೆ. ಅದೇ ಸಮಯದಲ್ಲಿ, ಲಸಿಕೆ ಪಡೆಯದ ಜನರ ಮೊಬೈಲ್ ಸಿಮ್‌ಗಳನ್ನು ಮುಚ್ಚುವಂತೆ ಸಿಂಧ್ ಪ್ರಾಂತ್ಯದ ಸರ್ಕಾರ ಇತ್ತೀಚೆಗೆ ಆದೇಶಿಸಿತ್ತು.


ಇದನ್ನೂ ಓದಿ- Corona Vaccine: ಲಸಿಕೆಯ ಕೊರತೆ ನೀಗಿಸಲು ವಿಶ್ವ ಆರೋಗ್ಯ ಸಂಸ್ಥೆ ನೀಡಿದೆ ಈ ಸಲಹೆ


NCOC ಸಭೆಯಲ್ಲಿ ನಿರ್ಧಾರ:
ಪಾಕಿಸ್ತಾನದಲ್ಲಿ ಕರೋನಾವೈರಸ್ (Coronavirus) ಸೋಂಕನ್ನು ತಡೆಗಟ್ಟಲು ಸ್ಥಾಪಿಸಲಾದ ರಾಷ್ಟ್ರೀಯ ಕಮಾಂಡ್ ಮತ್ತು ಕಾರ್ಯಾಚರಣೆ ಕೇಂದ್ರದ (National Command and Operation Centre - NCOC) ಸಭೆಯಲ್ಲಿ ಇದುವರೆಗೂ ಕರೋನಾ ಲಸಿಕೆಯ ಒಂದೂ ಡೋಸ್ ಪಡೆಯದವರಿಗೆ ರೈಲು ಪ್ರಯಾಣವನ್ನು ನಿಷೇಧಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಲಸಿಕೆಯ ಬಗ್ಗೆ ಜನರ ಹಿಂಜರಿಕೆ ಮತ್ತು ಸೋಂಕು ಮತ್ತೆ ಹರಡುವ ಬಗ್ಗೆ ಕೇಂದ್ರವು ಕಳವಳ ವ್ಯಕ್ತಪಡಿಸಿದೆ. ಈ ಹಿನ್ನಲೆಯಲ್ಲಿ ಮುಂದಿನ ದಿನಗಳಲ್ಲಿ ಸರ್ಕಾರವು ಇನ್ನೂ ಹಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ- Vaccine Mixing And Matching - Covishield ಹಾಗೂ Covaxin ಮಿಕ್ಸ್ ಲಸಿಕೆ ಹಾಕಿಸಿಕೊಂಡವರಲ್ಲಿ ಉತ್ತಮ ಪರಿಣಾಮ ಗಮನಿಸಲಾಗಿದೆ: ICMR


70 ಲಕ್ಷ ಜನರಿಗೆ ಎರಡೂ ಡೋಸ್ ನೀಡಲಾಗಿದೆ:-
ಎನ್‌ಸಿಒಸಿ ಸಭೆಯ ಬಗ್ಗೆ ಮಾಹಿತಿ ನೀಡಿದ ಅಧಿಕಾರಿಯೊಬ್ಬರು, ಲಸಿಕೆ ಪಡೆಯಲು ಇಚ್ಛಿಸದವರಿಗೆ ಅಕ್ಟೋಬರ್ 1 ರಿಂದ ರೈಲಿನಲ್ಲಿ ಪ್ರಯಾಣಿಸಲು ಅವಕಾಶವಿಲ್ಲ ಎಂದು ಹೇಳಿದರು. ಈ ನಿರ್ಧಾರವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುವುದು. ಈಗಾಗಲೇ ಲಸಿಕೆ ಪಡೆಯದವರ ದೇಶೀಯ ವಿಮಾನ ಪ್ರಯಾಣವನ್ನು ನಿಷೇಧಿಸಲಾಗಿದೆ. ಪಾಕಿಸ್ತಾನವು ಫೆಬ್ರವರಿಯಲ್ಲಿ ಲಸಿಕೆ ಅಭಿಯಾನವನ್ನು ಆರಂಭಿಸಿತು ಮತ್ತು ಇಲ್ಲಿಯವರೆಗೆ 37 ದಶಲಕ್ಷಕ್ಕೂ ಹೆಚ್ಚು ಜನರು ಕನಿಷ್ಠ ಒಂದು ಡೋಸ್ ಲಸಿಕೆಯನ್ನು ಪಡೆದಿದ್ದಾರೆ. ಆದರೆ ಕೇವಲ 70 ಲಕ್ಷ ಜನರು ಎರಡೂ ಡೋಸ್‌ಗಳನ್ನು ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ