ನವದೆಹಲಿ: Vaccine Mixing And Matching - ವಿಶ್ವಾದ್ಯಂತ ಹೆಚ್ಚಾಗುತ್ತಿರುವ ಕೊವಿಡ್ ಸೊಂಕಿನ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ವ್ಯಾಕ್ಸಿನ್ ಸಂರಕ್ಷಣೆಯನ್ನು ಒದಗಿಸುವ ಒಂದು ಉತ್ತಮ ಮಾರ್ಗ ಎನ್ನಲಾಗುತ್ತಿದೆ. ಇದೆ ಕಾರಣದಿಂದ ಕೊರೊನಾ ವ್ಯಾಕ್ಸಿನ್ ಗೆ ಸಂಬಂಧಿಸಿದ ಪರೀಕ್ಷೆಗಳು ಇನ್ನು ಮುಂದುವರೆದಿವೆ. ಇದೆ ಸರದಿಯಲ್ಲಿ ಇದೀಗ ವಿಶ್ವದ ಇತರೆ ದೇಶಗಳ ರೀತಿ ಭಾರತದಲ್ಲಿಯೂ ಕೂಡ ಕೊರೊನಾ ವ್ಯಾಕ್ಸಿನ್ ನ ಮಿಶ್ರ ಪ್ರಮಾಣ ನೀಡುವುದರ ಮೇಲೆ ಸಂಶೋಧನೆಯನ್ನು ನಡೆಸಲಾಗಿದೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್), ಸಂಶೋಧನೆಯಲ್ಲಿ ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಮಿಶ್ರ ಪ್ರಮಾಣಗಳು ಉತ್ತಮ ಫಲಿತಾಂಶಗಳನ್ನು ತೋರಿಸಿದೆ ಎಂದು ಹೇಳಿದೆ.
ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಸಂಶೋಧನೆಯು ಅಡೆನೊವೈರಸ್ ವೆಕ್ಟರ್ ಪ್ಲಾಟ್ಫಾರ್ಮ್ (Adenovirus Vector Platform) ಆಧರಿಸಿದ Covishield ಹಾಗೂ Covaxin ಲಸಿಕೆಗಳ ಮಿಶ್ರಣ ಮಾಡಿ ಪರಿಣಾಮಗಳನ್ನು ಗಮನಿಸಿದಾಗ ಅದು ಉತ್ತಮ ಫಲಿತಾಂಶಗಳನ್ನು ನೀಡಿದೆ. ಇದು ಕರೋನಾದ ಸೋಂಕನ್ನು ಕಡಿಮೆ ಮಾಡುವುದಲ್ಲದೆ, ದೇಹದಲ್ಲಿ ಉತ್ತಮ ರೋಗನಿರೋಧಕ ಶಕ್ತಿಯನ್ನು ಕೂಡ ನಿರ್ಮಿಸುತ್ತದೆ.
ಇದನ್ನೂ ಓದಿ-ಮೊದಲ ಡೋಸ್ Vaccine ಬಳಿಕ ಎರಡನೇ ಡೋಸ್ ಹಾಕುವ ಹೊತ್ತಿಗೆ ಸ್ಟಾಕ್ ಕೊನೆಗೊಂಡರೆ, ಮುಂದೆ?
ತಜ್ಞರ ಕ್ರಿಯಾ ಸಮಿತಿಯು (SEC) ಕೆಲವೇ ದಿನಗಳ ಹಿಂದೆ ಭಾರತ್ ಬಯೋಟೆಕ್‌ನ ಮೂಗಿನ ಮೂಲಕ ನೀಡುವ ಲಸಿಕೆಯ ಜೊತೆಗೆ ಕೋವಿಶೀಲ್ಡ್ ಮತ್ತು ಕೋವಾಕ್ಸಿನ್‌ನ ಮಿಶ್ರ ಡೋಸ್‌ನ ಅಧ್ಯಯನಕ್ಕೆ ಅನುಮೋದನೆ ನೀಡಿತ್ತು. ಎಸ್‌ಇಸಿ ಸದಸ್ಯರು ಅನೇಕ ದೇಶಗಳಲ್ಲಿನ, ಒಬ್ಬೊಬ್ಬ ವ್ಯಕ್ತಿಗಳಿಗೆ ಎರಡೂ ಕೊರೊನಾ ವ್ಯಾಕ್ಸಿನ್ ಪ್ರಮಾಣಗಳನ್ನು ನೀಡಿದ್ದು, ಅದರ ಫಲಿತಾಂಶಗಳು ತುಂಬಾ ಉತ್ತಮ ಹೊರಬಂದಿವೆ ಎಂದು ಹೇಳಿದೆ.
ಇದನ್ನೂ ಓದಿ-ವೈಜ್ಞಾನಿಕವಾಗಿ ಸಾಬೀತಾಗುವವರೆಗೆ ಲಸಿಕೆಯನ್ನು ಮಿಶ್ರಣ ಮಾಡುವ ಪ್ರಶ್ನೆಯೇ ಇಲ್ಲ ಎಂದ ಕೇಂದ್ರ
ಉತ್ತರ ಪ್ರದೇಶದಲ್ಲಿ ಓರ್ವ ವ್ಯಕ್ತಿಗೆ ಅಚಾತುರ್ಯದಿಂದ ಲಸಿಕೆಯ ಎರಡು ವಿಭಿನ್ನ ಪ್ರಮಾಣಗಳು
ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಸಂಯೋಜನೆಯೊಂದಿಗೆ (Vaccine Mix And Match) ಯಾವುದೇ ಪ್ರತಿಕೂಲ ಪರಿಣಾಮವನ್ನು ಇಲ್ಲಿಯವರೆಗೆ ಗಮನಿಸಲಾಗಿಲ್ಲ ಎಂದು ಸಮಿತಿಯ ಸದಸ್ಯರು ಮಾಹಿತಿ ನೀಡಿದ್ದಾರೆ. ಉತ್ತರ ಪ್ರದೇಶದಲ್ಲಿ, ಒಬ್ಬ ವ್ಯಕ್ತಿಗೆ ತಪ್ಪಾಗಿ ಎರಡು ವಿಭಿನ್ನ ಲಸಿಕೆಗಳ ಡೋಸ್ ನೀಡಲಾಗಿದೆ. ಆದರೆ, ಇದರ ನಂತರ ವೈದ್ಯರು ಆ ವ್ಯಕ್ತಿಯ ಆರೋಗ್ಯದ ಮೇಲೆ ತೀವ್ರ ನಿಗಾವಹಿಸಿದ್ದರು. ವ್ಯಕ್ತಿಯು ಸಂಪೂರ್ಣವಾಗಿ ಆರೋಗ್ಯದಿಂದಿದ್ದು, ಅವನಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ವೈದ್ಯರು ಹೇಳಿದ್ದಾರೆ. ವೈಜ್ಞಾನಿಕ ಅಧ್ಯಯನಗಳಲ್ಲಿ, ಕರೋನಾ ವೈರಸ್ ಮತ್ತು ಅಡೆನೊ ವೈರಸ್‌ನಿಂದ ಮಾಡಿದ ಎರಡು ವಿಭಿನ್ನ ಲಸಿಕೆಗಳು ಒಂದೇ ದೇಹದಲ್ಲಿ ಒಂದೇ ಪರಿಣಾಮವನ್ನು ತೋರಿಸುವ ಎಲ್ಲಾ ಸಾಧ್ಯತೆಗಳಿವೆ.
ಇದನ್ನೂ ಓದಿ-Mixing Covid-19 Vaccines: ವ್ಯಾಕ್ಸಿನ್ ಮಿಕ್ಸಿಂಗ್ ಅಪಾಯಕಾರಿಯೇ? WHO ಪ್ರಮುಖ ವೈಜ್ಞಾನಿಕ ಈ ಕುರಿತು ಹೇಳಿದ್ದೇನು?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ