ಸಂಜೋತಾ ಎಕ್ಸ್ ಪ್ರೆಸ್ ನ್ನು ಸ್ಥಗಿತಗೊಳಿಸಿ ನಡುದಾರಿಯಲ್ಲಿಯೇ ಕೈ ಬಿಟ್ಟ ಪಾಕ್ !
ಜಮ್ಮು ಮತ್ತು ಕಾಶ್ಮೀರದ ವಿಚಾರವಾಗಿ ಭಾರತ ಸರ್ಕಾರ ಕೈಗೊಂಡಿರುವ ಕ್ರಮದ ವಿರುದ್ಧವಾಗಿ ಈಗ ಪಾಕಿಸ್ತಾನ ಪ್ರತಿಕಾರ ತಿರಿಸಿಕೊಳ್ಳಲು ಮುಂದಾಗಿದೆ. ಅದರ ಭಾಗವಾಗಿ ಈಗ ಸಂಜೌತಾ ಎಕ್ಸ್ ಪ್ರೆಸ್ ರೈಲು ಸೇವೆಯನ್ನು ಪಾಕ್ ಏಕಾಏಕಿ ಸ್ಥಗಿತಗೊಳಿಸಿದೆ.
ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ವಿಚಾರವಾಗಿ ಭಾರತ ಸರ್ಕಾರ ಕೈಗೊಂಡಿರುವ ಕ್ರಮದ ವಿರುದ್ಧವಾಗಿ ಈಗ ಪಾಕಿಸ್ತಾನ ಪ್ರತಿಕಾರ ತಿರಿಸಿಕೊಳ್ಳಲು ಮುಂದಾಗಿದೆ. ಅದರ ಭಾಗವಾಗಿ ಈಗ ಸಂಜೌತಾ ಎಕ್ಸ್ ಪ್ರೆಸ್ ರೈಲು ಸೇವೆಯನ್ನು ಪಾಕ್ ಏಕಾಏಕಿ ಸ್ಥಗಿತಗೊಳಿಸಿದೆ.
ಇದರಿಂದಾಗಿ ಪಾಕಿಸ್ತಾನದ ಲಾಹೋರ್‌ನಿಂದ ಬರುವ ಸಂಜೌತಾ ಎಕ್ಸ್‌ಪ್ರೆಸ್‌ನ ಪ್ರಯಾಣಿಕರು ಸುಮಾರು ಮೂರು ಗಂಟೆಗಳ ಕಾಲ ವಾಘಾ ಗಡಿಯಲ್ಲಿ ಕಾಯಬೇಕಾಯಿತು. ಈಗ ಈ ನಿರ್ಧಾರದ ಕುರಿತಾಗಿ ರಾಯಿಟರ್ಸ್ ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿರುವ ಪಾಕಿಸ್ತಾನದ ರೈಲ್ವೆ ಸಚಿವ ಶೇಖ್ ರಶೀದ್ 'ಸಂಜೌತಾ ಎಕ್ಸ್‌ಪ್ರೆಸ್ ಅನ್ನು ಸ್ಥಗಿತಗೊಳಿಸಲು ನಾವು ನಿರ್ಧರಿಸಿದ್ದೇವೆ.ನಾನು ರೈಲ್ವೆ ಸಚಿವನಾಗಿರುವವರೆಗೂ ಸಂಜೌತಾ ಎಕ್ಸ್‌ಪ್ರೆಸ್ ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲ" ಎಂದು ಹೇಳಿದರು.
ಮಧ್ಯಾಹ್ನ 1 ಗಂಟೆಗೆ ರೈಲು ವಾಗಾ ತಲುಪಿದಾಗ ಪಾಕಿಸ್ತಾನದ ಸಿಬ್ಬಂದಿ ರೈಲನ್ನು ನಿಲ್ಲಿಸಿ ಮುಂದೆ ಅದನ್ನು ಓಡಿಸಲು ನಿರಾಕರಿಸಿದರು ಎನ್ನಲಾಗಿದೆ. ಭಾರತೀಯ ಸಿಬ್ಬಂದಿ ಬಂದು ಅದನ್ನು ಭಾರತೀಯ ಭೂಪ್ರದೇಶದಾದ್ಯಂತ ಓಡಿಸಬೇಕು ಎಂದು ಅವರು ಒತ್ತಾಯಿಸಿದರು ಎನ್ನಲಾಗಿದೆ. ಇದರಿಂದಾಗಿ ಪ್ರಯಾಣದಲ್ಲಿ ಮೂರು ಘಂಟೆಗಳ ವಿಳಂಭವಾಗಿದೆ.
ಭಾರತದ ಕಾಶ್ಮೀರದ ನಿರ್ಧಾರವನ್ನು ತೀಕ್ಷ್ಣವಾಗಿ ಖಂಡಿಸಿರುವ ಪಾಕ್ ನಿನ್ನೆ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ರಾಯಭಾರಿಯನ್ನು ಹೊರಹಾಕಿತು, ಅಲ್ಲದೆ ಈಗ ಭಾರತದೊಂದಿಗೆ ದ್ವೀಪಕ್ಷೀಯ ಸಂಬಂಧ ವ್ಯಾಪಾರವನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದೆ. ಭಾರತದ ಕ್ರಮವನ್ನು ಪ್ರಶ್ನಿಸಿ ವಿಶ್ವಸಂಸ್ಥೆಗೂ ಕೂಡ ಮೊರೆ ಹೋಗುವುದಾಗಿ ಹೇಳಿದೆ.