ನವದೆಹಲಿ: ಭಾರತದಲ್ಲಿ ನಡೆದ 26/11 (26/11 Mumbai Terror Attack) ದಾಳಿಯಲ್ಲಿ ಪಾಕಿಸ್ತಾನದ ಭಯೋತ್ಪಾದಕರು ಭಾಗಿಯಾಗಿದ್ದರು ಎಂದು ಪಾಕಿಸ್ತಾನದ ಫೆಡರಲ್ ತನಿಖಾ ಸಂಸ್ಥೆ (FIA) ಬುಧವಾರ (ನವೆಂಬರ್ 22) ಒಪ್ಪಿಕೊಂಡಿದೆ. ಮುಂಬೈನ ಹೋಟೆಲ್ ತಾಜ್ ಮೇಲೆ ದಾಳಿ ನಡೆಸುವ ಸಂಚು 11 ಲಷ್ಕರ್ ಭಯೋತ್ಪಾದಕರು ನಡೆಸಿದ್ದಾರೆ ಎಂದು ಪಾಕಿಸ್ತಾನ ಒಪ್ಪಿಕೊಂಡಿದೆ. 2008 ರಲ್ಲಿ ಪಾಕಿಸ್ತಾನದ ಮುಲ್ತಾನ್‌ನ ಮೊಹಮ್ಮದ್ ಅಮ್ಜದ್ ಖಾನ್ ಭಯೋತ್ಪಾದಕರುಭಾರತಕ್ಕೆ ಬಂದಿಳಿದ ದೋಣಿಯ ಖರೀದಿಯಲ್ಲಿ ಭಾಗಿಯಾಗಿದ್ದ ಎಂದಿದೆ. 2008 ರ ಉಗ್ರದಾಳಿಯ ಕುರಿತಾದ 880 ಪುಟಗಳ ಲಿಸ್ಟ್ ನಲ್ಲಿ ಅಮ್ಜದ್ ಹೆಸರನ್ನು ಗುರುತಿಸಲಾಗಿದೆ.


COMMERCIAL BREAK
SCROLL TO CONTINUE READING

ದಾಳಿ ನಡೆಸಲು ದೋಣಿ ಹಾಗೂ ಲೈಫ್ ಜಾಕೆಟ್ ಖರೀದಿಸಲಾಗಿತ್ತು
ಆ ವೇಳೆ ಅಮ್ಜದ್ ಖಾನ್ ಒಂದು ಯಮಾಹಾ ಮೋಟರ್ ಬೊಟ್ ಇಂಜಿನ್, ಎಫ್ ಆರ್ ಝೆಡ್ ವಾಟರ್ ಸಪೋರ್ಟ, ಇನ್ಫ್ಲೈಟೇಬಲ್ ಬೋಟ್ ಖರೀದಿಸಿದ್ದು, ಅವುಗಳನ್ನು 26/11 ರ ಮುಂಬೈ ದಾಳಿಗಾಗಿ ಬಳಸಲಾಗಿತ್ತು. ಬಹಾವಲ್ಪುರ್ ನ ಶಾಹೀದ್ ಗಫೂರ್ 'ಅಲ್ ಹುಸೈನ್' ದೋಣಿಯ ಕ್ಯಾಪ್ಟನ್ ಆಗಿದ್ದ ಹಾಗೂ 'ಅಲ್ ಫೌಜ್' ದೋಣಿಯ ಉಪಯೋಗವನ್ನು ಉಗ್ರರು ನಡೆಸಿದ್ದರು ಎಂದು ಈ ಪಟ್ಟಿಯಲ್ಲಿ ಹೇಳಲಾಗಿದೆ.


ಇದನ್ನು ಓದಿ- ಪಾಕಿಸ್ತಾನದಲ್ಲಿ ದಾವೂದ್ ಇರುವಿಕೆಯ ಕುರಿತು ವಿದೇಶಾಂಗ ಸಚಿವ S.Jaishankar ಹೇಳಿದ್ದೇನು?


26/11 ದಾಳಿಯಲ್ಲಿ ಶಾಮೀಲಾಗಿತ್ತು ಇವರ ಹೆಸರು
ಈ ಪಟ್ಟಿಯಲ್ಲಿ 26/11 ದಾಳಿಗೆ ಸಂಬಂಧಿಸಿದಂತೆ ಮಾಹಿತಿ ನೀಡಲಾಗಿದ್ದು, ತಾಜ್ ನಲ್ಲಿ ನಡೆದ ದಾಳಿಯಲ್ಲಿ ಶಾಮೀಲಾಗಿದ್ದ 9 ಕ್ರೂ ಮೆಂಬರ್ಸ್ ಗಳ ಕುರಿತು ಉಲ್ಲೇಖಿಸಲಾಗಿದೆ.  ಈ 9 ಉಗ್ರರಲ್ಲಿ ಸಾಹಿವಾಲ್ ಜಿಲ್ಲೆಯ ಮೊಹಮ್ಮದ್ ಉಸ್ಮಾನ್, ಲಾಹೋರ್ ಜಿಲ್ಲೆಯ ಅತೀಕ್-ಉರ್-ರೆಹಮಾನ್, ಹಫೀಜಾಬಾದ್‌ನ ರಿಯಾಜ್ ಅಹ್ಮದ್, ಗುಜ್ರಾನ್‌ವಾಲಾ ಜಿಲ್ಲೆಯ ಮುಹಮ್ಮದ್ ಮುಷ್ತಾಕ್, ಡೇರಾ ಘಾಜಿಪುರ ಜಿಲ್ಲೆಯ ಮುಹಮ್ಮದ್ ನಯೀಮ್, ಸರ್ಗೋಧಾ ಜಿಲ್ಲೆಯ ಅಬ್ದುಲ್ ಶಕೂರ್, ಮುಲ್ಮಾನ್ ಸಬೀರ್. ಮೊಹಮ್ಮದ್ ಉಸ್ಮಾನ್ ರಹೀಂ ಯಾರ್ ಖಾನ್ ಜಿಲ್ಲೆಯ ಶಕೀಲ್ ಅಹ್ಮದ್ ಅವರ ಹೆಸರುಗಳು ಶಾಮೀಲಾಗಿವೆ. ಈ ಎಲ್ಲ ಹೆಸರುಗಳನ್ನು ವಿಶ್ವಸಂಸ್ಥೆಯು ಪಟ್ಟಿ ಮಾಡಿದ ಭಯೋತ್ಪಾದಕ ಗುಂಪಿನಲ್ಲಿ ಸೇರಿಸಲಾಗಿದೆ, ಇವರೆಲ್ಲರೂ ಲಷ್ಕರ್-ಎ-ತೈಬಾ  ಸಂಘಟನೆಗೆ ಸೇರಿರುವ ಉಗ್ರರಾಗಿದ್ದಾರೆ.


ಇದನ್ನು ಓದಿ- ಭೂಗತ ಪಾತಕಿ ದಾವೂದ್ ಇಬ್ರಾಹಿಮ್ ಕರಾಚಿಯಲ್ಲಿದ್ದಾನೆ ಎಂದು ಒಪ್ಪಿಕೊಂಡ ಪಾಕ್


UN ಉಗ್ರರ ಪಟ್ಟಿಯಲ್ಲಿ ಹೈಪ್ರೊಫೈಲ್ ಹೆಸರುಗಳು ಶಾಮೀಲು
ಈ ಪಟ್ಟಿಯಲ್ಲಿ 1210 ಹೈ ಪ್ರೊಫೈಲ್ ಹಾಗೂ ದೇಶದ ಮೋಸ್ಟ ವಾಂಟೆಡ್ ಉಗ್ರರ ಕುರಿತು ಉಲ್ಲೇಖಿಸಲಾಗಿದೆ. ಆದರೆ, ಹಫೀಜ್ ಸಯೀದ್, ಮಸೂದ್ ಅಜರ್ ಹಾಗೂ ದಾವುದ್ ಇಬ್ರಾಹಿಮ್ ಕುರಿತು ಯಾವುದೇ ರೀತಿಯ ಉಲ್ಲೇಖ ಮಾಡಲಾಗಿಲ್ಲ. 26/11 ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಓರ್ವ ಘೋಷಿತ ಅಂತರರಾಷ್ಟ್ರೀಯ ಭಯೋತ್ಪಾದಕನಾಗಿದ್ದಾನೆ ಎಂಬುದು ಇಲ್ಲಿ ಉಲ್ಲೇಖನೀಯ. ಕಳೆದ ವರ್ಷ ಭಾರತದ ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಹಫೀಜ್ ಸೇರಿದಂತೆ ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಅವರನ್ನು ಅಂತರರಾಷ್ಟ್ರೀಯ ಭಯೋತ್ಪಾದಕ ಪಟ್ಟಿಯಲ್ಲಿ ಸೇರಿಸಲಾಗಿತ್ತು. ಈ ದಾಳಿಯಲ್ಲಿ 40 ಭಾರತೀಯ ಸೈನಿಕರು ಸಾವನ್ನಪ್ಪಿದ್ದಾರೆ. ಈ ವರ್ಷದ ಆರಂಭದಲ್ಲಿ ಪಾಕಿಸ್ತಾನದ ನ್ಯಾಯಾಲಯವು ಸಯೀದ್‌ಗೆ ಭಯೋತ್ಪಾದಕ ಚಟುವಟಿಕೆಗಳಿಗೆ ಹಣಕಾಸು ಒದಗಿಸಿದ್ದಕ್ಕಾಗಿ 5 ವರ್ಷ ಶಿಕ್ಷೆ ವಿಧಿಸಿತ್ತು.


ಇದನ್ನು ಓದಿ- UNSC ಯಲ್ಲಿ ಪಾಕಿಸ್ತಾನವನ್ನು ಸುತ್ತುವರೆದ ಭಾರತ, ದಾವುದ್ ನಂತಹ ಉಗ್ರರನ್ನು ಸಾಕಿ ಸಲಹುತ್ತದೆ ನೆರೆರಾಷ್ಟ್ರ


ದಾವುದ್ ಇರುವಿಕೆಯನ್ನು ಪಾಕ್ ಸ್ವೀಕರಿಸಿಲ್ಲ
ಮತ್ತೊಂದೆಡೆ, ದಾವೂದ್ ಇಬ್ರಾಹಿಂಗೆ ವಿಷಯಕ್ಕೆ ಬಂದಾಗ ಆತ ಪಾಕ್ ನಲ್ಲಿದ್ದಾನೆ ಮತ್ತು ರಹಸ್ಯವಾಗಿ ಐಷಾರಾಮಿ ಜೀವನವನ್ನು ನಡೆಸುತ್ತಿದ್ದಾನೆ ಎಂಬ ವಿಷಯವನ್ನು ಪಾಕಿಸ್ತಾನ ಎಂದಿಗೂ ಒಪ್ಪಿಕೊಂಡಿಲ್ಲ. ವಿಶೇಷವೆಂದರೆ, ದಾವೂದ್ ಕಳೆದ ಹಲವಾರು ವರ್ಷಗಳಿಂದ ಪಾಕಿಸ್ತಾನದ ಕರಾಚಿಯಲ್ಲಿ ರಹಸ್ಯವಾಗಿ ವಾಸಿಸುತ್ತಿದ್ದಾನೆ. ಯುಎನ್-ಪಟ್ಟಿಮಾಡಿದ ಭಯೋತ್ಪಾದಕರ ಪಟ್ಟಿಯಲ್ಲಿ ಆತನ ಹೆಸರನ್ನು ಸಹ ಸೇರಿಸಲಾಗಿದೆ.


ಪರ್ವೇಜ್ ಮುಷರ್ರಫ್ ಮೇಲಿನ ದಾಳಿಯಲ್ಲಿ ಈ ಮುಖಂಡರು ಶಾಮೀಲಾಗಿದ್ದರು
ಈ ಭಯೋತ್ಪಾದಕ ಪಟ್ಟಿಯಲ್ಲಿ ಪ್ರಸ್ತುತ ಲಂಡನ್‌ನಲ್ಲಿ ವಾಸಿಸುತ್ತಿರುವ ಮುತ್ತಾಹಿದಾ ಕೌಮಿ ಚಳವಳಿಯ (ಎಂಕ್ಯೂಎಂ) ನಾಯಕ ಅಲ್ತಾಫ್ ಹುಸೇನ್ ಅವರ ಹೆಸರು ಸೇರಿದೆ. ಪಾಕಿಸ್ತಾನ ವಿರೋಧ ಪಕ್ಷದ ನಾಯಕ ಪಿಎಂಎಲ್ಎನ್ ನಾಸಿರ್ ಬಟ್. ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಮತ್ತು ಮಾಜಿ ಪ್ರಧಾನಿ ಶೌಕತ್ ಅಜೀಜ್ ಅವರ ಮೇಲೆ ದಾಳಿಯಲ್ಲಿ ಈತ ಭಾಗಿಯಾಗಿದ್ದ.