ಭೂಗತ ಪಾತಕಿ ದಾವೂದ್ ಇಬ್ರಾಹಿಮ್ ಕರಾಚಿಯಲ್ಲಿದ್ದಾನೆ ಎಂದು ಒಪ್ಪಿಕೊಂಡ ಪಾಕ್

ಭಾರತದ ಮೋಸ್ಟ್ ವಾಂಟೆಡ್ ಭೂಗತ ಪಾತಕಿಯರಲ್ಲಿ ಒಬ್ಬನಾದ ದಾವೂದ್ ಇಬ್ರಾಹಿಂ ಕರಾಚಿಯಲ್ಲಿ ವಾಸಿಸುತ್ತಿದ್ದಾರೆ ಎಂದು ಪಾಕಿಸ್ತಾನ ಸರ್ಕಾರ ಶನಿವಾರ ಹೇಳಿದೆ.ಹಲವು ವರ್ಷಗಳ ನಿರಾಕರಣೆ ನಂತರ ಈಗ ಪಾಕ್ ನ ಹೇಳಿಕೆ ಬಂದಿದೆ.

Last Updated : Aug 22, 2020, 07:38 PM IST
ಭೂಗತ ಪಾತಕಿ ದಾವೂದ್ ಇಬ್ರಾಹಿಮ್ ಕರಾಚಿಯಲ್ಲಿದ್ದಾನೆ ಎಂದು ಒಪ್ಪಿಕೊಂಡ ಪಾಕ್  title=
file photo

ನವದೆಹಲಿ: ಭಾರತದ ಮೋಸ್ಟ್ ವಾಂಟೆಡ್ ಭೂಗತ ಪಾತಕಿಯರಲ್ಲಿ ಒಬ್ಬನಾದ ದಾವೂದ್ ಇಬ್ರಾಹಿಂ ಕರಾಚಿಯಲ್ಲಿ ವಾಸಿಸುತ್ತಿದ್ದಾರೆ ಎಂದು ಪಾಕಿಸ್ತಾನ ಸರ್ಕಾರ ಶನಿವಾರ ಹೇಳಿದೆ.ಹಲವು ವರ್ಷಗಳ ನಿರಾಕರಣೆ ನಂತರ ಈಗ ಪಾಕ್ ನ ಹೇಳಿಕೆ ಬಂದಿದೆ.

ಕಠಿಣ ಆರ್ಥಿಕ ನಿರ್ಬಂಧಗಳಿಂದ ಹೊರಬರಲು ತನ್ನ ಪ್ರಯತ್ನಗಳ ಭಾಗವಾಗಿ ಘೋಷಿಸಲಾದ 88 ನಿಷೇಧಿತ ಭಯೋತ್ಪಾದಕ ಗುಂಪುಗಳ ಪಟ್ಟಿ ಭಾಗವಾಗಿ ಪಾಕಿಸ್ತಾನದ ಈ ಹೇಳಿಕೆ  ಬಂದಿದೆ.

ಇದನ್ನು ಓದಿ: ಪಾಕಿಸ್ತಾನದ ಈ 2 ವಿಳಾಸಗಳಲ್ಲಿ ವಾಸವಾಗಿದ್ದಾನೆ ಪಾತಕಿ ದಾವೂದ್

ಭಯೋತ್ಪಾದಕ ಗುಂಪುಗಳು ಮತ್ತು ಅವರ ನಾಯಕರಾದ ಹಫೀಜ್ ಸಯೀದ್, ಮಸೂದ್ ಅಜರ್ ಮತ್ತು ದಾವೂದ್ ಇಬ್ರಾಹಿಂ ಅವರ ಮೇಲೆ ಅವರ ಎಲ್ಲಾ ಆಸ್ತಿಗಳನ್ನು ವಶಪಡಿಸಿಕೊಳ್ಳಲು ಮತ್ತು ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲು ಆದೇಶಿಸುವ ಮೂಲಕ ಕಠಿಣ ಆರ್ಥಿಕ ನಿರ್ಬಂಧಗಳನ್ನು ವಿಧಿಸಿದೆ ಎಂದು ಪಾಕ್ ಹೇಳಿದೆ.

ಪ್ಯಾರಿಸ್ ಮೂಲದ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (ಎಫ್‌ಎಟಿಎಫ್) 2018 ರ ಜೂನ್‌ನಲ್ಲಿ ಪಾಕಿಸ್ತಾನವನ್ನು ಬೂದು ಪಟ್ಟಿಯಲ್ಲಿ ಸೇರಿಸಿತು ಮತ್ತು 2019 ರ ಅಂತ್ಯದ ವೇಳೆಗೆ ಇಸ್ಲಾಮಾಬಾದ್‌ನ ಕಾರ್ಯಯೋಜನೆಯನ್ನು ಜಾರಿಗೆ ತರಲು ಕೇಳಿಕೊಂಡಿತು, ಆದರೆ COVID-19 ಸಾಂಕ್ರಾಮಿಕ ರೋಗದಿಂದಾಗಿ ಗಡುವನ್ನು ನಂತರ ವಿಸ್ತರಿಸಲಾಯಿತು.

ಇದನ್ನು ಓದಿ: ಪಾಕ್​ನಲ್ಲಿ ಅಡಗಿರುವ ದಾವೂದ್ ಇಬ್ರಾಹಿಂಗೆ ಬಿಗ್ ಶಾಕ್

ಭಯೋತ್ಪಾದಕ ಸಂಘಟನೆಗಳ ಪ್ರಮುಖ ವ್ಯಕ್ತಿಗಳಾದ 26/11 ಮುಂಬೈ ದಾಳಿ ಮಾಸ್ಟರ್ ಮೈಂಡ್ ಮತ್ತು ಜಮಾತ್-ಉದ್-ದವಾ (ಜುಡಿ) ಮುಖ್ಯಸ್ಥ ಸಯೀದ್, ಜೈಶ್-ಎ-ಮೊಹಮ್ಮದ್ (ಜೆಎಂ) ಮುಖ್ಯಸ್ಥ ಅಜರ್, ಮತ್ತು ಭೂಗತ ಜಗತ್ತಿನ ಡಾನ್ ದಾವೂದ್ ಇಬ್ರಾಹಿಂ ಅವರ ಮೇಲೆ ನಿರ್ಬಂಧ ವಿಧಿಸುವ ಹಿನ್ನಲೆಯಲ್ಲಿ ಅಗಸ್ಟ್ 18 ರಂದು ನೋಟಿಸ್ ಹೊರಡಿಸಿತ್ತು.

ಬಹು ಅಕ್ರಮ ವ್ಯವಹಾರದ ಮುಖ್ಯಸ್ಥರಾಗಿರುವ ದಾವೂದ್ ಇಬ್ರಾಹಿಂ 1993 ರ ಮುಂಬೈ ಬಾಂಬ್ ಸ್ಫೋಟದ ನಂತರ ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕರಾಗಿ ಹೊರಹೊಮ್ಮಿದರು.ಪಾಕಿಸ್ತಾನದ ಅಧಿಕಾರಿಗಳ ಪ್ರಕಾರ, ಅವರ ವಿಳಾಸ ಪಾಕಿಸ್ತಾನದ ಕರಾಚಿಯಲ್ಲಿರುವ "ಶ್ವೇತಭವನ, ಸೌದಿ ಮಸೀದಿಯ ಹತ್ತಿರ, ಕ್ಲಿಫ್ಟನ್".ಎನ್ನಲಾಗಿದೆ.

Trending News