ಬಿಜಿಂಗ್: 'Patient Su': ಕೊರೊನಾ ವೈರಸ್ ಹುಟ್ಟುಹಾಕಿರುವ ಆರೋಪಗಳಿಂದ ಪಾರಾಗಲು ಯತ್ನಿಸುತ್ತಿರುವ ಚೀನಾ ಮೇಲೆ ಜಾಗತಿಕ ಸಮುದಾಯದ ಒತ್ತಡ ಹೆಚ್ಚಾಗುತ್ತಲೇ ಇದೆ. ಕೊರೊನಾ ವೈರಸ್ ನಿಂದ ಸೊಂಕಿತಳಾದ ಮೊಟ್ಟಮೊದಲ ರೋಗಿ (Covid First Patient In china) ಸೂ ಗೆ ಸಂಬಂಧಿಸಿದಂತೆ ತನಿಖೆ ಚುರುಕು ಪಡೆದುಕೊಂಡಿದೆ. ಚೀನಾದ ಇದೆ ಮಹಿಳೆ ಮೊಟ್ಟಮೊದಲ ಬಾರಿಗೆ ವುಹಾನ್ ಲ್ಯಾಬ್ ನಿಂದ ಹೊರಬಂದ ಕೊರೊನಾ ವೈರಸ್ ನಿಂದ ಸೋಂಕಿತಳಾಗಿದ್ದಳು ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ನವೆಂಬರ್ ನಲ್ಲಿ ಈ ಮಹಿಳೆಯಲ್ಲಿ ಲಕ್ಷಣಗಳು ಕಂಡುಬಂದಿದ್ದವು (first person affected by covid-19 in china)
ಈ ಮಹಿಳೆ ಕೊವಿಡ್ ಸೋಂಕಿತಳಾಗಿರುವ ಕುರಿತು ಮಾಹಿತಿ ನೀಡಿರುವ ಮೂಲಗಳು, ಈ 61 ವರ್ಷದ ಮಹಿಳೆ ನವೆಂಬರ್ ನಲ್ಲಿ ನಿಗೂಢ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು ಎಂದಿವೆ. ಆಕೆ ಚೇತರಿಸಿಕೊಂಡ ಸುಮಾರು ಒಂದು ತಿಂಗಳ ಬಳಿಕ ಚೀನಾ ವಿಶ್ವ ಆರೋಗ್ಯ ಸಂಸ್ಥೆಗೆ ಕೊರೊನಾ ಪ್ರಕೋಪದ ಕುರಿತು ಮಾಹಿತಿ ನೀಡಿತ್ತು. ಈ ಎಲ್ಲಾ ಸಾಕ್ಷಾಧಾರಗಳು ಕೊವಿಡ್-19 ಅನ್ನು ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಾಜಿಯಲ್ಲಿ (Wuhan Institute Of Virology) ಅಭಿವೃದ್ಧಿಪಡಿಸಲಾಗಿತ್ತು ಎಂಬ ಸಂಕೇತಗಳನ್ನು ನೀಡುತ್ತವೆ. ಇನ್ನೊಂದೆಡೆ ಇಡೀ ವಿಶ್ವವೇ ಚೀನಾ ಮೇಲೆ ಈ ಕುರಿತು ಒತ್ತಡ ತಂತ್ರವನ್ನು ಅನುಸರಿಸುತ್ತಿದ್ದು, ಈ ಸಂಗತಿಯ ಕುರಿತು ತನ್ನ ಸ್ಥಿತಿಯನ್ನು ಸ್ಪಷ್ಟಪಡಿಸಬೇಕು ಎನ್ನುತ್ತಿದೆ.


ಇದನ್ನೂ ಓದಿ- ಮಾಜಿ ಸಿಎಂ ಸಿದ್ದರಾಮಯ್ಯ ಆರೋಗ್ಯದಲ್ಲಿ ಅಸ್ವಸ್ಥ!


ಲ್ಯಾಬ್ ನಲ್ಲಿ ಅಭಿವೃದ್ಧಿಪಡಿಸಲಾಗಿದೆ ವೈರಸ್ 
'ದಿ ಸನ್'ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ ಬ್ರಿಟಿಶ್ ಗೂಢಚಾರಿಗಳು ಚೀನಾ ವತಿಯಿಂದ ವೈರಸ್ ಅನ್ನು ಅಭಿವೃದ್ಧಿಪಡಿಸಲಾಗಿದೆ ಎಂಬ ವಾದ ಒಪ್ಪಿಕೊಳ್ಳುವಂತಿದೆ ಎಂದಿದ್ದಾರೆ. ಇನ್ನೊಂದೆಡೆ ಅಮೆರಿಕಾದ ಅಧ್ಯಕ್ಷ ಜೋ ಬಿಡೆನ್ (Joe Biden) ಕೂಡ ಈ ಸಂಗತಿಯ ಕುರಿತು ಆಳವಾದ ಅಧ್ಯಯನ ನಡೆಸಲು ಆದೇಶ ನೀಡಿದ್ದಾರೆ. ಇದಲ್ಲದೆ ಮತ್ತೊಂದು ಅಧ್ಯಯನ ಕೊರೊನಾ ವೈರಸ್ ಅನ್ನು 'Engineered' ಅಂದರೆ ತಯಾರಿಸಲಾಗಿದೆ ಮತ್ತು ಇದಕ್ಕೆ ಯಾವುದೇ ನೈಸರ್ಗಿಕ ಪೂರ್ವಜರಿಲ್ಲ ಎಂದಿದೆ. ಈ ಕುರಿತು ವರದಿ ಪ್ರಕಟಿಸಿರುವ 'ದಿ ಮೇಲ್', 'ಕೊರೊನಾ ವೈರಸ್ ಉತ್ಪತ್ತಿಯ ಈ ಎಲ್ಲ ಥಿಯರಿಗಳ ನಡುವೆ ನಿಗೂಢ ಮಹಿಳೆಯೋರ್ವಳಿದ್ದಾಳೆ ಮತ್ತು ಆಕೆಯನ್ನು 'Patient Su' ರೂಪದಲ್ಲಿ ಗುರುತಿಸಲಾಗುತ್ತದೆ' ಎಂದಿದೆ.


ಇದನ್ನೂ ಓದಿ-First Human Case Of Bird Flu H10N3: ಇನ್ಮುಂದೆ ಚೀನಾದಿಂದ 'Bird Flu' ವಿಸ್ಫೋಟ? ಮೊಟ್ಟಮೊದಲ ಬಾರಿಗೆ ಮನುಷ್ಯರಲ್ಲಿ ಪತ್ತೆಯಾದ ವೈರಸ್ ನ H10N3 ಸ್ಟ್ರೆನ್


ಚೀನಾ ಅಧಿಕಾರಿಯಿಂದ ವಿಷಯ ಬಹಿರಂಗ (patient su first affected by covid-19 in china)
ವರದಿಗಳ ಪ್ರಕಾರ ಚೀನಾದ ಓರ್ವ ಮುಖ್ಯ ಅಧಿಕಾರಿ ಮೈಮರೆತು ಈ ಮಹಿಳೆಯ ವಿಷಯವನ್ನು ಬಹಿರಂಗ ಪಡಿಸಿದ್ದಾರೆ ಎನ್ನಲಾಗಿದ್ದು, ಆಕೆಯೇ ಈ ಮಾರಕ ವೈರಸ್ ಸೋಂಕಿಗೆ ಗುರಿಯಾದ ಮೊದಲ ಮಹಿಳೆ ಎನ್ನಲಾಗುತ್ತಿದೆ. ಅಷ್ಟೇ ಅಲ್ಲ ಚೀನಾದ ಮೆಡಿಕಲ್ ಜರ್ನಲ್ ನಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ ಈ ಮಹಿಳೆ ವುಹಾನ್ (Wuhan) ಲ್ಯಾಬ್ ನಿಂದ ಸುಮಾರು 3 ಮೈಲುಗಳ ದೂರದಲ್ಲಿ ವಾಸವಾಗಿದ್ದಾಳೆ ಹಾಗೂ ಆಕೆಗೆ ನವೆಂಬರ್ 2019 ರಲ್ಲಿ ಕೊವಿಡ್-19 ಸೋಂಕು ತಗುಲಿತ್ತು. ಚಿಕಿತ್ಸೆಗಾಗಿ ಆಕೆಯನ್ನು ವುಹಾನ್ ನ ಹತ್ತಿರದಲ್ಲಿರುವ ರಿಂಗ್ಜುನ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ WIV ಹಾಗೂ ಚೈನೀಸ್ ಸೆಂಟರ್ ಫಾರ್ ಡಿಸೀಜ್ ಕಂಟ್ರೋಲ್ ನಿಂದ ನಿರ್ವಹಿಸಲಾಗುವ ಮತ್ತೋರ್ವ ಸಿಕ್ಯೋರಿಟಿ ಲ್ಯಾಬ್ ಜೊತೆಗಿನ ಮಹಿಳೆಯ ನಿಕಟತೆ, ಕೊರೊನಾ ವೈರಸ್ ಲ್ಯಾಬ್ ನಿಂದಲೇ ಸೋರಿಕೆಯಾಗಿದೆ ಎಂಬ ಸಾಧ್ಯತೆಯನ್ನು ಎತ್ತಿತೋರಿಸುತ್ತಿವೆ. ಏತನ್ಮಧ್ಯೆ ಈ ಎಲ್ಲಾ ಆರೋಪಗಳನ್ನು ಅಲ್ಲಗಳೆದಿರುವ ಚೀನಾ, ಬಿಡೆನ್ ಸರ್ಕಾರದ ಮೇಲೆ ರಾಜಕೀಯ ನಡೆಸುತ್ತಿರುವ ಆರೋಪ ಮಾಡಿದೆ.


ಇದನ್ನೂ ಓದಿ-Coronavirus ಮೂರನೇ ಅಲೆ ಸಾಧ್ಯತೆ ಹೇಗೆ ಕಡಿಮೆಯಾಗಲಿದೆ? ಮುಖ್ಯ ಆರ್ಥಿಕ ಸಲಹೆಗಾರ ಹೇಳಿದ್ದೇನು?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ