First Human Case Of Bird Flu H10N3: ಇನ್ಮುಂದೆ ಚೀನಾದಿಂದ 'Bird Flu' ವಿಸ್ಫೋಟ? ಮೊಟ್ಟಮೊದಲ ಬಾರಿಗೆ ಮನುಷ್ಯರಲ್ಲಿ ಪತ್ತೆಯಾದ ವೈರಸ್ ನ H10N3 ಸ್ಟ್ರೆನ್

First Human Case Of Bird Flu H10N3: ಚೀನಾದಲ್ಲಿ (China) ಇದೇ ಮೊದಲ ಬಾರಿಗೆ ಮಾನವನಲ್ಲಿ ಬರ್ಡ್ ಫ್ಲೂ ಪತ್ತೆಯಾಗಿದೆ. 41 ವರ್ಷದ ವ್ಯಕ್ತಿಯೋರ್ವನಲ್ಲಿ ಬರ್ಡ್ ಫ್ಲೂನ H10N3 ಸ್ಟ್ರೆನ್ ಪತ್ತೆಯಾಗಿದೆ. ಚೀನಾದ ನ್ಯಾಷನಲ್ ಹೆಲ್ತ್ ಕಮಿಷನ್ (China NHC) ಇದನ್ನು ದೃಢಪಡಿಸಿದೆ.

Written by - Nitin Tabib | Last Updated : Jun 1, 2021, 12:20 PM IST
  • ಚೀನಾದಲ್ಲಿ ಮೊದಲಬಾರಿಗೆ ಮನುಷ್ಯರಲ್ಲಿ ಪತ್ತೆಯಾದ ಹಕ್ಕಿ ಜ್ವರ ವೈರಸ್.
  • ಈ ಕುರಿತು ಮಾಹಿತಿ ನೀಡಿದ ಚೀನಾದ ನ್ಯಾಷನಲ್ ಹೆಲ್ತ್ ಕಮಿಷನ್.
  • ಆದರೆ, H10N3 ವೈರಸ್ ಅಷ್ಟೊಂದು ಮಾರಕವಾಗಿಲ್ಲ ಮತ್ತು ಹರಡುವ ಸಾಧ್ಯತೆ ತೀರಾ ವಿರಳ ಎಂದ NHC
First Human Case Of Bird Flu H10N3: ಇನ್ಮುಂದೆ ಚೀನಾದಿಂದ 'Bird Flu' ವಿಸ್ಫೋಟ? ಮೊಟ್ಟಮೊದಲ ಬಾರಿಗೆ ಮನುಷ್ಯರಲ್ಲಿ ಪತ್ತೆಯಾದ ವೈರಸ್ ನ H10N3 ಸ್ಟ್ರೆನ್ title=
First Human Case Of Bird Flu H10N3 (File Photo)

First Human Case Of Bird Flu H10N3: ಚೀನಾದಲ್ಲಿ (China) ಇದೇ ಮೊದಲ ಬಾರಿಗೆ ಮಾನವನಲ್ಲಿ ಬರ್ಡ್ ಫ್ಲೂ ಪತ್ತೆಯಾಗಿದೆ. 41 ವರ್ಷದ ವ್ಯಕ್ತಿಯೋರ್ವನಲ್ಲಿ ಬರ್ಡ್ ಫ್ಲೂನ H10N3 ಸ್ಟ್ರೆನ್ ಪತ್ತೆಯಾಗಿದೆ. ಚೀನಾದ ನ್ಯಾಷನಲ್ ಹೆಲ್ತ್ ಕಮಿಷನ್ (China NHC) ಇದನ್ನು ದೃಢಪಡಿಸಿದೆ.

ತೀವ್ರ ಜ್ವರ ಹಾಗೂ ಇತರೆ ಲಕ್ಷಣಗಳು (H10N3 Symptoms) ಕಾಣಿಸಿಕೊಂಡ ಬಳಿಕ ವ್ಯಕ್ತಿಯನ್ನು ಕಳೆದ ಏಪ್ರಿಲ್ 28 ರಂದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು NHC ಹೇಳಿದೆ. ಇದಾದ ಒಂದು ತಿಂಗಳ ಬಳಿಕ ಅಂದರೆ ಮೇ ತಿಂಗಳಿನಲ್ಲಿ  ಆ ವ್ಯಕ್ತಿಯ ಶರೀರದಲ್ಲಿ H10N3 ಸ್ಟ್ರೆನ್ (H10N3 Strain) ಪತ್ತೆಯಾಗಿದೆ. ಆದರೆ, ಆ ವ್ಯಕ್ತಿ ವೈರಸ್ ಸೋಂಕಿಗೆ ಹೇಗೆ ಗುರಿಯಾದ ಎಂಬುದರ ಕುರಿತು NHC ಮಾಹಿತಿ ನೀಡಿಲ್ಲ.

H10N3 ಸ್ಟ್ರೆನ್ ಅಷ್ಟೊಂದು ಮಾರಕವಾಗಿಲ್ಲ (Killer) ಹಾಗೂ ಅದರಿಂದ ಯಾವುದೇ ರೀತಿಯ ಅಪಾಯವಿಲ್ಲ. ಈ ವೈರಸ್ ಅಪಾಯಕಾರಿ ಮಟ್ಟದಲ್ಲಿ ಹರಡುವ ಸಾಧ್ಯತೆ ತೀರಾ ವಿರಳವಾಗಿದೆ ಎಂದು NHC (China National Health Commission) ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ- EPFO Good News: PF ಖಾತೆದಾರರಿಗೊಂದು ಸಂತಸದ ಸುದ್ದಿ, ಎರಡನೇ ಬಾರಿಗೆ ಈ ಅವಕಾಶ ಸಿಗುತ್ತಿದೆ

ಪೀಡಿತ ವ್ಯಕ್ತಿಯ ಸ್ಥಿತಿ ಸದ್ಯ ಸ್ಥಿರವಾಗಿದ್ದು, ಶೀಘ್ರದಲ್ಲಿಯೇ ಆತನನ್ನು ಡಿಸ್ಚಾರ್ಜ್ (H10N3 Treatment) ಮಾಡಲಾಗುವುದು ಎನ್ನಲಾಗಿದೆ. ಈ ವ್ಯಕ್ತಿಯ ಸಂಪರ್ಕದಲ್ಲಿ ಬಂದ ವ್ಯಕ್ತಿಗಳ ಪರೀಕ್ಷೆಯಲ್ಲಿ ಯಾವುದೇ ರೀತಿಯ ಸೋಂಕು ಪತ್ತೆಯಾಗಿಲ್ಲ.

ಇದನ್ನೂ ಓದಿ- Coronavirus ಮೂರನೇ ಅಲೆ ಸಾಧ್ಯತೆ ಹೇಗೆ ಕಡಿಮೆಯಾಗಲಿದೆ? ಮುಖ್ಯ ಆರ್ಥಿಕ ಸಲಹೆಗಾರ ಹೇಳಿದ್ದೇನು?

ಚೀನಾದಲ್ಲಿ ಎವಿಯನ್ ಇನ್ಫ್ಲುಯೆಂಜಾ (Avian Influenza Virus) ಅಂದರೆ ಬರ್ಡ್ ಫ್ಲೂನ (Bird Fulu Virus) ಹಲವು ಸ್ಟ್ರೆನ್ ಗಳಿವೆ. ಇವುಗಳಲ್ಲಿ ಕೆಲ ಸ್ಟ್ರೆನ್ ಗಳು ಮನುಷ್ಯರಿಗೂ ಕೂಡ ಸೋಂಕಿತರನ್ನಾಗಿಸಿವೆ. ಇವರಲ್ಲಿ ಹೆಚ್ಚಿನ ಸಂಖ್ಯೆಯ ಜನ ಕೋಳಿ ಫಾರ್ಮ್ (Poultry Farm) ನಲ್ಲಿ ಕೆಲಸ ಮಾಡುವವರಾಗಿದ್ದಾರೆ. ಇದುವರೆಗೆ H10N3 ಸ್ಟ್ರೆನ್ ವಿಶ್ವದ ಯಾವುದೇ ವ್ಯಕ್ತಿಯಲ್ಲಿ ಪತ್ತೆಯಾಗಿಲ್ಲ ಮತ್ತು ಈ ರೀತಿಯ ಮೊದಲ ಪ್ರಕರಣ ಇದಾಗಿದೆ ಎಂದು NHC ಹೇಳಿದೆ.

ಇದನ್ನೂ ಓದಿ- 'Corona ಎಲ್ಲಿಂದ ಬಂತು ಪತ್ತೆಹಚ್ಚಿ, ಇಲ್ಲದಿದ್ರೆ ಕೊವಿಡ್-26, ಕೊವಿಡ್-32 ಎದುರಿಸಲು ಸಿದ್ಧರಾಗಿ'

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News