American Airlines Pee-gate Case: ಅಮೆರಿಕನ್ ಏರ್‌ಲೈನ್ಸ್ ವಿಮಾನದಲ್ಲಿ ನ್ಯೂಯಾರ್ಕ್‌ನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ಭಾರತೀಯ ಪ್ರಜೆಯೊಬ್ಬರು ದೆಹಲಿ ವಿಮಾನ ನಿಲ್ದಾಣಕ್ಕೆ ವಿಮಾನ ತಲುಪುವ ಮುನ್ನ ತನ್ನ ಸಹ-ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆರೋಪದಲ್ಲಿ ಸಿಕ್ಕಿಬಿದ್ದಿದ್ದಾರೆ. ಸೋಮವಾರ (ಏಪ್ರಿಲ್ 24) ಅಧಿಕೃತ ಮೂಲಗಳು ಈ ಕುರಿತು ಮಾಹಿತಿಯನ್ನು ನೀಡಿವೆ. ಆರೋಪಿ ಪ್ರಯಾಣಿಕನು ಮದ್ಯದ ಅಮಲಿನಲ್ಲಿದ್ದನು ಮತ್ತು ವಾದದ ಸಮಯದಲ್ಲಿ ತನ್ನ ಸಹ-ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜಿಸಿದ್ದಾನೆ ಎಂದು ಏರ್ಲೈನ್ಸ್ ಸಿಬ್ಬಂದಿ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಅಮೆರಿಕನ್ ಏರ್‌ಲೈನ್ಸ್ ವಿಮಾನ ಎಎ 292ರಲ್ಲಿ ಈ ಘಟನೆ ನಡೆದಿದ್ದು, ಭಾನುವಾರ ರಾತ್ರಿ 9 ಗಂಟೆ ಸುಮಾರಿಗೆ ಇಂದಿರಾಗಾಂಧಿ ಇಂಟರ್‌ನ್ಯಾಶನಲ್ (ಐಜಿಐ) ವಿಮಾನ ನಿಲ್ದಾಣಕ್ಕೆ ಬಂದಿಳಿದ ನಂತರ ಆರೋಪಿ ಪ್ರಯಾಣಿಕನನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಬಂಧಿಸಿದೆ. ವಿಮಾನ ಇಳಿಯುವ ಮೊದಲು ದೆಹಲಿ ವಿಮಾನ ನಿಲ್ದಾಣಕ್ಕೆ ಈ ವಿಷಯವನ್ನು ವರದಿ ಮಾಡಲಾಗಿದೆ ಮತ್ತು ಈ ವಿಷಯದಲ್ಲಿ ಭಾಗಿಯಾಗಿದ್ದ ಇಬ್ಬರೂ ಪ್ರಯಾಣಿಕರನ್ನು ನಂತರ ದೆಹಲಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.


ಇದರಿಂದ ನೊಂದ ಪ್ರಯಾಣಿಕರು ದೂರು ದಾಖಲಿಸಿದ್ದಾರೆ
ನೊಂದ ಪ್ರಯಾಣಿಕರು ಔಪಚಾರಿಕ ದೂರು ನೀಡಿದ್ದಾರೆ ಎಂದು ಮೂಲಗಳು ಪಿಟಿಐಗೆ ತಿಳಿಸಿವೆ. ನಾಗರಿಕ ವಿಮಾನಯಾನ ಕಾಯ್ದೆಯಡಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಪ್ರಯಾಣಿಕರ ಅಶಿಸ್ತಿನ ವರ್ತನೆಯ ಬಗ್ಗೆ ಏರ್‌ಲೈನ್ಸ್ ಸಿಬ್ಬಂದಿ ನೀಡಿದ ದೂರಿನ ನಂತರ ಈ ಕ್ರಮವನ್ನು ಜರುಗಿಸಲಾಗಿದೆ. ಸಹ-ಪ್ರಯಾಣಿಕರ ಮೇಲೆ ಯಾರಾದರೂ ಮೂತ್ರ ವಿಸರ್ಜಿಸುವುದರ ಬಗ್ಗೆ ಯಾವುದೇ ದೃಢೀಕರಿಸುವ ಪುರಾವೆಗಳು ಅಥವಾ ದೂರನ್ನು ನೀಡಲಾಗಿಲ್ಲ.


ಇದನ್ನೂ ಓದಿ-Tarek Fatah No More: ಪಾಕ್ ಮೂಲದ ಲೇಖಕ ತಾರೀಕ್ ಫತೆಹ್ ನಿಧನ, ಟ್ವೀಟ್ ಮಾಡಿ... ಭಾರತೀಯ ಸುಪುತ್ರ.. ಎಂದ ಪುತ್ರಿ


ಇದೆ ವೇಳೆ, ವಿಮಾನದಲ್ಲಿನ ಈ ಘಟನೆಯ ಬಗ್ಗೆ ವಿಮಾನಯಾನ ಸಿಬ್ಬಂದಿ ದೆಹಲಿಯ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ ಎಂದು ಅಮೆರಿಕನ್ ಏರ್ಲೈನ್ಸ್ ಹೇಳಿದೆ. ಇತ್ತೀಚೆಗಂತೂ ಮದ್ಯ ಸೇವಿಸಿ ಪ್ರಯಾಣಿಕರು ಸಹ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡುವ ಘಟನೆಗಳು ನಿರಂತರವಾಗಿ ಬೆಳಕಿಗೆ ಬರುತ್ತಿವೆ. ಕಳೆದ ವರ್ಷ ನವೆಂಬರ್ 26 ರಂದು ಏರ್ ಇಂಡಿಯಾ ನ್ಯೂಯಾರ್ಕ್-ದೆಹಲಿ ವಿಮಾನದ ಬ್ಯುಸಿನೆಸ್ ಕ್ಲಾಸ್‌ನಲ್ಲಿ 70 ವರ್ಷದ ಮಹಿಳಾ ಸಹ-ಪ್ರಯಾಣಿಕರ ಮೇಲೆ ಅಮಲೇರಿದ ವ್ಯಕ್ತಿಯೊಬ್ಬ ಮೂತ್ರ ವಿಸರ್ಜಿಸಿದ್ದಾನೆ.


ಇದನ್ನೂ ಓದಿ-'ವ್ಲಾಡಿಮೀರ್ ಪುಟಿನ್ ಸತ್ಹೋದ್ರೆ ಖುಷಿಯಾಗುತ್ತದೆ', ಬ್ರಿಟೆನ್ ನಲ್ಲಿ ಯುಕ್ರೇನ್ ರಾಯಭಾರಿಯ ಹೇಳಿಕೆ


ಏರ್ ಇಂಡಿಯಾ ವಿಮಾನದಲ್ಲೂ ಇಂತಹದ್ದೇ ಘಟನೆ ನಡೆದಿದೆ
ಈ ವಿಷಯ ಜನವರಿಯಲ್ಲಿ ಬೆಳಕಿಗೆ ಬಂದಿತ್ತು ಮತ್ತು ಕೆಲವು ದಿನಗಳ ನಂತರ ದೆಹಲಿ ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದರು. ಆರೋಪಿ ಪ್ರಯಾಣಿಕನಿಗೆ ಏರ್ ಇಂಡಿಯಾ 30 ದಿನಗಳ ಪ್ರಯಾಣ ನಿಷೇಧ ಹೇರಿತ್ತು. ಡಿಸೆಂಬರ್ 6, 2022 ರಂದು ಏರ್ ಇಂಡಿಯಾ ಪ್ಯಾರಿಸ್-ನವದೆಹಲಿ ವಿಮಾನದಲ್ಲಿ ಇಂತಹ ಎರಡನೇ ಘಟನೆ ವರದಿಯಾಗಿದೆ, ಪ್ರಯಾಣಿಕರೊಬ್ಬರು ಖಾಲಿ ಸೀಟಿನ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ  ಮತ್ತು ಶೌಚಾಲಯಕ್ಕೆ ಹೋದಾಗ ಸಹ ಮಹಿಳಾ ಪ್ರಯಾಣಿಕರ ಹೊದಿಕೆಯ  ಮೇಲೆ ಮೂತ್ರ ವಿಸರ್ಜನೆ ಮಾಡಿದ್ದರು.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.