ಕರಾಚಿ : ದಕ್ಷಿಣ ಸಿಂಧ್ ಪ್ರಾಂತ್ಯವನ್ನು ಪಾಕಿಸ್ತಾನದಲ್ಲಿ ಪ್ರತ್ಯೇಕ ಸಿಂಧುದೇಶನ್ನಾಗಿ ಮಾಡುವ ಬೇಡಿಕೆ ಹೆಚ್ಚಾಗಿದೆ. ಆಧುನಿಕ ಭಾರತೀಯ ಸಿಂಧಿ ರಾಷ್ಟ್ರೀಯತೆಯ ಸ್ಥಾಪಕರಲ್ಲಿ ಒಬ್ಬರಾದ ಜಿಎಂ ಸೈಯದ್ ಅವರ 117 ನೇ ಜನ್ಮ ದಿನಾಚರಣೆಯಂದು ಅವರ ಬೆಂಬಲಿಗರು ಭಾನುವಾರ (ಜನವರಿ 17, 2021) ಸ್ವಾತಂತ್ರ್ಯ ಪರ ರ್ಯಾಲಿಯನ್ನು ನಡೆಸಿದರು. ಈ ಸಮಯದಲ್ಲಿ ಪ್ರತಿಭಟನಾಕಾರರ ಕೈಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರಲ್ಲದೆ, ಅನೇಕ ದೇಶಗಳ ನಾಯಕರ ಪೋಸ್ಟರ್‌ಗಳು ಕಂಡು ಬಂದವು.


COMMERCIAL BREAK
SCROLL TO CONTINUE READING

ಪ್ರತಿಭಟನಾಕಾರರ ಕೈಯಲ್ಲಿ ಪಿಎಂ ಮೋದಿಯ ಫೋಟೋ ಏಕೆ?
ಪಾಕಿಸ್ತಾನದಲ್ಲಿ (Pakistan) ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಪ್ರತಿಭಟನಾಕಾರರು ನರೇಂದ್ರ ಮೋದಿ (Narendra Modi) ಮತ್ತು ಇತರ ವಿಶ್ವ ನಾಯಕರ ಚಿತ್ರಗಳನ್ನು  ಕೈಯಲ್ಲಿ ಹಿಡಿದು  ಸಿಂಧು ದೇಶ ಸೃಷ್ಟಿಗೆ ಸಹಾಯ ಕೋರಿ ಮಧ್ಯಪ್ರವೇಶಿಸುವಂತೆ ಒತ್ತಾಯಿಸಿದರು. ಈ ಸಮಯದಲ್ಲಿ ಪ್ರತಿಭಟನಾಕಾರರು ಸ್ವಾತಂತ್ರ್ಯವನ್ನು ಬೆಂಬಲಿಸಿ ಘೋಷಣೆಗಳನ್ನು ಕೂಡ ಕೂಗಿದರು.


ಇದನ್ನೂ ಓದಿ - ಗಿಲ್ಗಿಟ್-ಬಾಲ್ಟಿಸ್ತಾನದಲ್ಲಿ ನೂತನ ರಸ್ತೆ ನಿರ್ಮಿಸಿದ China


ಪ್ರತಿಭಟನೆ ವೇಳೆ ಈ ನಾಯಕರ ಫೋಟೋ ಕೂಡ ನೋಡಲಾಯಿತು :
ಪಿಎಂ ನರೇಂದ್ರ ಮೋದಿಯವರಲ್ಲದೆ ಇತರ ವಿಶ್ವ ನಾಯಕರ ಚಿತ್ರಗಳೂ ಪ್ರತಿಭಟನಾ ರ್ಯಾಲಿಯಲ್ಲಿ ಕಂಡುಬಂದವು. ಪ್ರತಿಭಟನಾಕಾರರಲ್ಲಿ ಹೊಸದಾಗಿ ಆಯ್ಕೆಯಾದ ಅಮೆರಿಕ ಅಧ್ಯಕ್ಷ ಜೋ ಬಿಡನ್ (Joe Biden), ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ, ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್, ಸೌದಿ ಅರೇಬಿಯಾದ ರಾಜ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಜರ್ಮನ್ ಚಾನ್ಸೆಲರ್ ಏಂಜೆಲಾ ಮರ್ಕೆಲ್, ಯುಎನ್ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಮತ್ತು ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಪೋಸ್ಟರ್‌ಗಳನ್ನು ಕೂಡ ಪ್ರದರ್ಶಿಸಲಾಯಿತು.


ಇದನ್ನೂ ಓದಿ -  ಜಮ್ಮು - ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿಗೆ Social Media ಬಳಕೆ


ಸಿಂಧ್ ಪಾಕಿಸ್ತಾನದಿಂದ ಸ್ವಾತಂತ್ರ್ಯವನ್ನು ಬಯಸುತ್ತಾರೆ
'ಸಿಂಧ್‌ಗೆ ಪಾಕಿಸ್ತಾನದಿಂದ ಸ್ವಾತಂತ್ರ್ಯ ಬೇಕು' (Sindh wants independence from Pakistan) ಎಂದು ಪೋಸ್ಟರ್‌ಗಳಲ್ಲಿ ಬರೆಯಲಾಗಿದೆ. ಇದಲ್ಲದೆ ಸಿಂಧುದೇಶ ಸ್ವಾತಂತ್ರ್ಯ ಚಳವಳಿಯ ಪೋಸ್ಟರ್‌ಗಳನ್ನು ಸಹ ಪ್ರದರ್ಶನದಲ್ಲಿ ಕಾಣಬಹುದು. ಈ ಆಂದೋಲನವನ್ನು ಬಾಂಗ್ಲಾದೇಶದ ಸ್ವಾತಂತ್ರ್ಯದ ನಂತರ ಸಿಂಧ್ ನಾಯಕ ಜಿ.ಎಂ. ಸೈಯದ್ ಪ್ರಾರಂಭಿಸಿದರು.<


https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.