ಜಮ್ಮು - ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿಗೆ Social Media ಬಳಕೆ

ಪಾಕಿಸ್ತಾನದಲ್ಲಿ ಕುಳಿತಿರುವ ಭಯೋತ್ಪಾದಕರು ಫೋನ್ ಅಥವಾ ಉಪಗ್ರಹ ಬಳಕೆ ಸುರಕ್ಷಿತವಲ್ಲ ಎಂಬ ಭಯದಲ್ಲಿದ್ದಾರೆ. ಆದ್ದರಿಂದ ಸಾಮಾಜಿಕ ಮಾಧ್ಯಮಗಳಲ್ಲಿ ವಿವಿಧ ಹೆಸರಿನಲ್ಲಿ ಖಾತೆಗಳನ್ನು ರಚಿಸಲಾಗಿದೆ. ಭದ್ರತಾ ಏಜೆನ್ಸಿಗಳು ಈ ಖಾತೆಗಳ ಮೇಲೆ ಸಂಪೂರ್ಣ ಕಣ್ಣಿಟ್ಟಿವೆ.

Written by - Yashaswini V | Last Updated : Jan 13, 2021, 03:42 PM IST
  • ಟೆಲಿಗ್ರಾಮ್, ಫೇಸ್‌ಬುಕ್ ಮತ್ತು ಟ್ವಿಟರ್‌ ಗಳಲ್ಲಿ ಸಕ್ರೀಯವಾಗಿರುವ 100 ನಕಲಿ ಖಾತೆಗಳ ಪತ್ತೆ
  • ನಕಲಿ ಖಾತೆಗಳ ಮೂಲಕ ಭದ್ರತಾ ಸಂಸ್ಥೆಗಳ ಶಿಬಿರ ಮತ್ತು ಪೊಲೀಸ್ ಠಾಣೆ ಮೇಲೆ ಗ್ರೆನೇಡ್ ದಾಳಿ ಮಾಡಲು ಸೂಚನೆ
  • ಪಾಕಿಸ್ತಾನದಿಂದ ಖಾತೆಗಳನ್ನು ನಿರ್ವಹಿಸಲಾಗುತ್ತಿದೆ ಎಂದು ಪತ್ತೆ ಹಚ್ಚಿರುವ ಗುಪ್ತಚರ ಸಂಸ್ಥೆಗಳು
ಜಮ್ಮು - ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿಗೆ Social Media ಬಳಕೆ title=
Jammu and Kashmir

ಶ್ರೀನಗರ : ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿಗೆ ಸಾಮಾಜಿಕ ಮಾಧ್ಯಮವನ್ನು (Social Media) ಬಳಸಿಕೊಳ್ಳಲಾಗುತ್ತಿದೆ. ಭಯೋತ್ಪಾದಕರು ವಿವಿಧ ಹೆಸರುಗಳ ನಕಲಿ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಸೃಷ್ಟಿಸಿ ಅವುಗಳ ಮೂಲಕ ಭಯೋತ್ಪಾದನಾ ಕೃತ್ಯದ ಸಂಚು ರೂಪಿಸುತ್ತಿದ್ದಾರೆ ಎನ್ನಲಾಗಿದೆ.

ಟೆಲಿಗ್ರಾಮ್ (Telegram), ಫೇಸ್‌ಬುಕ್ (Facebook) ಮತ್ತು ಟ್ವಿಟರ್‌ (Twitter)ನಲ್ಲಿ ಸಕ್ರಿಯವಾಗಿರುವ ಇಂತಹ ಸುಮಾರು 100 ಖಾತೆಗಳನ್ನು (ನಕಲಿ ಸಾಮಾಜಿಕ ಮಾಧ್ಯಮ ಖಾತೆಗಳು) ಗುಪ್ತಚರ ಸಂಸ್ಥೆಗಳು ಗುರುತಿಸಿವೆ ಎಂದು ಹೇಳಲಾಗುತ್ತಿದೆ.

ಸೋಶಿಯಲ್ ಮೀಡಿಯಾದಲ್ಲಿ ಅಂತಹ ಖಾತೆಗಳ ಮೂಲಕ, ಭದ್ರತಾ ಸಂಸ್ಥೆಗಳ ಶಿಬಿರ ಮತ್ತು ಪೊಲೀಸ್ ಠಾಣೆಗಳ ಮೇಲೆ ಗ್ರೆನೇಡ್ ದಾಳಿ ಮಾಡಲು ಸೂಚನೆ ನೀಡಲಾಗಿದೆ ಎಂಬುದನ್ನು ಗುಪ್ತಚರ ಇಲಾಖೆ ಕಂಡುಹಿಡಿದಿದೆ.

ಇದನ್ನೂ ಓದಿ -  ಜಮ್ಮು-ಕಾಶ್ಮೀರ: ಕಾಲ್ನಡಿಗೆಯಲ್ಲಿ 4 ಕಿ.ಮೀ. ನಡೆದು ಗ್ರಾಮ ತಲುಪಿದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ

ಗುಪ್ತಚರ ಸಂಸ್ಥೆಗಳು (Intelligence Agencies) ಪತ್ತೆಹಚ್ಚಲಾಗಿರುವ ಖಾತೆಗಳನ್ನು ಪಾಕಿಸ್ತಾನದಿಂದ ನಿರ್ವಹಿಸಲಾಗುತ್ತಿದೆ. ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ (ISI) ಭಯೋತ್ಪಾದಕರನ್ನು ಗುರಿಯಾಗಿಸಲು ಇಂತಹ ಖಾತೆಗಳನ್ನು ಆಶ್ರಯಿಸುತ್ತಿದೆ ಎಂದು ಶಂಕಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನ (Pakistan)ದಿಂದ ಹವಾಲಾ ನಿಧಿಯನ್ನು ಗಣನೀಯವಾಗಿ ಕಡಿಮೆಗೊಳಿಸಿದ ರೀತಿ ಮತ್ತು ಗಡಿಯುದ್ದಕ್ಕೂ ಒಳನುಸುಳುವಿಕೆಯನ್ನು ತಡೆಗಟ್ಟಬೇಕಿದೆ. ಅದೇ ರೀತಿ ಸಾಮಾಜಿಕ ಮಾಧ್ಯಮವನ್ನು ಬಳಸಿಕೊಂಡು ಭಯೋತ್ಪಾದನೆ ಮಾಡುವುದನ್ನೂ ನಿಗ್ರಹಿಸಬೇಕಾಗಿದೆ.

ಇದನ್ನೂ ಓದಿ - 1 ವರ್ಷದವರೆಗೆ ನೀರು-ಕರೆಂಟ್ ಬಿಲ್ ಪಾವತಿಸುವ ಅವಶ್ಯಕತೆ ಇಲ್ಲ, ಈ ರಾಜ್ಯಕ್ಕೆ Modi Govt ವಿಶೇಷ ಕೊಡುಗೆ

ಪಾಕಿಸ್ತಾನದಲ್ಲಿ ಕುಳಿತಿರುವ ಭಯೋತ್ಪಾದಕರು ಫೋನ್ ಅಥವಾ ಉಪಗ್ರಹ ಬಳಕೆ ಸುರಕ್ಷಿತವಲ್ಲ ಎಂಬ ಭಯದಲ್ಲಿದ್ದಾರೆ. ಆದ್ದರಿಂದ ಸಾಮಾಜಿಕ ಮಾಧ್ಯಮಗಳಲ್ಲಿ ವಿವಿಧ ಹೆಸರಿನಲ್ಲಿ ಖಾತೆಗಳನ್ನು ರಚಿಸಲಾಗಿದೆ. ಭದ್ರತಾ ಏಜೆನ್ಸಿಗಳು ಈ ಖಾತೆಗಳ ಮೇಲೆ ಸಂಪೂರ್ಣ ಕಣ್ಣಿಟ್ಟಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News