PM Modi In US: ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸದಲ್ಲಿದ್ದಾರೆ. ಈ ಸಂದರ್ಭದಲ್ಲಿ ಅವರು ಯುಎಸ್ ಕಾಂಗ್ರೆಸ್‌ನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಆದರೆ, ಇಬ್ಬರು ಸಂಸದರು ಪ್ರಧಾನಿ ಮೋದಿ ಭಾಷಣವನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಇವರಲ್ಲಿ ರಶೀದಾ ತ್ಲೈಬ್ ಮತ್ತು ಇಲ್ಹಾನ್ ಒಮರ್ ಶಾಮೀಲಾಗಿದ್ದಾರೆ. ಪ್ರಧಾನಿಯವರು ಅಲ್ಪಸಂಖ್ಯಾತರ ದಮನ ಮಾಡಿದ್ದಾರೆ ಎಂದು ಇಬ್ಬರೂ ಸಂಸದರು ಆರೋಪಿಸಿದ್ದಾರೆ. ಅವರ ಆರೋಪಕ್ಕೆ ಭಾರತದ ಮುಸ್ಲಿಂ ನಾಯಕ ಪ್ರತಿಕ್ರಿಯಿಸಿದ್ದಾರೆ.


COMMERCIAL BREAK
SCROLL TO CONTINUE READING

ಅಮೆರಿಕದ ಸಂಸದರಿಗೆ ಪ್ರತಿಕ್ರಿಯಿಸಿದ ಅಲ್ಪಸಂಖ್ಯಾತರ ಆಯೋಗದ ಉಪಾಧ್ಯಕ್ಷ ಅತೀಫ್ ರಶೀದ್ ಅವರು ವಿಷ ಉಗುಳುವುದನ್ನು ನಿಲ್ಲಿಸಬೇಕು. ನಾನು ಭಾರತದ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯದಿಂದ ಬಂದವನು, ಆದರೆ ನನ್ನ ಧಾರ್ಮಿಕ ಸ್ವಾತಂತ್ರ್ಯ ಮತ್ತು ಧಾರ್ಮಿಕ ಗುರುತಿನೊಂದಿಗೆ ನಾನು ಪ್ರಧಾನಿ ನರೇಂದ್ರ ಮೋದಿಯವರ ಭಾರತದಲ್ಲಿ ಮುಕ್ತವಾಗಿ ವಾಸಿಸುತ್ತಿದ್ದೇನೆ, ಇಲ್ಲಿನ ಪ್ರತಿಯೊಂದು ಸಂಪನ್ಮೂಲಗಳಲ್ಲಿ ನನಗೆ ಸಮಾನ ಪಾಲು ಇದೆ ಎಂದು ರಶೀದ್ ಬರೆದಿದ್ದಾರೆ.


ಇದನ್ನೂ ಓದಿ-United Nations ನಲ್ಲಿ ಭಾರತ-ಅಮೆರಿಕಾದ ಶತ್ರು ಮತ್ತು ಲಷ್ಕರ್ ಉಗ್ರನನ್ನು ರಕ್ಷಿಸಲು ವೀಟೋ ಬಳಸಿದ ಚೀನಾ


ನಾನು ಭಾರತದಲ್ಲಿ ಏನು ಮಾತನಾಡಲು ಬಯಸುತ್ತೇನೋ ಅದನ್ನು ನಾನು ಮಾತನಾಡುತ್ತೇನೆ ಎಂದು ಅವರು ಹೇಳಿದ್ದಾರೆ. ಇಲ್ಲಿ ವಾಕ್ ಸ್ವಾತಂತ್ರ್ಯವಿದೆ. ಭಾರತದಲ್ಲಿ ನನಗೆ ಬೇಕಾದುದನ್ನು ಬರೆಯುವ ಸ್ವಾತಂತ್ರ್ಯವಿದೆ. ನಿಮ್ಮ ದ್ವೇಷದ ಅಜೆಂಡಾದ ಅಡಿಯಲ್ಲಿ ನೀವು ನನ್ನ ಭಾರತದ ಬಗ್ಗೆ ತಪ್ಪು ಚಿತ್ರವನ್ನು ತೋರಿಸುತ್ತಿದ್ದೀರಿ ಎಂದು ಹೇಳಲು ನನಗೆ ವಿಷಾದವೆನಿಸುತ್ತದೆ. ನಿಮ್ಮ ಬಾಯಿಯಿಂದ ವಿಷಕಾರುವುದನ್ನು ನಿಲ್ಲಿಸಿ ಎಂದು ಅವರು ಹೇಳಿದ್ದಾರೆ.


Pakistan: ಹಣಕ್ಕಾಗಿ ತಟ್ಟೆ ಹಿಡಿದು ತಿರುಗಾಡುತ್ತಿರುವ ಪಾಕಿಸ್ತಾನ ಇದೀಗ ಕರಾಚಿ ಬಂದರನ್ನು ಮಾರಾಟ ಮಾಡಲಿದೆಯಂತೆ!


ಇಲ್ಹಾನ್ ಒಮರ್ ಹೇಳಿದ್ದೇನು?
ಪ್ರಧಾನಿ ಮೋದಿ ಸರ್ಕಾರವು ಧಾರ್ಮಿಕ ಅಲ್ಪಸಂಖ್ಯಾತರನ್ನು ದಮನ ಮಾಡಿದೆ, ಹಿಂಸಾತ್ಮಕ ಹಿಂದೂ ರಾಷ್ಟ್ರೀಯತೆಯೊಂದಿಗೆ ಗುಂಪುಗಳೊಂದಿಗೆ ಗುರುತಿಸಿಕೊಂಡಿದೆ ಮತ್ತು ಪತ್ರಕರ್ತರು / ಮಾನವ ಹಕ್ಕುಗಳ ಪ್ರತಿಪಾದಕರನ್ನು ಗುರಿಯಾಗಿಸಿಕೊಂಡಿದೆ ಎಂದು ಯುಎಸ್ ಕಾಂಗ್ರೆಸ್ ಸದಸ್ಯ ಇಲ್ಹಾನ್ ಒಮರ್ ಟ್ವೀಟ್ ಮಾಡಿದ್ದಾರೆ. ನಾನು ಪ್ರಧಾನಿ ಮೋದಿ ಭಾಷಣದಲ್ಲಿ ಭಾಗವಹಿಸುವುದಿಲ್ಲ ಎಂದು ಅವರು ತಮ್ಮ ಟ್ವೀಟ್ ನಲ್ಲಿ ಹೇಳಿದ್ದರು. 


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ