Pakistan: ಹಣಕ್ಕಾಗಿ ತಟ್ಟೆ ಹಿಡಿದು ತಿರುಗಾಡುತ್ತಿರುವ ಪಾಕಿಸ್ತಾನ ಇದೀಗ ಕರಾಚಿ ಬಂದರನ್ನು ಮಾರಾಟ ಮಾಡಲಿದೆಯಂತೆ!

Pakistan Crisis: ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ (ಐಎಂಎಫ್) 6.5 ಶತಕೋಟಿ ಡಾಲರ್ ಸಾಲದ ಸಂಪೂರ್ಣ ಮೊತ್ತ ಸಿಗದ ಕಾರಣ ಪಾಕಿಸ್ತಾನಕ್ಕೆ ಹೆಚ್ಚುವರಿ ನಿಧಿಯ ಅವಶ್ಯಕತೆ ಇದೆ. 2019 ರಲ್ಲಿ ಪಾಕಿಸ್ತಾನಕ್ಕೆ 6.5 ಶತಕೋಟಿ ಡಾಲರ್ ಸಾಲದ ನೆರವು ನೀಡಲು ಅಂತಾರಾಷ್ಟ್ರೀಯ ಹಣಕಾಸು ನಿಧಿಯು  ಒಪ್ಪಿಕೊಂಡಿತ್ತು. ಆದರೆ, ಈ ಪೈಕಿ ಪಾಕಿಸ್ತಾನಕ್ಕೆ ಇನ್ನೂ 2.5 ಬಿಲಿಯನ್ ಡಾಲರ್ ಹಣ ಸಿಗಬೇಕಿದೆ.  

Written by - Nitin Tabib | Last Updated : Jun 20, 2023, 06:04 PM IST
  • ಈ ಕ್ಯಾಬಿನೆಟ್ ಸಭೆಯಲ್ಲಿ, ಕರಾಚಿ ಪೋರ್ಟ್ ಟ್ರಸ್ಟ್ (ಕೆಪಿಟಿ) ಮತ್ತು ಯುಎಇ ಸರ್ಕಾರದ ನಡುವೆ
  • ವಾಣಿಜ್ಯ ಒಪ್ಪಂದಕ್ಕೆ ಮಾತುಕತೆ ನಡೆಸಲು ಸಮಿತಿಯನ್ನು ರಚಿಸಲು ನಿರ್ಧರಿಸಲಾಗಿದೆ.
  • ಮಾಹಿತಿಯ ಪ್ರಕಾರ, ಈ ಸಮಿತಿಯು ಕರಾಚಿ ಬಂದರು ಟರ್ಮಿನಲ್ ಅನ್ನು ಯುಎಇಗೆ ಹಸ್ತಾಂತರಿಸುವ ಒಪ್ಪಂದದ ರೂಪುರೇಷೆ ಸಿದ್ಧಪಡಿಸಿದೆ ಎನ್ನಲಾಗಿದೆ.
Pakistan: ಹಣಕ್ಕಾಗಿ ತಟ್ಟೆ ಹಿಡಿದು ತಿರುಗಾಡುತ್ತಿರುವ ಪಾಕಿಸ್ತಾನ ಇದೀಗ ಕರಾಚಿ ಬಂದರನ್ನು ಮಾರಾಟ ಮಾಡಲಿದೆಯಂತೆ! title=

Pakistan Crisis: ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಪಾಕಿಸ್ತಾನ ಕರಾಚಿ ಬಂದರನ್ನು ಯುಎಇಗೆ ಮಾರಾಟ ಮಾಡಲು ಸಿದ್ಧತೆ ನಡೆಸಿದೆ ಎನ್ನಲಾಗಿದೆ. ಪಾಕಿಸ್ತಾನಿ ಮಾಧ್ಯಮ ವರದಿಗಳ ಪ್ರಕಾರ, ತುರ್ತು ನಿಧಿಗಾಗಿ ಹಣವನ್ನು ಸಂಗ್ರಹಿಸಲು ಕರಾಚಿ ಬಂದರು ಟರ್ಮಿನಲ್‌ಗೆ ಸಂಬಂಧಿಸಿದಂತೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನೊಂದಿಗೆ ಒಪ್ಪಂದವನ್ನು ಅಂತಿಮಗೊಳಿಸಲು ಶಹಬಾಜ್ ಷರೀಫ್ ಅವರ ಸರ್ಕಾರ ಸಮಾಲೋಚನಾ ಸಮಿತಿಯನ್ನು ರಚಿಸಿದೆ ಎನ್ನಲಾಗಿದೆ.

'ಎಕ್ಸ್‌ಪ್ರೆಸ್ ಟ್ರಿಬ್ಯೂನ್' ವರದಿಯ ಪ್ರಕಾರ, ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಸಾಲದ ಹಣವನ್ನು ನಿಲ್ಲಿಸಿರುವುದರಿಂದ ಪಾಕಿಸ್ತಾನವು ಅಸಮಾಧಾನಗೊಂಡಿದೆ ಮತ್ತು ಸಂಕಷ್ಟದಿಂದ ಹೊರಬರಲು ಬಂದರಿನ ಕುರಿತು ರಾಜಿ ಮಾಡಿಕೊಳ್ಳಲು ಸಿದ್ಧವಾಗಿದೆ. ಪಾಕಿಸ್ತಾನದ ಹಣಕಾಸು ಸಚಿವ ಇಶಾಕ್ ದಾರ್ ಅವರು ಸೋಮವಾರ ಅಂತರ-ಸರ್ಕಾರಿ ವಾಣಿಜ್ಯ ವಹಿವಾಟುಗಳ ಕ್ಯಾಬಿನೆಟ್ ಸಮಿತಿಯ ಸಭೆಯನ್ನು ಕರೆದಿದ್ದಾರೆ.

ಈ ಕ್ಯಾಬಿನೆಟ್ ಸಭೆಯಲ್ಲಿ, ಕರಾಚಿ ಪೋರ್ಟ್ ಟ್ರಸ್ಟ್ (ಕೆಪಿಟಿ) ಮತ್ತು ಯುಎಇ ಸರ್ಕಾರದ ನಡುವೆ ವಾಣಿಜ್ಯ ಒಪ್ಪಂದಕ್ಕೆ ಮಾತುಕತೆ ನಡೆಸಲು ಸಮಿತಿಯನ್ನು ರಚಿಸಲು ನಿರ್ಧರಿಸಲಾಗಿದೆ. ಮಾಹಿತಿಯ ಪ್ರಕಾರ, ಈ ಸಮಿತಿಯು ಕರಾಚಿ ಬಂದರು ಟರ್ಮಿನಲ್ ಅನ್ನು ಯುಎಇಗೆ ಹಸ್ತಾಂತರಿಸುವ ಒಪ್ಪಂದದ ರೂಪುರೇಷೆ ಸಿದ್ಧಪಡಿಸಿದೆ ಎನ್ನಲಾಗಿದೆ.

ಕಡಲ ವ್ಯವಹಾರಗಳ ಸಚಿವ ಫೈಸಲ್ ಸಬ್ಜ್ವಾರಿ ಈ ಸಮಿತಿಯ ಮುಖ್ಯಸ್ಥರಾಗಿರಲಿದ್ದಾರೆ. ಯುಎಇ ಸರ್ಕಾರವು ಕಳೆದ ವರ್ಷ ಕರಾಚಿ ಪೋರ್ಟ್ ಟರ್ಮಿನಲ್‌ಗಳನ್ನು ಸ್ವಾಧೀನಪಡಿಸಿಕೊಳ್ಳಲು ಆಸಕ್ತಿಯನ್ನು ತೋರಿಸಿತ್ತು ಎಂಬುದು ಇಲ್ಲಿ ಉಲ್ಲೇಖನೀಯ, ಅದು 'ಪಾಕಿಸ್ತಾನ್ ಇಂಟರ್ನ್ಯಾಷನಲ್ ಕಂಟೈನರ್ ಟರ್ಮಿನಲ್' (PICT) ನಿಯಂತ್ರಣದಲ್ಲಿದೆ.

ಪಾಕಿಸ್ತಾನಕ್ಕೆ ತುರ್ತು ನಿಧಿ ಸಂಗ್ರಹಿಸಲು ಕಳೆದ ವರ್ಷ ಜಾರಿಗೆ ತಂದ ಕಾನೂನಿನ ಅಡಿಯಲ್ಲಿ ಈ ಒಪ್ಪಂದವು ಮೊದಲ ಅಂತರ-ಸರ್ಕಾರಿ ವಹಿವಾಟಾಗಿರಲಿದೆ. ಕಳೆದ ವರ್ಷ ಪಾಕಿಸ್ತಾನ ಸರ್ಕಾರವು ಅಂತರ-ಸರ್ಕಾರಿ ವಾಣಿಜ್ಯ ವಹಿವಾಟು ಕಾಯಿದೆಯನ್ನು ಜಾರಿಗೆ ತಂದಿತು, ಹಣವನ್ನು ಸಂಗ್ರಹಿಸಲು ತ್ವರಿತ-ಟ್ರ್ಯಾಕ್ ಆಧಾರದ ಮೇಲೆ ರಾಜ್ಯದ ಆಸ್ತಿಗಳನ್ನು ಮಾರಾಟ ಮಾಡುವ ಗುರಿಯನ್ನು ಹೊಂದಿದೆ.

ಇದನ್ನೂ ಓದಿ-PM Modi Visit To US: ಅಮೆರಿಕಾದಲ್ಲಿ ಹೊಸ ಇತಿಹಾಸ ಬರೆಯಲಿರುವ ಪ್ರಧಾನಿ ಮೋದಿ, ಭೇಟಿಯ ಮಹತ್ವವೇನು?

ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ (ಐಎಂಎಫ್) 6.5 ಶತಕೋಟಿ ಡಾಲರ್ ಸಾಲದ ಸಂಪೂರ್ಣ ಮೊತ್ತ ಸಿಗದ ಕಾರಣ ಪಾಕಿಸ್ತಾನಕ್ಕೆ ಹೆಚ್ಚುವರಿ ನಿಧಿಯ ಅವಶ್ಯಕತೆ ಇದೆ. 2019 ರಲ್ಲಿ ಪಾಕಿಸ್ತಾನಕ್ಕೆ 6.5 ಶತಕೋಟಿ ಡಾಲರ್ ಸಾಲದ ನೆರವು ನೀಡಲು ಅಂತಾರಾಷ್ಟ್ರೀಯ ಹಣಕಾಸು ನಿಧಿಯು  ಒಪ್ಪಿಕೊಂಡಿತ್ತು. ಆದರೆ, ಈ ಪೈಕಿ ಪಾಕಿಸ್ತಾನಕ್ಕೆ ಇನ್ನೂ 2.5 ಬಿಲಿಯನ್ ಡಾಲರ್ ಹಣ ಸಿಗಬೇಕಿದೆ.

ಇದನ್ನೂ ಓದಿ-Ukraine-Russia War: ರಷ್ಯಾ-ಯುಕ್ರೈನ್ ಗಡಿಗೆ ಪರಮಾಣು ಬಾಂಬ್ ರವಾನಿಸಲು ಆದೇಶ ನೀಡಿದ ಪುಟಿನ್, ಹಾಗಾದ್ರೆ ಯುಕ್ರೈನ್ ಸಂಗತಿ ಫಿನಿಷ್?

ಉಳಿದ ಮೊತ್ತಕ್ಕೆ ಐಎಂಎಫ್ ಕೆಲವು ಷರತ್ತುಗಳನ್ನು ವಿಧಿಸಿದೆ. ಆದಾಗ್ಯೂ, ಈ ಮೊತ್ತವನ್ನು ಪಡೆಯಲು, ಪಾಕಿಸ್ತಾನವು ಷರತ್ತುಗಳನ್ನು ಪೂರೈಸಿದೆ ಎಂದು ನಿರಂತರವಾಗಿ ಹೇಳಿಕೊಳ್ಳುತ್ತಿದೆ. ಈ ತಿಂಗಳ ಅಂತ್ಯದ ವೇಳೆಗೆ ಪಾಕಿಸ್ತಾನಕ್ಕೆ ಐಎಂಎಫ್‌ ನೀಡಬೇಕಿರುವ ಮೊತ್ತದ ಗಡುವು ಮುಕ್ತಾಯವಾಗಲಿದೆ. ಇದೇ ಕಾರಣ ಪಾಕಿಸ್ತಾನ ಆದಷ್ಟು ಬೇಗ ಹಣದ ವ್ಯವಸ್ಥೆ ಮಾಡಲು ಹಾತೊರೆಯುತ್ತಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News