ವಾಷಿಂಗ್ಟನ್‌ ಡಿಸಿ: ಪ್ರಯೋಗಾಲಯದಲ್ಲಿ ತಯಾರಿಸಿದ 7.5 ಕ್ಯಾರೆಟ್‌ನ ಹಸಿರು ವಜ್ರದಿಂದ ಹಿಡಿದು ಕರಕುಶಲ ಶ್ರೀಗಂಧದ ಪೆಟ್ಟಿಗೆಯವರೆಗೆ ಪ್ರಧಾನಿ ಮೋದಿಯವರು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ದಂಪತಿಗೆ 10 ವಿಶೇಷ ವಸ್ತುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಹೌದು, ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ಮೋದಿಯವರು ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ 10 ವಿಶೇಷ ವಸ್ತುಗಳನ್ನು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ದಂಪತಿಗೆ ಗಿಫ್ಟ್‍ ನೀಡಿದ್ದಾರೆ. ವಿಶೇಷವಾಗಿ ಅಮೆರಿಕದ ಪ್ರಥಮ ಮಹಿಳೆ, ಜೊ ಬಿಡೆನ್ ಪತ್ನಿ ಜಿಲ್ ಬಿಡೆನ್‍ಗೆ ಪ್ರಯೋಗಾಲಯದಲ್ಲಿ ತಯಾರಿಸಿದ 7.5 ಕ್ಯಾರೆಟ್‍ನ ಹಸಿರು ವಜ್ರವನ್ನು ಮೋದಿ ಉಡುಗೊರೆಯಾಗಿ ನೀಡಿದ್ದಾರೆ.


PM Modi In US: ಪ್ರಧಾನಿ ಮೋದಿ ಭಾಷಣ ಬಹಿಷ್ಕರಿಸಲು ಮುಂದಾದ ಇಬ್ಬರು ಅಮೆರಿಕ ಸಂಸದರು


ಬಿಡೆನ್ ದಂಪತಿಗೆ ‘ಉಪನಿಷತ್ತಿನ 10 ತತ್ವಗಳು’ ಪುಸ್ತಕದ ಮೊದಲ ಆವೃತ್ತಿ ಹಾಗೂ ಗಣೇಶನ ವಿಗ್ರಹವನ್ನು ಪ್ರಧಾನಿ ಮೋದಿಯವರು ಉಡುಗೊರೆಯಾಗಿ ನೀಡಿದ್ದಾರೆ. ಮೈಸೂರಿನ ಶ್ರೀಗಂಧದ ಮರದ ಕಟ್ಟಿಗೆಯಲ್ಲಿ ಜೈಪುರದ ಕುಶಲಕರ್ಮಿಯೊಬ್ಬರು ತಯಾರಿಸಿದ ಶ್ರೀಗಂಧದ ಪೆಟ್ಟಿಗೆಯನ್ನು ಬಿಡೆನ್  ದಂಪತಿಗೆ ಗಿಫ್ಟ್ ನೀಡಿದ್ದಾರೆ.


Uttarakhand: ನಾಲೆಗೆ ಕಾರು ಬಿದ್ದು 9 ಮಂದಿ ಸ್ಥಳದಲ್ಲೇ ಸಾವು..!


ಇದೇ ವೇಳೆ ಪ್ರಧಾನಿ ಮೋದಿಯವರಿಗೆ ಜೋ ಬಿಡೆನ್ ಪ್ರಾಚೀನ ಕ್ಯಾಮೆರಾವನ್ನು ಕೊಡುಗೆಯಾಗಿ ನೀಡಿದ್ದಾರೆ. ಜೊತೆಗೆ 20ನೇ ಶತಮಾನದ ಆರಂಭದಲ್ಲಿ ಮಾಡಿದ ಅಮೆರಿಕನ್ ಬುಕ್ ಗ್ಯಾಲರಿ ಕಲಾಕೃತಿ ಮತ್ತು ಹಾರ್ಡ್ ಕವರ್ ಹೊಂದಿರುವ ಅಮೆರಿಕದ ವನ್ಯಜೀವಿ ಫೋಟೋಗಳ ಪುಸ್ತಕವನ್ನು ಸಹ ಗಿಫ್ಟ್ ನೀಡಿದ್ದಾರೆ. ಶ್ವೇತಭವನದಲ್ಲಿ ಪ್ರಧಾನಿ ಮೋದಿಯವರಿಗೆ ಬಿಡೆನ್ ದಂಪತಿ ಆಯೋಜಿಸಿದ್ದ ಔತಣಕೂಟದ ಬಳಿಕ ಈ ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳಲಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.