Watch: ರಾಷ್ಟ್ರಗೀತೆ ಮೊಳಗುತ್ತಿದ್ದಂತೆ ಮಳೆಯಲ್ಲೇ ನೆನಯುತ್ತಾ ನಿಂತ ಪ್ರಧಾನಿ ಮೋದಿ!

PM Narendra Modi standing in Rain: ನರೇಂದ್ರ ಮೋದಿ ಅವರು ಮಳೆಯ ನಡುವೆಯೂ ಭಾರತದ ರಾಷ್ಟ್ರಗೀತೆಗೆ ಗೌರವ ಸೂಚಿಸಿರುವುದು ಗಮನ ಸೆಳೆದಿದೆ. ರಾಷ್ಟ್ರಗೀತೆ ಮೊಳಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಮಳೆಯ ನಡುವೆ ನಿಂತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

Written by - Bhavishya Shetty | Last Updated : Jun 22, 2023, 12:18 PM IST
    • ವಾಷಿಂಗ್ಟನ್ ಡಿಸಿಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ
    • ಮಳೆಯ ನಡುವೆಯೂ ಭಾರತದ ರಾಷ್ಟ್ರಗೀತೆಗೆ ಗೌರವ ಸೂಚಿಸಿರುವುದು ಗಮನ ಸೆಳೆದಿದೆ
    • ನರೇಂದ್ರ ಮೋದಿ ಅವರು ಮಳೆಯ ನಡುವೆ ನಿಂತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್
Watch: ರಾಷ್ಟ್ರಗೀತೆ ಮೊಳಗುತ್ತಿದ್ದಂತೆ ಮಳೆಯಲ್ಲೇ ನೆನಯುತ್ತಾ ನಿಂತ ಪ್ರಧಾನಿ ಮೋದಿ!  title=
: PM Narendra Modi

PM Narendra Modi standing in Rain: ಗುರುವಾರ ಬೆಳಗ್ಗೆ ವಾಷಿಂಗ್ಟನ್ ಡಿಸಿಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಮಳೆಯ ನಡುವೆಯೂ ಭಾರತದ ರಾಷ್ಟ್ರಗೀತೆಗೆ ಗೌರವ ಸೂಚಿಸಿರುವುದು ಗಮನ ಸೆಳೆದಿದೆ. ರಾಷ್ಟ್ರಗೀತೆ ಮೊಳಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಮಳೆಯ ನಡುವೆ ನಿಂತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು, ಶ್ಲಾಘಿಸಲ್ಪಿಟ್ಟಿದೆ.

ಇದನ್ನೂ ಓದಿ: PM Modi US Visit: ಎರಡು ಡಜನ್ ಗೂ ಅಧಿಕ ದಿಗ್ಗಜರ ಜೊತೆಗೆ ಮೋದಿ ಭೇಟಿ, ಟ್ವಿಟ್ಟರ್ ಮಾಲೀಕ ಎಲಾನ್ ಮಸ್ಕ್ ಜೊತೆಗೂ ಭೇಟಿ

ಇನ್ನು ಪ್ರಧಾನಿ ನರೇಂದ್ರ ಮೋದಿ ವಾಷಿಂಗ್ಟನ್ ಡಿಸಿ ತಲುಪುತ್ತಿದ್ದಂತೆ ಟ್ವೀಟ್ ಮಾಡಿದ್ದಾರೆ. "ವಾಷಿಂಗ್ಟನ್ ಡಿಸಿ ತಲುಪಿದೆ. ಭಾರತೀಯ ಸಮುದಾಯದ ಪ್ರೀತಿ ಮತ್ತು ಇಂದ್ರ ದೇವತಾ ಆಶೀರ್ವಾದವು ಆಗಮನವನ್ನು ಇನ್ನಷ್ಟು ವಿಶೇಷಗೊಳಿಸಿದೆ" ಎಂದು ಹೇಳಿದ್ದಾರೆ. ಇನ್ನು ಈ ವಿಡಿಯೋವನ್ನು ಮೊದಲು ಶೇರ್ ಮಾಡಿದ್ದು ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ.

ಇನ್ನು ಈ ಟ್ವೀಟ್ ಗೆ ಅನೇಕ ರೀತಿಯ ಪ್ರತಿಕ್ರಿಯೆಗಳು ಬಂದಿದ್ದು, ಕೆಲವೊಂದಿಷ್ಟನ್ನು ಇಲ್ಲಿ ಹಂಚಿಕೊಳ್ಳಲಾಗಿದೆ. "ಗೌರವ ಮತ್ತು ದೇಶಭಕ್ತಿಯ ಗಮನಾರ್ಹ ಪ್ರದರ್ಶನ ಇದು. ಪ್ರಧಾನಿ ಮೋದಿ ಅವರು ಯುನೈಟೆಡ್ ಸ್ಟೇಟ್ಸ್ ಗೆ ಆಗಮಿಸಿದಾಗ ರಾಷ್ಟ್ರಗೀತೆಯನ್ನು ಗೌರವಿಸಲು ಮಳೆಯನ್ನು ಸಹ ಲೆಕ್ಕಿಸಲಿಲ್ಲ" ಎಂದು ಟ್ವಿಟರ್ ಬಳಕೆದಾರರು ಬರೆದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಜೂನ್ 22 ರಂದು ಅಂದರೆ ಇಂದು ವಾಷಿಂಗ್ಟನ್ ಡಿಸಿಗೆ ಪ್ರವಾಸ ಕೈಗೊಂಡಿದ್ದಾರೆ. ಶ್ವೇತಭವನದಲ್ಲಿ ಪ್ರಧಾನಿಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಪ್ರಥಮ ಮಹಿಳೆ ಜಿಲ್ ಬೈಡೆನ್ ಭವ್ಯ ಸ್ವಾಗತ ಕೋರಿದ್ದಾರೆ.

ಇದನ್ನೂ ಓದಿ: Video Viral: ಗಾಯಕರನ್ನು ಮೀರಿಸುವಂತಿತ್ತು ಈ ಪೊಲೀಸ್ ಅಧಿಕಾರಿ ಹಾಡು; ಇಲ್ಲಿದೆ ನೋಡಿ ವಿಡಿಯೋ ..!

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

 

Trending News