ನವದೆಹಲಿ: ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಬಾಂಧವ್ಯವನ್ನು ಹೆಚ್ಚಿಸುವ ಪ್ರಧಾನಿ ಮೋದಿ ಪ್ರಯತ್ನಕ್ಕೆ ಯುಎಇಯ ಅತ್ಯುನ್ನತ ನಾಗರಿಕ ಪ್ರಶಸ್ತಿ 'ಆರ್ಡರ್ ಆಫ್ ಜಾಯೆದ್'  ನ್ನು ನೀಡಿ ಗೌರವಿಸಲಾಯಿತು.ಈ ಹಿಂದೆ ಈ ಪ್ರಶಸ್ತಿಯನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ರಾಣಿ ಎಲಿಜಬೆತ್ II ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸೇರಿದಂತೆ ಹಲವಾರು ವಿಶ್ವ ನಾಯಕರಿಗೆ ನೀಡಲಾಗಿದೆ.



COMMERCIAL BREAK
SCROLL TO CONTINUE READING

"ಯುಎಇ ಸಂಸ್ಥಾಪಕ ತಂದೆ ಶೇಖ್ ಜಾಯೆದ್ ಬಿನ್ ಸುಲ್ತಾನ್ ಅಲ್ ನಹ್ಯಾನ್ ಅವರ ಹೆಸರಿನಲ್ಲಿ ಈ ಪ್ರಶಸ್ತಿ ವಿಶೇಷ ಮಹತ್ವವನ್ನು ಪಡೆದುಕೊಂಡಿದೆ, ಇದನ್ನು ಶೇಖ್ ಜಾಯೆದ್ ಅವರ ಜನ್ಮ ಶತಮಾನೋತ್ಸವದ ವರ್ಷದಲ್ಲಿ ಪ್ರಧಾನಿ ಮೋದಿಯವರಿಗೆ ನೀಡಲಾಯಿತು" ಎಂದು ವಿದೇಶಾಂಗ ಸಚಿವಾಲಯ (ಎಂಇಎ ) ಅವರ ಭೇಟಿಯ ಮುನ್ನ ಹೇಳಿಕೆಯಲ್ಲಿ ತಿಳಿಸಿದೆ.ಏಪ್ರಿಲ್‌ನಲ್ಲಿ ಯುಎಇ ದೇಶದ ಅತ್ಯುನ್ನತ ಪ್ರಶಸ್ತಿಯನ್ನು ಮೋದಿಗೆ ನೀಡುವುದಾಗಿ ಘೋಷಿಸಿತ್ತು.


ಭಾರತ, ಯುಎಇ ಸಾಂಸ್ಕೃತಿಕ, ಧಾರ್ಮಿಕ ಮತ್ತು ಆರ್ಥಿಕ ಸಂಪರ್ಕಗಳಿಂದಾಗಿ ನಿಕಟ ಮತ್ತು ಬಹುಮುಖಿ ಸಂಬಂಧಗಳನ್ನು ಹೊಂದಿವೆ, ಆಗಸ್ಟ್ 2015 ರಲ್ಲಿ ಪ್ರಧಾನ ಮಂತ್ರಿಯ ಯುಎಇಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಮಗ್ರ ಕಾರ್ಯತಂತ್ರದ ಸಹಭಾಗಿತ್ವ ದ್ವಿಗುಣಗೊಂಡಿತು ಎಂದು ಹೇಳಿದೆ.



"ಯುಎಇಯಲ್ಲಿ 3.3 ಮಿಲಿಯನ್ ಪ್ರಬಲ ಭಾರತೀಯ ಸಮುದಾಯವು ನಮ್ಮ ಎರಡು ಸ್ನೇಹಪರ ರಾಷ್ಟ್ರಗಳ ನಡುವಿನ ಜನರಿಂದ ಜನರ ಸಂಪರ್ಕವನ್ನು ಪೋಷಿಸುತ್ತದೆ" ಎಂದು ಎಂಇಎ ಹೇಳಿದೆ, ಮೋದಿಯ ಭೇಟಿಯು ಸ್ನೇಹಪರ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುತ್ತದೆ ವಿದೇಶಾಂಗ ಇಲಾಖೆ ಹೇಳಿದೆ.