ಪೆರು: Lip-Lock Bribe: ಕರೋನಾ ವೈರಸ್ ಸೋಂಕು ಇಡೀ ಜಗತ್ತಿಗೆ ಇಂದಿಗೂ ಕೂಡ ತಲೆನೋವಾಗಿದೆ. ಕರೋನಾ ವೈರಸ್ ಸೋಂಕನ್ನು ತಡೆಗಟ್ಟುವ ಸಲುವಾಗಿ, ಅನೇಕ ದೇಶಗಳು ಅನೇಕ ಕಠಿಣ ನಿಯಮಗಳನ್ನು ಜಾರಿಗೆ ತಂದಿವೆ ಮತ್ತು ಲಾಕ್‌ಡೌನ್ ವಿಧಿಸಿವೆ. ಈ ನಿಯಮಗಳನ್ನು ಒಪ್ಪದ ಜನರು ಸಾಕಷ್ಟು ಕಷ್ಟ ಪಡುತ್ತಿದ್ದಾರೆ ಹಾಗೂ ಅವರಿಗೆ ದಂಡ ಕೂಡ ವಿಧಿಸಲಾಗುತ್ತಿದೆ. ಏತನ್ಮಧ್ಯೆ, ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವೊಂದು ಭಾರಿ ವೈರಲ್ ಆಗುತ್ತಿದ್ದು ಇದರಲ್ಲಿ ಒಬ್ಬ ಪ್ಲೀಸ್ ಪೇದೆ ಮಹಿಳೆಯನ್ನು ಲಿಪ್ ಲಾಕ್  ಮಾಡುವುದನ್ನು ನೀವು ಕಾಣಬಹುದು.


COMMERCIAL BREAK
SCROLL TO CONTINUE READING

ಪೋಲೀಸ್ ಸಿಬ್ಬಂದಿಗೆ ಸಿಕ್ತು ವಿಶಿಷ್ಟ ಲಂಚ
ದಕ್ಷಿಣ ಅಮೆರಿಕಾದ ಮಹಾದ್ವೀಪ  ಪೆರುವಿನಲ್ಲಿ, ಕರೋನಾ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪೊಲೀಸ್ ಸಿಬ್ಬಂದಿ ಮಹಿಳೆಯನ್ನು ಹಿಡಿದಿದ್ದಾನೆ. ಇದಕ್ಕಾಗಿ ಮಹಿಳೆಯ ವಿಶಿಷ್ಟ ರೀತಿಯಲ್ಲಿ ಲಂಚ ನೀಡಿದ್ದಾಳೆ. ಆದರೆ, ಆಕೆಯ ಮೇಲೆ ಯಾವುದೇ ರೀತಿಯ ಕ್ರಮ ಜರುಗಿಸಲಾಗಿಲ್ಲ.  ಇನ್ನೊಂದೆಡೆ ಈ ವಿಶಿಷ್ಟ ಲಂಚ ಪಡೆದ ಪೋಲೀಸ್ ಪೇದೆಯ ಮೇಲೆ ಕ್ರಮ ಜರುಗಿಸಲಾಗಿದೆ. ವಾಸ್ತವವಾಗಿ, ಪೆರುವಿನಲ್ಲಿ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ  ಮಹಿಳೆಯೊಬ್ಬರು ಪೇದೆಗೆ ಲಿಪ್ ಲಾಕ್ ಮಾಡಿದ್ದಾರೆ. ಇದಾದ ಬಳಿಕ ಆ ಪೇದೆ ಮಹಿಳೆಯನ್ನು ಬಿಟ್ಟಿದ್ದಾನೆ. ಈ ಪ್ರಕರಣದಿಂದ ಇದೀಗ ಪೋಲೀಸ್ ಸಿಬ್ಬಂದಿ ತೊಂದರೆಗೆ ಸಿಲುಕಿದ್ದಾನೆ.


ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ವೀಡಿಯೊ
ಈ ಘಟನೆ ಪೆರುವಿನ ರಾಜಧಾನಿಯಾದ ಲಿಮಾದ ಮಿರಾಫ್ಲೋರ್ಸ್ ಬೋರ್ಡೆಕ್ಸ್ ಪ್ರದೇಶದಿಂದ ವರದಿಯಾಗಿದೆ. ಪೋಲೀಸ್ ಪೇದೆ ಮಹಿಳೆಯನ್ನು ಮುತ್ತಿಕ್ಕಿ ಆಕೆಯನ್ನು ಹಾಗೆಯೇ ಬಿಡುತ್ತಿದ್ದ ವೇಳೆ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್ ನಲ್ಲಿ ಅದರ ಚಿತ್ರೀಕರಣ ನಡೆಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಮಾಧ್ಯಮಕ್ಕೆ ಲಗ್ಗೆ ಇಟ್ಟಿದ್ದು ಭಾರಿ ವೈರಲ್ (Viral) ಆಗುತ್ತಿದೆ.


ಇದನ್ನೂ ಓದಿ-ಸತ್ತ ನಂತರ ಮಗುವಿಗೆ ಜನ್ಮ ನೀಡಿದ ಮಹಿಳೆ!


ಪೋಲೀಸ್ ಪೇದೆ ಸಸ್ಪೆಂಡ್
ಸ್ಥಳೀಯ ಟಿವಿ ಚಾನಲ್ ವೊಂದು ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೋ ಬಿಡುಗಡೆ ಮಾಡಿದೆ. ಈ ವಿಡಿಯೋ ಪ್ರಕಟಗೊಂಡ ಬಳಿಕ ಸ್ಥಳೀಯ ಆಡಳಿತ ತೀವ್ರ ಕ್ರಮ ಕೈಗೊಂಡು ಪ್ರಕರಣದಲ್ಲಿ ತನಿಖೆಗೆ ಆದೇಶಿಸಿದೆ.  ಇನ್ನೊಂದೆಡೆ ಕೆಲಸದಲ್ಲಿ ನಿರ್ಲಕ್ಷ ಧೋರಣೆ ತಳೆದ ಪೋಲೀಸ್ ಪೇದೆಯನ್ನು ಸಸ್ಪೆಂಡ್ ಮಾಡಲಾಗಿದೆ.


ಇದನ್ನೂ ಓದಿ- ಎಚ್ಚರಿಕೆ! ವಿಶ್ವದ ಅತ್ಯಂತ ಅಪಶಕುನಿ Mobile Number ಇದು


ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಪೋಲೀಸ್ ಪೇದೆ ಕೊವಿಡ್ ನಿಯಮ ಉಲ್ಲಂಘಿಸಿದ ಮಹಿಳೆಯ ಜೊತೆಗೆ ಏನನ್ನೋ ನೋಟ್ ಮಾಡುತ್ತಿದ್ದಾನೆ. ಬಳಿಕ ಇಬ್ಬರಲ್ಲಿ ಮಾತುಕತೆ ನಡೆದಿದೆ ಹಾಗೂ ಬಳಿಕ ಪೋಲೀಸ್ ಪೇದೆ ತನ್ನ ಮಾಸ್ಕ್ ಅನ್ನು ಕೆಳಗಿಳಿಸಿ ಕಿಸ್ ಮಾಡುತ್ತಾನೆ. ನಂತರ ಆ ಮಹಿಳೆಯನ್ನು ಬಿಟ್ಟು ಬಿಡುತ್ತಾನೆ.


ಇದನ್ನೂ ಓದಿ - Girls To Turn Into Boys: ಈ ಗ್ರಾಮದ ಹುಡುಗಿಯರು ಕ್ರಮೇಣ ಹುಡುಗರಾಗುತ್ತಾರಂತೆ. ಇಲ್ಲಿದೆ ಈ ವಿಶಿಷ್ಠ ಗ್ರಾಮದ ಕಥೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.