ಈ ಒಂದು ಷರತ್ತಿನ ಮೇರೆಗೆ ಜೋ ಬಿಡೆನ್ ಗೆಲುವು ಒಪ್ಪಿಕೊಳ್ಳುವುದಾಗಿ ಹೇಳಿದ ಟ್ರಂಪ್..!
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಮೊದಲ ಬಾರಿಗೆ ಜೋ ಬಿಡೆನ್ ಅವರು ಯುಎಸ್ ಚುನಾವಣೆಯ ವಿಜೇತರನ್ನು ಅಧಿಕೃತವಾಗಿ ಧೃಡಿಕರಿಸಿದರೆ ಅವರು ಶ್ವೇತಭವನ ತೊರೆಯುವುದಾಗಿ ಹೇಳಿದರು.ಈಗಾಗಲೇ ಟ್ರಂಪ್ ಹಲವು ಆಧಾರರಹಿತ ಆರೋಪಗಳನ್ನು ಮಾಡಿರುವುದಲ್ಲದೆ ಅವರು ಕೋರ್ಟ್ ಗಳಲ್ಲಿಯೂ ಕೂಡ ಚುನಾವಣಾ ಫಲಿತಾಂಶವನ್ನು ಪ್ರಶ್ನಿಸಿದ್ದಾರೆ.
ನವದೆಹಲಿ: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಮೊದಲ ಬಾರಿಗೆ ಜೋ ಬಿಡೆನ್ ಅವರು ಯುಎಸ್ ಚುನಾವಣೆಯ ವಿಜೇತರನ್ನು ಅಧಿಕೃತವಾಗಿ ಧೃಡಿಕರಿಸಿದರೆ ಅವರು ಶ್ವೇತಭವನ ತೊರೆಯುವುದಾಗಿ ಹೇಳಿದರು.ಈಗಾಗಲೇ ಟ್ರಂಪ್ ಹಲವು ಆಧಾರರಹಿತ ಆರೋಪಗಳನ್ನು ಮಾಡಿರುವುದಲ್ಲದೆ ಅವರು ಕೋರ್ಟ್ ಗಳಲ್ಲಿಯೂ ಕೂಡ ಚುನಾವಣಾ ಫಲಿತಾಂಶವನ್ನು ಪ್ರಶ್ನಿಸಿದ್ದಾರೆ.
ಟ್ರಂಪ್ ಒಪ್ಪಿಕೊಳ್ಳದಿದ್ದರೂ ಜ.20 ರಂದು ಜೋ ಬಿಡನ್‌ಗೆ @POTUS ಖಾತೆ ಹಸ್ತಾಂತರಿಸಲಿದೆ ಟ್ವಿಟರ್..!
ನವೆಂಬರ್ 3 ರ ಮತದಾನದ ನಂತರ ಸುದ್ದಿಗಾರರಿಂದ ಅವರ ಮೊದಲ ಪ್ರಶ್ನೆಗಳಿಗೆ ಉತ್ತರಿಸಿದ ಟ್ರಂಪ್, ಜನವರಿ 20 ರಂದು ಬಿಡೆನ್ ಪ್ರಮಾಣವಚನ ಸ್ವೀಕರಿಸುವ ಮೊದಲು ಅವರು ಕೇವಲ ಒಂದು ಅವಧಿಗೆ ಮಾತ್ರ ಅಧಿಕಾರದಲ್ಲಿರುತ್ತಾರೆ ಎಂದು ಒಪ್ಪಿಕೊಂಡರು.ಇದೆ ವೇಳೆ ಬಿಡೆನ್ ಗೆಲುವನ್ನು ಧೃಡಿಕರಿಸಿದರೆ ವೈಟ್ ಹೌಸ್ ನ್ನು ತೊರೆಯುತ್ತಿರಾ ಎಂದು ಪ್ರಶ್ನಿಸಿದ್ದಕ್ಕೆ ಉತ್ತರಿಸಿದ ಟ್ರಂಪ್, ಖಂಡಿತವಾಗಿ ಒಪ್ಪಿಕೊಳ್ಳುವುದಾಗಿ ಹೇಳಿದರು. ಇನ್ನು ಮುಂದುವರೆದು ಒಂದು ವೇಳೆ ಹಾಗೆ ಮಾಡಿದರೆ ಅವರು ತಪ್ಪು ಮಾಡಲಿದ್ದಾರೆ, ಇದನ್ನು ಒಪ್ಪಿಕೊಳ್ಳುವುದು ತುಂಬಾ ಕಷ್ಟಕರ ಎಂದರು ಅಷ್ಟೇ ಅಲ್ಲದೆ, ಈಗ ಮತ್ತು ಜನವರಿ 20 ರ ನಡುವೆ ಸಾಕಷ್ಟು ಬೆಳವಣಿಗೆಗಳು ನಡೆಯಲಿವೆ ಎಂದು ಅವರು ಹೇಳಿದರು.
ಚುನಾವಣೆಯಲ್ಲಿ ಸೋತರೂ ಎರಡನೇ ಅವಧಿಗೆ ಅಧ್ಯಕ್ಷರಾಗಲಿದ್ದಾರೆ ಟ್ರಂಪ್...!
ಶ್ವೇತಭವನದ ವಿಜೇತರನ್ನು ನಿರ್ಧರಿಸುವ ಎಲೆಕ್ಟರಲ್ ಕಾಲೇಜು ಡಿಸೆಂಬರ್ 14 ರಂದು ಬಿಡೆನ್ ಅವರ ವಿಜಯವನ್ನು ಧೃಡಿರಿಸಲು ಸಭೆ ಸೇರಲಿದ್ದಾರೆ. ಈಗಾಗಲೇ ಘೋಷಣೆಯಾಗಿರುವ ಫಲಿತಾಂಶದ ಪ್ರಕಾರ ಟ್ರಂಪ್ಗೆ 232 ಹಾಗೂ ಬಿಡೆನ್ 306 ಮತಗಳನ್ನು ಪಡೆದಿದ್ದಾರೆ.