ನವದೆಹಲಿ: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚುನಾವಣೆಯಲ್ಲಿ ತಮ್ಮ ಸೋಲಿನ ಹೊರತಾಗಿಯೂ ಎರಡನೇ ಅವಧಿಗೆ ಸೇವೆ ಸಲ್ಲಿಸಲು ಶ್ವೇತಭವನ ಯೋಜಿಸುತ್ತಿದೆ ಎಂದು ಉನ್ನತ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
'ಎರಡನೇ ಟ್ರಂಪ್ ಅವಧಿ ಇರುತ್ತದೆ ಎಂಬ ಊಹೆಯ ಮೇರೆಗೆ ನಾವು ಇಲ್ಲಿ ಶ್ವೇತಭವನದಲ್ಲಿ ಮುಂದುವರಿಯುತ್ತಿದ್ದೇವೆ" ಎಂದು ಅಧ್ಯಕ್ಷರ ವ್ಯಾಪಾರ ಸಲಹೆಗಾರ ಪೀಟರ್ ನವರೊ ಫಾಕ್ಸ್ ಬಿಸಿನೆಸ್ ನೆಟ್‌ವರ್ಕ್‌ನಲ್ಲಿ ತಿಳಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಸ್ಥಾನ ತೊರೆಯುತ್ತಿದ್ದಂತೆ ಜೈಲು ಪಾಲಾಗ್ತಾರಾ ಡೊನಾಲ್ಡ್ ಟ್ರಂಪ್...?
ನವೆಂಬರ್ 3 ರ ಅಧ್ಯಕ್ಷೀಯ ಚುನಾವಣೆಯಲ್ಲಿ ತಮ್ಮ ಡೆಮಾಕ್ರಟಿಕ್ ಸ್ಪರ್ಧಿ ಜೋ ಬಿಡನ್ ಟ್ರಂಪ್ ಅವರನ್ನು ಸೋಲಿಸಿದರೂ ಕೂಡ ಇನ್ನೂ ಟ್ರಂಪ್ ಸೋಲನ್ನು ಒಪ್ಪಿಕೊಂಡಿಲ್ಲ. ಚುನಾವಣೆಯಲ್ಲಿ ಆಕ್ರಮ ನಡೆದಿದೆ ಎಂದು ಸಹ ಅವರು ಆರೋಪಿಸಿದ್ದರು.
ಆದರೆ ಅಮೆರಿಕದ ಹಿರಿಯ ಫೆಡರಲ್ ಮತ್ತು ರಾಜ್ಯ ಚುನಾವಣಾ ಅಧಿಕಾರಿಗಳು ಗುರುವಾರ ಹ್ಯಾಕರ್‌ಗಳು ಮತವನ್ನು ಹಾಳುಮಾಡಲು ಸಮರ್ಥರಾಗಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿದ್ದಾರೆ ಮತ್ತು ಬಹುತೇಕ ವಿಶ್ವದ ನಾಯಕರು ಬಿಡೆನ್ ಅವರ ವಿಜಯವನ್ನು ಅಭಿನಂದಿಸಿದ್ದಾರೆ.